ಪುತ್ತೂರು : ಆಕ್ಸಲರೇಟ್ ಆದ ಸರಣಿ ಅಭಿವೃದ್ಧಿ ಕಾರ್ಯಗಳು
ಪುತ್ತೂರು ತಾಲೂಕಿನಲ್ಲಿ ಅಭಿವೃದ್ಧಿ ಕಾಯಕ್ರಮಗಳ ಸರಣಿ ಪ್ರಾರಂಭವಾಗಿದೆ. ಪುತ್ತೂರು – ಉಪ್ಪಿನಂಗಡಿ ಚತುಷ್ಪಥ ರಸ್ತೆ ಪುತ್ತೂರಿನ ಜನರ ಬಹುದಿನಗಳ ನಿರೀಕ್ಷೆಯಾಗಿತ್ತು. ಅದೀಗ ನೆರವೇರುವ ಹಂತ ಬಂದಿದೆ. ಪುತ್ತೂರಿನ ಶಾಶಕರಾದ ಶ್ರೀ ಸಂಜೀವ ಮಠ೦ದೂರುರವರು ನಿನ್ನೆ, 18/11/19 ರಂದು ಚತುಷ್ಪಥ ರಸ್ತೆ ಕಾಮಗಾರಿಗೆ ನಗರದ ಕೆಮ್ಮಾಯಿಯಲ್ಲಿ ಚಾಲನೆ ನೀಡಿದ್ದಾರೆ. ಒಟ್ಟು ಹನ್ನೆರಡು ಕೋಟಿ ರೂಪಾಯಿ ವೆಚ್ಚದಲ್ಲಿ 3.5 ಕಿಲೋಮೀಟರು ರಸ್ತೆಯನ್ನು ಚತುಷ್ಪಥವಾಗಿ ಮಾಡುವ ಪ್ಲಾನ್ ಹಾಕಿಕೊಳ್ಳಲಾಗಿದೆ. ಒಂದು ವರ್ಷದೊಳಗೆ ಕಾಮಗಾರಿ ಮುಗಿದು ಜನರಿಗೆ ಪ್ರಯಾಣಕ್ಕೆ ದೊರಕುವ ಸಂಭವವಿದೆ.
ಮೊನ್ನೆ, 17/11/19 ರಂದು ನೆಕ್ಕಿಲಾಡಿಯ ತಾಳೆಹಿತ್ತಿಲು- ಮೈಂದಡ್ಕ ರಸ್ತೆ ಉದ್ಘಾಟನೆಗೊಂಡಿತ್ತು.
ಪುತ್ತೂರು ತಾಲೂಕಿನಲ್ಲಿ ಒಟ್ಟು 100 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಈಗಾಗಲೇ ಬಿಡುಗಡೆಯಾದದ್ದು ನೂರು ಕೋಟಿ. ಕೆಲಸ ಮಾಡುವುದೇ ರಾಜಕೀಯದ ಉದ್ದೇಶವಾದಾಗ ಆಗ ಒಳ್ಳೆಯ ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದನ್ನವು ಪುತ್ತೂರಿನ ಶಾಶಕರು ಶ್ರೀ ಸಂಜೀವ ಮಠ೦ದೂರುರವರು ತೋರಿಸಿಕೊಟ್ಟಿದ್ದಾರೆ. ಹೀಗೆ ಯಾವುದೇ ತಾರತಮ್ಯ ಮಾಡದೆ, ಸಮಗ್ರ ‘ಪ್ರಿಯೋಟೆರೈಝಷನ್ ಮ್ಯಾಟ್ರಿಕ್ಸ್’ ನ ವೈಜ್ಞಾನಿಕ ವಿಧಾನದಿಂದ ‘ ಸಮಗ್ರ ಪುತ್ತೂರು – ಒಂದು ಪುತ್ತೂರು’ ದೃಷ್ಟಿಯಲ್ಲಿ ಅಭಿವೃದ್ಧಿ ಕಾರ್ಯ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರವಿದ್ದ ಕಾಲದಲ್ಲಿ ಸ್ವಲ್ಪ ಸೊರಗಿದ್ದ ಕೆಲಸಕಾರ್ಯಗಳಿಗೆ ಈಗ ಎಲ್ಲಿಲ್ಲದ ಬಲ ಬಂದಿದೆ.
ಕುಕ್ಕುಪುಣಿ ರಸ್ತೆ, ಮುಡುಪಿನಡ್ಕರಸ್ತೆ, ಅಂಚಿನಡ್ಕ, ಹಂತ್ಯಾರ್ ಬೆಟ್ಟಂಪಾಡಿ ರಸ್ತೆ, ದೇವಸ್ಯ ರಸ್ತೆ, ಚೆಲ್ಲಡ್ಕ ರಸ್ತೆ, ಕಾಲು ಸಂಕ ನಿರ್ಮಾಣ,ರಸ್ತೆ ಸುಧಾರಣೆ ಯೋಜನೆಗಳು, ಕಾಲೇಜು ಕೊಠಡಿ ನಿರ್ಮಾಣ, ರಸ್ತೆ ಮತ್ತು ಸೇತುವೆ ಅಭಿವೃದ್ಧಿ, ಶಾಲಾ ಕಟ್ಟಡ ನಿರ್ಮಾಣ, ಮತ್ತಿತರ ರಸ್ತೆ ದುರಸ್ಥಿ, ತಡೆಗೋಡೆ ನಿರ್ಮಾಣ ಮತ್ತು ಗ್ರಾಮೀಣ ರಸ್ತೆ ಮೇಲ್ಮಟ್ಟಕ್ಕೆ-ಮುಂತಾದವು ಪುತ್ತೂರಿನಲ್ಲಾದ ಪ್ರಮುಖ ಕಾರ್ಯಗಳು.
ಇವುಗಳ ಜತೆಗೆ ಮಳೆಹಾನಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸೂಕ್ತವಾಗಿ ಸ್ಪಂದಿಸಿದ್ದು, 25 ಕೋಟಿ ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಮಳೆಹಾನಿ ನಿರ್ವಹಣೆಯಲ್ಲಿ ಪುತ್ತೂರು ಕ್ಷೇತ್ರ ಮುಂದಿದೆ.
ಶಾಶಕರ ಹಿಟ್ ಲಿಸ್ಟ್ ನಲ್ಲಿ ಕೆಳಗಿನ ಪ್ರಯಾರಿಟಿಗಳು
- ಬೀರಮಲೆ ಪ್ರಾಜೆಕ್ಟ್
- ಬೆಂದ್ರ್ ತೀರ್ಥ
- ರಿಂಗ್ ರೋಡ್ 24 ಗಂಟೆ ವಿದ್ಯುತ್
- ಪುತ್ತೂರು ಜಿಲ್ಲಾ ಕೇಂದ್ರಕ್ಕೆ ಪ್ರಯತ್ನ
- ಮಾಣಿಯಿಂದ ಸಂಪಾಜೆಯವರೆಗೆ ರಸ್ತೆ ಡಾಂಬರೀಕರಣ
- ಎಸ್ಪಿ ಖಚೇರಿ ಸ್ಥಳಾಂತರ
- ತಾಲೂಕು ಕ್ರೀಡಾಂಗಣ ಮೊಟ್ಟೆತ್ತಡ್ಕಕ್ಕೆ ಸ್ಥಳಾಂತರ
- ಶೀಘ್ರ ನಗರಸಭೆ ಆಡಳಿತ
- ಮೆಸ್ಕಾಂ ಸಬ್ಸ್ಟೇಶನ್ ಕಾರ್ಯ ಪೂರ್ಣ
- ಪುತ್ತೂರಿಗೆ ಭೂಗತ ಡ್ರೈನೇಜ್ ಮಾಡುವ ಸಂಕಲ್ಪ
- ಮೆಸ್ಕಾಂ ಭೂಗತ ಕೇಬಲ್ ವಾರದ ಒಳಗೆ ಬಳಕೆಗೆ
- ನಗರಸಭೆಗೆ ನೂತನ ಕಚೇರಿ ಉದ್ಘಾಟನೆ