Elections: ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಈಗ ಅರ್ಹರು
ಕರ್ನಾಟಕದ ರಾಜಕೀಯ ಮತ್ತೆ ಬಿರುಸುಗೊಂಡಿದೆ. ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ 17 ಜನ ಅತೃಪ್ತ ಶಾಶಕರ ಭವಿಷ್ಯ ಇವತ್ತಿನಿಂದ ಅವರ ಕೈಯಲ್ಲಿದೆ. ಅವರ ಕೈಲಿದೆ ಅಂತಲೂ ಅನ್ನಬಹುದು ಅಥವಾ ಜನರ ಕೈಲಿದೆ ಅಂತ ಹೇಳುವುದು ಇನ್ನಷ್ಟು ಸೂಕ್ತ. ಎಷ್ಟೇ ಆದರೂ ಅವ್ರಿಗೆ ಓಟು ಕೊಟ್ಟು ಗೆಲ್ಲಿಸೋದು ಜನರೇ ತಾನೇ?
ಸುಪ್ರೀಂ ಕೋರ್ಟು ಎಲ್ಲ 17 ಜನ ಶಾಶಕರನ್ನು ಅಮಾನತ್ತು ಮಾಡಿದ ಸ್ಪೀಕರ್ ಅವರ ಆದೇಶವನ್ನು ಮೇಲಕ್ಕೆತ್ತಿ ಹಿಡಿದಿದ್ದಾರೆ. ಆದರೆ ಸ್ಪೀಕರ್ ಅವರು, ಇನ್ನು ಮೂರೂವರೆ ವರ್ಷ ಗಳು ಈ ಶಾಶಕರುಗಳು ಸ್ಪರ್ಧಿಸದಂತೆ ಮಾಡಿದ ಆದೇಶವನ್ನು ತಿರಸ್ಕರಿದ್ದಾರೆ. ಸ್ಪೀಕರ್ ಅವರಿಗೆ ಹಾಗೆ ಆದೇಶಿಸುವ ಹಕ್ಕಿಲ್ಲ, ಸಂವಿಧಾನದ ಮೇರೇ ಮೀರಿ ಸ್ಪೀಕರ್ ಅವರು ವರ್ತಿಸಿದ್ದಾರೆ ಅಂದಿದ್ದಾರೆ. ಇತ್ತೀಚೆಗೆ ಸ್ಪೀಕರುಗಳು ಸಂವಿಧಾನವನ್ನು ಉಲ್ಲಂಘಿಸುವುದು ಜಾಸ್ತಿಯಾಗುತ್ತಿದೆ. ಅಲ್ಲದೆ ಸುಪ್ರೀಂಕೋರ್ಟು ಈಗ ನಡೆಯುತ್ತಿರುವ ಕುದುರೆವ್ಯಾಪಾರದ ಅನಿಸ್ತದ ಬಗ್ಗೆ ಬೇಸರ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟು ತೀರ್ಪನ್ನು ಎರಡೂ ಕಡೆಯವರು ಸ್ವಾಗತಿಸಿದ್ದಾರೆ. ಸ್ವಾಗತಿಸದೆ ಬೇರೆ ವಿಧಿಯಿಲ್ಲ ಕೂಡ.
ಅನರ್ಹರ ಪಾಲಿಗೆ ತೀರ್ಪು ಸ್ವಲ್ಪ ಸಿಹಿ ಸ್ವಲ್ಪ ಖಾರ. ಆದರೆ ಬಿಜೆಪಿಗೆ ಈ ತೀರ್ಪು ಸಂತಸ ತರುವಂತದ್ದು. ಯಾಕೆಂದರೆ, ಒಂದುವೇಳೆ ಶಾಸಕರ ಅನರ್ಹತೆ ತಪ್ಪುಅಂದಾದಲ್ಲಿ ಶಾಶಕರ ರಾಜೀನಾಮೆಯನ್ನು ಸ್ಪೀಕರ್ ಅವರು ಅಂಗೀಕರಿಸಬೇಕು. ಆದರೆ ಈಗ ಮೂರು ತಿಂಗಳ ನಂತರ ಹಿಂದಿನ ಸ್ಪೀಕರ್ ಇಲ್ಲ. ಆದರಿ೦ದ, ಆ ದಿನಕ್ಕೆ ಅಂದರೆ ಅನರ್ಹತೆ ಆದ ದಿನಕ್ಕೆ ಬ್ಯಾಕ್ ಡೇಟೆಡ್ ಆಗಿ ಅನ್ವಯವಾಗಬೇಕು. ಹಾಗೊಂದು ವೇಳೆ ಸುಪ್ರೀಂ ಕೋರ್ಟು ಅನರ್ಹತೆ ತಪ್ಪು, ಆದುದರಿಂದ ಈಗಿನ ಸ್ಪೀಕರ್ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿ ನಿರ್ಣಯಿಸಲು ಹೇಳಿದ್ದರೆ ಬಿಜೆಪಿಗೆ ಕಷ್ಟವಾಗುತ್ತಿತ್ತು. ಈ 17 ಜನ ಅತೃಪ್ತ ಆತ್ಮಗಳು, ಕಳೆದ ನೂರಾ ಹದಿನೇಳು ದಿನವೂ ಅನುಭವಿಸಿದ ಅತಂತ್ರದಿಂದ ಹೇಗಾದರೂ ಸಾಕಪ್ಪ ಹೊರಬರಾನ, ಈ ಸವಾಸವೇ ಬೇಡ ಎಂದು ರಾಜೀನಾಮೆ ಪಾತ್ರವನ್ನು ವಾಪಸ್ಸು ಪಡೆದರೆ ಬಿಜೆಪಿಗೆ ತಕ್ಷಣಕ್ಕೆ ತೊಂದರೆ ಗ್ಯಾರಂಟಿಯಾಗುತ್ತಿತ್ತು.
ಇವತ್ತಿನ ತೀರ್ಪು ಒಟ್ಟಾರೆಯಾಗಿ ನೋಡಿದಾಗ, ಅನರ್ಹರ ಪರವಾಗೇ ಇದ್ದಂತಿದೆ. ಇವತ್ತಿಗೆ ಅನರ್ಹರಾದರೂ ಅವರು ಚುನಾವಣೆಗೆ ನಿಲ್ಲಬೇಕಾಗುತ್ತದೆ. ರಾಜೀನಾಮೆ ಅವತ್ತೇ ಸ್ವೀಕಾರವಾಗಿದ್ದರೂ ಚುನಾವಣೆಗೆ ಹೋಗಬೇಕಾಗುತ್ತಿತ್ತು. ಅಂದೇ ರಾಜೀನಾಮೆ ಅಂಗೀಕಾರವಾಗಿದ್ದರೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಋಣ ಸಂದಾಯವಾಗಿ ಮಂತ್ರಿಪದವಿ ಪಡೆದುಕೊಂಡು ಚುನಾವಣೆಗೆ ನಿಂತಿರುತ್ತಿದ್ದರು. ಅಷ್ಟು ಮಾತ್ರದ ಅಡ್ವಾಂಟೇಜ್ ಆಗ ಅತೃಪ್ತರಿಗೆ ಇರುತ್ತಿತ್ತು.
ವಸ್ತುಸ್ಥಿತಿಯಲ್ಲಿ ಆನಂದ್ ಸಿಂಗ್ ಎಲ್ಲರಿಗಿಂತ ಮೊದಲೇ ರಾಜೀನಾಮೆ ಸಲ್ಲಿಸಿದ್ದರು. ಮತ್ತವರು ಮುಂಬೈನ ರೆಸಾರ್ಟ್ ಗೆ ಹೋಗಿರಲಿಲ್ಲ. ಕೆಪಿಜೆಪಿ ಪಕ್ಷದ ಆರ್ ಶಂಕರ್ ಅವರದ್ದು ಇನ್ನೊಂದು ಕತೆ. ಅವರಿಬ್ಬರ ಕೇಸಲ್ಲಿ ಬೇರೆ ತೀರ್ಪು ಬರಬೇಕಿತ್ತು. ಆದರೆ ಸುಪ್ರೀಂ ಕೋರ್ಟು ಎಲ್ಲ 17 ಜನರನ್ನೂ ಸಮಾನವಾಗಿ ನೋಡಿದೆ.
ಈಗ ಎಲ್ಲ ಮುಗಿದಿದೆ; ಈಗ ತಾನೇ ಮಳೆ ಬಿದ್ದು ನೀರೆಳೆದುಕೊಂಡ ಕೆಸರು ಭೂಮಿಗೆ ಲೊಕೇಷನ್ ಶಿಫ್ಟ್ ಆಗಿದೆ. ಅತೃಪ್ತರಿಗೆ ಇನ್ನು ಉಳಿದಿರುವುದು ಬಿಜೆಪಿಯ ಬಿ ಫಾರಂ ಪಡೆದುಕೊಂಡು ಯುದ್ಧ ಭೂಮಿಗೆ ಧುಮುಕುವುದು ಮಾತ್ರ.