Gandhi Jayanti : ಬಿಜೆಪಿಯಿಂದ ಮಹಾತ್ಮಾಗಾಂಧಿಯ 150 ನೆಯ ಜಯಂತಿ ಅರ್ಥಪೂರ್ಣ ಆಚರಣೆ

150th Mahatma Gandhi Jayanti celebration by BJP

ರಾಷ್ಟ್ರಪಿತ ಮಹಾತ್ಮಾಗಾಂಧಿ ಹುಟ್ಟಿ 2019 ಕ್ಕೆ 150 ವರ್ಷಗಳು. ಮಾಮೂಲಾದರೆ ಒಂದು ಜಯಂತಿಯನ್ನು ಒಂದು ದಿನದ ಸಭಾ ಕಾರ್ಯಕ್ರಮವಾಗಿ ಆಚರಿಸಿಕೊಳ್ಳುವುದು ಎಲ್ಲಾ ರಾಜಕೀಯ ಪಕ್ಷಗಳು ಮಾಡುವ ಕೆಲಸ. ಆದರೆ ಬಿಜೆಪಿ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ದೇಶಾದ್ಯಂತ ಹಮ್ಮಿಕೊಂಡಿದೆ. ಅದುವೇ ಕನಿಷ್ಠ 150 ಕಿಲೋಮೀಟರುಗಳ ಅರ್ಥಪೂರ್ಣ ಪಾದಯಾತ್ರೆ.

ಇದನ್ನು ಅರ್ಥಪೂರ್ಣ ಅಂತ ಯಾಕನ್ನುತ್ತಿದ್ದೇವೆ ಅಂದರೆ, ಈ ಪಾದಯಾತ್ರೆ ಕೇವಲ ಒಂದು ದಿನ ನಡೆಸಿ ನಿಲ್ಲುವಂತದ್ದಲ್ಲ. ಸುಮಾರು 20- 30  ದಿನಗಳು ಈ ಪಾದಯಾತ್ರೆ ಶಾಶಕರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ನಡೆಯಲಿದೆ. 10 ರಿಂದ 15 ಕಿಲೋಮೀಟರುಗಳ ಪಾದಯಾತ್ರೆ ದಾರಿಯುದ್ದಕ್ಕೂ ಸ್ವಚ್ಛತಾ ಕಾರ್ಯಕ್ರಮ, ಸ್ವಚ್ಛತೆಯ ಬಗ್ಗೆ ಅರಿವು ಮತ್ತು ಅಗತ್ಯತೆಯನ್ನು ಮನಗಾಣಿಸುವುದು, ಮಧ್ಯೆ ಮಧ್ಯೆ ಗಾಂಧೀಜಿ ಅವರು ತುಂಬಾ ಪ್ರೀತಿಸುತ್ತಿದ್ದ ಗೋ ಪೂಜೆ, ಗಿಡ ನೆಡುವ ಕಾರ್ಯಕ್ರಮ ಹೀಗೆ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ. ಮುಖ್ಯವಾಗಿ, 20 ರಿಂದ 30 ದಿನಗಳು ನಡೆಯುವ ಇಂತಹಾ ಕಾರ್ಯಕ್ರಮಗಳನ್ನು ನೆರವೇರಿಸುವುದು ತುಂಬಾ ಕಷ್ಟ. ಒಂದು ದಿನ, ಇಟ್ಸ್ ಓಕೆ, ಹೇಗೋ ಮಾಡಿ ಮುಗಿಸಬಹುದು. ಬೇರೆ ಬೇರೆ ಗ್ರಾಮಗಳಲ್ಲಿ, ಬೇರೆ ಬೇರೆ ಟೀಮ್ ಗಳನ್ನೂ ಸೇರಿಸಿ, ಹೊಂದಾಣಿಕೆ ಮಾಡಿಕೊಂಡು ಮುಂದುವರಿಯಲ್ಪಡುವ ಇಂತಹಾ ಕಾರ್ಯಕ್ರಮಗಳನ್ನು ನೆರವೇರಿಸಲು ತಾಳ್ಮೆಯ ಜತೆಗೆ, ಗಾಂಧೀಜಿಯ ಬಗ್ಗೆ ಗೌರವ ಪ್ರೀತಿ ಇರಬೇಕಾಗುತ್ತದೆ. ಗಾಂಧಿಯ ಹೆಸರನ್ನು ಹೇಳಿಕೊಂಡು ಮತ ಕೇಳುವ ಕೆಲವು ಪಕ್ಷಗಳು, ಇಂತಹಾ  ಅರ್ಥಪೂರ್ಣ ಜಾಥಾವನ್ನು ನಡೆಸಲಾರದು. ಅದರ ಹೆಚ್ಚಿನ ಸಮಾರಂಭಗಳು ಲಿಕ್ಕರ್ ಶಾಪಿನಲ್ಲಿ ಶುರುವಾಗಿ, ಬೀದಿ ಜಗಳದಲ್ಲಿ ಕೊನೆಯಾಗುವಂತದ್ದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ.

ಪ್ರಧಾನಿ ಮೋದಿಯವರಿಂದ ಉದ್ದೇಶಿತವಾದ ಈ ಗಾಂಧೀ ಜಯಂತ್ಯುತ್ಸವ ಪುತ್ತೂರಿನಲ್ಲಿ ಸಾಕಷ್ಟು ಉತ್ಸಾಹದಿಂದ ಆಚರಿಸ್ಪಲ್ಪಡುತ್ತಿದೆ. ಅಕ್ಟೋಬರ್ 23 ರಂದು ಪುತ್ತೂರಿನ ಶಾಶಕರಾದ ಸಂಜೀವ ಮಠ೦ದೂರು, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲರು ಮತ್ತಿತರ ತಾಲೂಕು ಪ್ರಮುಖರಿಂದ ಪ್ರಾರಂಭವಾದ ಜಾಥಾ ಇವತ್ತಿಗೆ 10 ದಿನಗಳನ್ನು ಪೂರೈಸಿದೆ. ವಿಟ್ಲದ ಒಂದು ಪಟ್ಟಣ ಪಂಚಾಯತು ವ್ಯಾಪ್ತಿಯಲ್ಲಿ , ಪುತ್ತೂರಿನ ನಗರ ಸಭೆ ವ್ಯಾಪ್ತಿಯಲ್ಲಿ ಮತ್ತು ತಾಲೂಕಿನ ಒಟ್ಟು 43 ಗ್ರಾಮಗಳಲ್ಲಿ ನೆರೆವೇರಲಿದೆ. ನವೆಂಬರ್ 20 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಅಷ್ಟರೊಳಗೆ 200 ಕ್ಕೂ ಅಧಿಕ ಕಿಲೋಮೀಟರುಗಳನ್ನು ಪುತ್ತೂರು ತಾಲೂಕು ಬಿಜೆಪಿ ಮೂಲಗಳು ತಿಳಿಸಿವೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗಾಂಧಿ ಸಂಕಲ್ಪ ಯಾತ್ರೆಯ ಹತ್ತನೇ ದಿನವಾದ ಇಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ನೇತೃತ್ವದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕೆಯ್ಯೂರು ಗ್ರಾಮದ ಕೆಯ್ಯೂರು ಪೇಟೆಯ ಬಳಿಯಿಂದ  ಪ್ರಾರಂಭಗೊಂಡು ಕೆಯ್ಯೂರು-ಕೆದಂಬಾಡಿ-ಒಳಮೊಗ್ರು ವರೆಗೆ ಪಾದಯಾತ್ರೆ ಕೈಗೊಂಡು ಮಾಜಿ ಸೈನಿಕರಿಗೆ ಸನ್ಮಾನ, ಸ್ವಚ್ಛತಾ ಕಾರ್ಯಕ್ರಮ ಮತ್ತು ಸಸಿ ನೆಡುವ ಮಾಡುವ ಮೂಲಕ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಹರೀಶ್ ಬಿಜಾತ್ರೆ, ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಶ್ರೀ ಚನಿಲ ತಿಮ್ಮಪ್ಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ರಾಮದಾಸ್ ಹಾರಾಡಿ, ತಾಲೂಕು ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಸುನಿಲ್ ದಡ್ಡು, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಸದಸ್ಯರುಗಳು, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರು, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ಕಾರ್ಯಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

 

Leave A Reply

Your email address will not be published.