ಸ್ವಾತಂತ್ರೋತ್ತರ ಸ್ವಾತಂತ್ರ ಹೋರಾಟಗಾರ ಟಿ ಎನ್ ಶೇಷನ್ ಇತಿಹಾಸದಲ್ಲಿ ಭದ್ರ

ಟಿ ಎನ್ ಶೇಷನ್ ಅವರು ತಮ್ಮ ವಯೋಸಹಜದಿಂದ ಪೀಡಿತರಾಗಿ ತಮ್ಮ 86 ನೆಯ ವಯಸ್ಸಿನಲ್ಲಿ ತೀರಿಹೋಗಿದ್ದಾರೆ. ಭಾರತದ ರಾಜಕೀಯ ವ್ಯವಸ್ಥೆಯ ಮೂಲವನ್ನೇ ‘ಸ್ವಚ್ಛಭಾರತ’ ಮಾಡಲು ಶ್ರಮಿಸಿದ್ದ ಮುಕುಟಮಣಿ ಕೆಳಗೆ ಬಿದ್ದಿದೆ.
ಅದು 1990 ರ ಕಾಲ. ದೇಶದ ಹಲವು ರಾಜ್ಯಗಳಲ್ಲಿ ಚುನಾವಣಾ ಸಮಯದಲ್ಲಿ ಬೂತ್ ಕ್ಯಾಪ್ಚರಿಂಗ್ ನಡೆಯುತ್ತಿತ್ತು. ಬಿಹಾರ, ಉತ್ತರಪ್ರದೇಶ ಮುಂತಾದೆಡೆಯಲ್ಲಿ ತೋಳುಬಲ ರಾರಾಜಿಸುತ್ತಿತ್ತು. ದೇಶಾದ್ಯಂತ ಝಣ ಝಣ ಹಣದ ಕಾಂಚಾಣ ನೃತ್ಯ. ಎಲ್ಲಿ ಹೋದರಲ್ಲಿ ಕಟೌಟುಗಳು, ಮೈಕುಗಳು, ಪಟಾಕಿಗಳು, ಮತದಾರರಿಗೆ ನಾನಾ ತರದ ಆಮಿಷಗಳು. ಇದು ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಸಿಕ್ಕಿದಲ್ಲಿನಿಂದ ನಡೆದುಕೊಂಡು ಬಂದಿದ್ದಂತಹ ಮತ್ತು ಆಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಂತಹ ಪದ್ಧತಿ. ಅದನ್ನು ಅದನ್ನು ಬಿಹಾರದಲ್ಲಿ ಲಾಲೂ ಮತ್ತು ಉತ್ತರಪ್ರದೇಶದಲ್ಲಿ ಮುಲಾಯಂ ಮುಂದುವರಿಸಿಕೊಂಡು ಬಂದರು.
ಇಂತಹಾ ಸಂದರ್ಭದಲ್ಲಿ ಭಾರತದ ಮುಖ್ಯ ಚುನಾಣಾವಣಾಧಿಕಾರಿಯಾಗಿ ಟಿ ಎನ್ ಶೇಷನ್ ಅವರನ್ನು ಸರ್ಕಾರ ನೇಮಿಸುತ್ತದೆ.1955 ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದ ಅವರು, ತಮ್ಮ ಸುದೀರ್ಘ ಸರಕಾರೀ ಸೇವೆಯಲ್ಲಿ ಸದ್ದುಗದ್ದಲವಿಲ್ಲದೆ ಕೆಲಸಮಾಡುತ್ತ ಬಂದವರು. ಮುಖ್ಯ ಚುನಾಣಾವಣಾಧಿಕಾರಿಯಾಗುವ ಮೊದಲು ಅವರು, ದೇಶದ ಭದ್ರತಾ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

ಆದರೆ 1990, ಡಿಸೆಂಬರ್ 12 ಕ್ಕೆ ಮುಖ್ಯ ಚುನಾಣಾವಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಮೈಮೇಲೆ ದೈವ ಬಂದವರಂತೆ ಚುನಾವಣಾ ಸುಧಾರಣೆಗೆ ನಿಂತುಬಿಟ್ಟರು. ಎಡಕೈಯಲ್ಲಿ ಎಲೆಕ್ಷನ್ ಕಮಿಷನ್ ಬರೆದಿಟ್ಟಂತಹ ರೂಲ್ಸ್ ನ್ ಪುಸ್ತಕ ಹಿಡಿದುಕೊಂಡು ಬಲಗೈಯಲ್ಲಿ ದಂಡಾಸ್ತ್ರ ಝಳಪಿಸಿಕೊಂಡು ಅಡ್ಡಾದಿಡ್ಡಿ ಚಾಟಿ ಬೀಸಿದರು. ಎಲೆಕ್ಷನ್ ಕಮಿಷನ್ ಗೆ ಇಲ್ಲಿಯವರೆಗೆ, ಇಷ್ಟೆಲ್ಲ ಅಧಿಕಾರವಿದೆಯಾ ಎಂದು ಜನರು ಆಶ್ಚರ್ಯಪಡುತ್ತಿರುವಾಗಲೇ, ಇವರ ಹೊಡೆತದಿಂದ ಎಲ್ಲ ರಾಜಕೀಯ ಪಕ್ಷಗಳು ಕಂಗಾಲಾದರು.
ಅದು 1991 ರಲ್ಲಿ ನಡೆದ ಪಾರ್ಲಿಮೆಂಟ್ ಎಲೆಕ್ಷನ್ ನ ಸಂದರ್ಭ. ರಾಜೀವ್ ಗಾಂಧಿಯವರು 1991 ರಲ್ಲಿ ಎಲ್ ಟಿಟಿಯ ಆತ್ಮಾಹುತಿದಾಳಿಗೆ ಬಲಿಯಾಗಿದ್ದಂತಹ ಪ್ರಕ್ಷುಬ್ದ ಸಮಯ. ಜನತಾದಳದ ವಿ.ಪಿ ಸಿಂಗರು 1 ವರ್ಷ ಮತ್ತು ಚಂದ್ರಶೇಖರ್ ರವರು ಆರು ತಿಂಗಳು ಆಡಳಿತ ನಡೆಸುವಷ್ಟರಲ್ಲಿ, ಆಂತರಿಕ ಕಚ್ಚಾಟದಲ್ಲ್ಲಸರಕಾರ ಬಿದ್ದು ಹೋಯಿತು. ಮುಂದೆ ಎಲೆಕ್ಷನ್ ನಡೆಯುವಷ್ಟರಲ್ಲಿ ಅಲ್ಲಿ ಚುನಾವಣಾಧಿಕಾರಿಯಾಗಿ ಟಿ ಎನ್ ಶೇಷನ್ ಬಂದು ಕೂತಿದ್ದರು. ಚುನಾವಣಾ ಸಂದರ್ಭಗಳಲ್ಲಿ ಸಂಪೂರ್ಣ ಸೇವೆಗಳು ಮತ್ತು ಪೊಲೀಸ್ ಫೋರ್ಸ್ ಗಳನ್ನೂ ತನ್ನ ಅಧೀನ ಹೊಂದಿರುವ ಕಮಿಷನ್ ನ ಶೇಷನ್ ಕ್ಲೀನ್ ಎಲೆಕ್ಷನ್ ಗೆ ನಾಂದಿ ಹಾಡಿದ್ದರು.
ಹಾಗೆ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಅಂತ ನಾವು ಹೇಳಿಕೊಂಡು ಬರುತ್ತಿರುವ ಈ ಸಂದರ್ಭದಲ್ಲಿ, ಟಿ ಎನ್ ಶೇಷನ್ ಆ ದಿನ ತೆಗೆದುಕೊಂಡ ಇನಿಷಿಯೇಷನ್ ಅತ್ಯಂತ ದೊಡ್ಡದು. ಒಳ್ಳೆಯ ಜನಪ್ರತಿನಿಧಿ ದೊರೆತರೆ ಅಥವಾ ಆತನನ್ನು ಆಯ್ಕೆ ಮಾಡಿದರೆ, ಆಗ ಒಳ್ಳೆಯ ಸರಕಾರ. ಒಳ್ಳೆಯ ಸರಕಾರ ದೊರೆತರೆ ಆಗ ಒಳ್ಳೆಯ ಆಡಳಿತ ಸಾಧ್ಯ. ಇದುವೇ ಪ್ರಜಾ ಪ್ರಭುತ್ವದ ಮೂಲ ಆಶಯ. ಆದರ ಬುಡದಲ್ಲಿರುವುದೇ, ಸ್ವಚ್ಛ ಮತ್ತು ಪಾರದರ್ಶಕ ಚುನಾವಣೆ. ಹಾಗಾಗಿ ಟಿ ಏನ್ ಶೇಷನ್ ರು ತಮ್ಮ ಸೀಮಿತ 6 ವರ್ಷದ ಅವಧಿಯಲ್ಲಿ ತೋರಿದ ಸಾಧನೆ, ಯಾವುದೇ ಸ್ವಾತಂತ್ರ್ಯ ಹೋರಾಟಕ್ಕಿಂತಲೂ ಕಮ್ಮಿ ಇಲ್ಲ.

ಆದರೆ ಬದುಕಿನ ವೈರುದ್ಯಗಳನ್ನೇ ನೋಡಿ. ತಾವು ಪ್ರಬಲವಾಗಿ ವಿರೋಧಿಸಿ ಚುನಾವಣೆಯ ಅಕ್ರಮಕ್ಕೆ ಪೆಟ್ಟು ನೀಡಿ ಘಾಸಿಗೊಳಿಸಿದ ಕಾಂಗ್ರೆಸ್ ಪಕ್ಷದಲ್ಲೇ ಅವರು 2013 ರಲ್ಲಿ ಚುನಾವಣೆಗೆ ನಿಲ್ಲುತ್ತಾರೆ. ಅದೂ ದೇಶ ಕಂಡ ಸ್ವಚ್ಛ ರಾಜಕಾರಣಿ ಎಲ್ ಕೆ ಅಡ್ವಾಣಿಯವರ ಎದುರು ಅವರ ಗಾಂಧಿನಗರ ಕ್ಷೇತ್ರದಲ್ಲಿ. ಅಲ್ಲಿ ಅವರು ಸೋಲನ್ನನುಭವಿಸುತ್ತಾರೆ. ಇದಕ್ಕೂ ಮೊದಲೇ, 1997 ರಲ್ಲಿ ಅವರು ಕೆ.ಆರ್.ನಾರಾಯಣ್ ರ ವಿರುದ್ಧ ರಾಷ್ಟ್ರಪತಿ ಚುನಾವಣೆಗೆ ನಿಂತು ಸೋಲನ್ನನುಭವಿಸುತ್ತಾರೆ.
ಅದೆಲ್ಲ ಏನಿದ್ದರೂ ಸರಿ, ಅವರು ದೇಶಕ್ಕೆ ಮಾಡಿದ ಸೇವೆ, ಎಲೆಕ್ಷನ್ ಕಮಿಷನ್ ಗೆ ಇರುವ ಅಧಿಕಾರದ ವಿಸ್ತರಿಸಿದ ರೀತಿಗೆ ಅವರನ್ನು ಸ್ವತಂತ್ರ ಭಾರತ ಎಂದೂ ನೆನಪಿನಲ್ಲಿಟ್ಟುಕೊಳ್ಳಲಿದೆ.
ಸುದರ್ಶನ್ ಬಿ.ಪ್ರವೀಣ್, ಬೆಳಾಲು

Leave A Reply

Your email address will not be published.