Yash & Radhika pandit: ಕೆಜಿಎಫ್‌ ನಟ ಯಶ್‌ ಪತ್ನಿಗೆ ಒಂದೇ ವರ್ಷದಲ್ಲಿ ಎರಡು ಹೆರಿಗೆ

ಕನ್ನಡದ ಸ್ಟಾರ್ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಜೋಡಿಗೆ ಮತ್ತೆ ಎರಡನೆಯ ಮಗು ಜನಿಸಿದೆ. ಮೊದಲ ಮಗು ಐರಾಳಿಗೆ ಈಗ 11 ತಿಂಗಳು. ಈಗ ಹುಟ್ಟಿದ ಮಗು ಗಂಡಾಗಿದೆ. ವರ್ಲ್ಡ್ ಹೆಲ್ತ್ ಆರ್ಗನೈಝೇಶನ್ ನ ಪ್ರಕಾರ ಮೊದಲ ಮಗುವಿಗೂ ಎರಡನೆಯ ಮಗುವಿಗೂ ಅಂತರ 24 ತಿಂಗಳಾದರೂ ಇರಬೇಕು. ಕನಿಷ್ಠಾತಿ ಕನಿಷ್ಠ ಪಕ್ಷ 18 ತಿಂಗಳಾದರೂ ಬೇಕು.
ಮೊದಲ ಮಗು ಐರಾ 11 ತಿಂಗಳ ಹಿಂದೆ ಹುಟ್ಟಿದವಳಾದ್ದರಿಂದ, ಈಗಿನ ಮಗುವನ್ನು ಆಕೆ ಗರ್ಭಧರಿಸಿದ್ದು ಮೊದಲ ಜನನವಾದ ನಂತರ ಕೇವಲ, 2 ತಿಂಗಳಿನಲ್ಲಿ. ಸಂಥಿಂಗ್ ಸ್ಟ್ರೇಂಜ್ ಮತ್ತು ಸಾಮಾನ್ಯವಾಗಿ ಅನ್ ಯೂಶ್ವಲ್.                                                          ಸಾಮಾನ್ಯವಾಗಿ ಮೊದಲ ಮಗು ಜನಿಸಿದ ನಂತರ ಸ್ತ್ರೀಯಲ್ಲಿ ಓವ್ಯೂಲೇಶನ್ ( ಅಂಡೋತ್ಪತ್ತಿ) ಆಗಲು ಕನಿಷ್ಟ ಒಂದೂವರೆ ತಿಂಗಳು ಬೇಕಾಗುತ್ತದೆ. ಆದರೆ, ಸರಾಸರಿ ಮಹಿಳೆಯರಲ್ಲಿ ಅರವತ್ತರಿಂದ ಎಪ್ಪತ್ತು ದಿನಗಳು ಬೇಕಾಗುತ್ತದೆ.4

ಇದನ್ನು ಸ್ಟ್ರೇಂಜ್ ಅಂತ ಯಾಕೆ ಅಂದೆ ಅಂದರೆ, ಒಂದು ಮಗುವಿನ ನಂತರ ಆ ಕೂಡಲೇ ಇನ್ನೊಂದು ಮಗುವನ್ನು ಹೊಂದುವುದು ಸಾಮಾನ್ಯವಾಗಿ ಮಧ್ಯಮವರ್ಗದವರಲ್ಲಿ ಕಂಡುಬರುವುದಿಲ್ಲ. ಅತಿ ಶ್ರೀಮಂತ ಮತ್ತು ಸೆಲೆಬ್ರಿಟಿಗಳು, ಹೆರುವುದು ಒಂದು ತಮ್ಮ ಕರ್ತವ್ಯವೇನೋ ಎಂಬಂತೆ, ಪಟ ಪಟ ಎರಡು ಹೆರಿಗೆ ಆಗಿ ಮತ್ತೆ ತಮ್ಮ ಹಿಂದಿನ ಕೆರಿಯರ್ ಗೆ ವಾಪಸ್ಸಾಗುವ ಧಾವಂತದಲ್ಲಿರುತ್ತಾರೆ. ಅತ್ತ, ತೀರಾ ಬಡತನದಲ್ಲಿರುವ ಅನಕ್ಷಸ್ಥರು ತಮ್ಮ ಅಜ್ಞಾನದಿಂದ ಮತ್ತೆ ಮತ್ತೆ ಮಕ್ಕಳನ್ನು ಹೇರುತ್ತಾರೆ. ಅದು ಸೀಸನಲ್ ಡೆಲಿವರಿ !

ಎರಡೂ ಸಂಧರ್ಭಗಳಲ್ಲಿ, ಖಂಡಿತವಾಗಿಯೂ ಒಂದೋ ಬಾಣಂತಿ ಅಥವಾ ಮಗು, ಕೆಲವು ಸಂಧರ್ಭಗಳಲ್ಲಿ ಇಬ್ಬರೂ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆ ಅಥವಾ ಪೌಷ್ಟಿಕಾಂಶಗಳ ಕೊರತೆ, ಅಥವಾ ಇಮ್ಮ್ಯೂನಿಟಿ ಸಮಸ್ಯೆಗಳಿಂದ ಬಳಲುತ್ತಾರೆ. ಶ್ರೀಮಂತರಿಗೆ ಮತ್ತು ಸೆಲೆಬ್ರಿಟಿ ಗಳಿಗೆ ಇದು ಗೊತ್ತಿಲ್ಲವಾ, ಅವರ ವೈದ್ಯರು ಅವರಿಗಿದನ್ನು ಹೇಳಲ್ವಾ? ಗೊತ್ತಿಲ್ಲ. ಬಹುಷಃ ವೈದ್ಯರು ಎಚ್ಚರಿಸಿರುತ್ತಾರೆ. ಆದರೆ ಆಯ್ಕೆಗಳ ಆಯ್ಕೆ ವೈದ್ಯರದಲ್ಲವಲ್ಲ? ಸೆಲೆಬ್ರಿಟಿಗಳು ಉತ್ತಮ ಪೌಷ್ಟಿಕಾಂಶಗಳ ಆಹಾರ ಸೇವಿಸುತ್ತಾರಾದ್ದರಿಂದ ತಾಯಿಗಾಗಲಿ ಮಗುವಿಗಾಗಲಿ ಏನೂ ಸಮಸ್ಯೆಯಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ. ಸೈನ್ಸು ಅದನ್ನು ಒಪ್ಪುವುದಿಲ್ಲ. ದೇಹಕ್ಕೆ, ತನ್ನದೇ ಆದ ಒಂದು ಕ್ಷಮತೆ ಇರುತ್ತದೆ. ಅದರ ಮೇಲೆ ಒತ್ತಡ ಹೇರಿ, ಇತ್ತ ಕಡೆಯಿಂದ ಏನೇ ಸಪ್ಲಿಮೆಂಟ್ ಕೊಟ್ಟರೂ ಅದು ನ್ಯಾಚುರಲ್ ಆಗಿ ಬ್ಯಾಲನ್ಸ್ ಆಗುವುದಿಲ್ಲ.

ಇತ್ತ, ತಮ್ಮಎರಡು ಮಗುವಿನ ಅಂತರ ನಿರ್ಧರಿಸೋದು ಯಶ್ ದಂಪತಿಗಳ ಪರ್ಸನಲ್ ವಿಷ್ಯ! ನಾವು ನಮ್ಮ ಭಾವೀ ತಾಯಂದಿರಿಗೆ ಒಂದಷ್ಟು ಸಲಹೆ ಹೇಳ ಹೊರಟದ್ದು.

ಎರಡು ಮಗುವಿನ ಅಂತರವು 2 ವರ್ಷವಾಗಿದ್ದರೆ ಅದು ಅತ್ಯಂತ ಸೂಕ್ತ. ಇತ್ತ ತಾಯಿಯೂ ಮೊದಲ ಹೆರಿಗೆಯಿಂದ ಪೂರ್ತಿ ಚೇತರಿಸಿಕೊಂಡು, ಮಾನಸಿಕವಾಗಿ ಮತ್ತು ದೈಹಿಕವಾಗಿ ಎರಡನೆಯ ಮಗುವನ್ನು ಸ್ವಾಗತಿಸಲು ಪೂರ್ತಿ ರೆಡಿಯಾಗಿರುತ್ತಾಳೆ. ಅಲ್ಲದೆ, ಎರಡು ಮಕ್ಕಳ ಅಂತರ 2 ವರ್ಷಗಳಿರುವುದರಿಂದ ಮಕ್ಕಳು ಒಬ್ಬರಿಗೊಬ್ಬರು ಪೂರಕ ಆಟಗಾರರಾಗಿ, ಗೈಡುಗಳಾಗಿ, ಸಂಗಾತಿಗಳಾಗಿ ಬೆಳೆಯುವುದರಿಂದ ಪರಸ್ಪರ ಭಾಂದವ್ಯ ಚೆನ್ನಾಗಿ ಬೆಳೆಯುತ್ತದೆ. ಮುಂದೆ ದೊಡ್ಡವರಾದ ಮೇಲೆ ಕೂಡ ಆ ಭಾಂದವ್ಯ ಹಾಗೆಯೇ ಉಳಿದುಕೊಳ್ಳುವ ಸನ್ನಿವೇಶ ಅಧಿಕ. ಆದರೆ ಇಬ್ಬರು ಮಕ್ಕಳ ಅಂತರ 3 ರಿಂದ 4 ವರ್ಷಗಳಿಗಿಂತ ಹೆಚ್ಚು ಇರದಂತೆ ನೋಡಿಕೊಳ್ಳುವುದು ಸೂಕ್ತ. ಮದುಮೇಹ,ಬೊಜ್ಜು ಮತ್ತು ವಯಸ್ಸಿನ ಕಾರಣಗಳಿಂದ ಎರಡನೆಯ ಗರ್ಭಕಟ್ಟಿಕೊಳ್ಳದೆಯೂ ಇರಬಹುದು. ಆಯ್ಕೆಗಳ ಮತ್ತು ವೈದ್ಯ ವಿಜ್ಞಾನಗಳ ಮಧ್ಯೆ ಸಮನ್ವಯತೆ ಸಾಧಿಸುವುದು ಯಾವಾತ್ತೂ ಒಳ್ಳೆಯದು.

 

Leave A Reply

Your email address will not be published.