ಮಕ್ಕಳ ತಿನ್ನುವ ಬಾವಿ ಊರು ಇಲ್ಲಿದೆ ನೋಡಿ

ಈ ಒಂದು ಚಿತ್ರ ನೋಡಿದರೆ ಸಾಕು, ಜಾಸ್ತಿ ಮಾತು ಬೇಕಾಗಿಲ್ಲ !
ತಮಿಳಿನಾಡಿನ ತಿರುಚಿರಾಪಳ್ಳಿಯಲ್ಲಿ ಮತ್ತೊಮ್ಮೆ ಬೋರ್ ವೆಲ್ ಗೆ 2 ವರ್ಷದ ಮಗುವೊಂದು ಬಿದ್ದು ನರಳುತ್ತಿದೆ.
ಮೊದಲು 30 ಅಡಿ ಆಳದಲ್ಲಿ ಬಿದ್ದಿದ್ದ ಮಗು, ಆನಂತರ ಮತ್ತಷ್ಟು ಕುಸಿದು 70 ಅಡಿ ಯಲ್ಲಿ ಸಿಕ್ಕು ಬಿದ್ದಿದೆ. ಮಗು ಬಿದ್ದು 60 ಗಂಟೆಗಳು ಕಳೆದುಹೋಗಿವೆ.
ತಮಿಳುನಾಡು ಸರಕಾರ ಅಕ್ಷರಶಃ ಯುದ್ಧಕ್ಕೆ ಬಿದ್ದಿದೆ ! ತಂತ್ರಜ್ಞರ ಸಹಾಯದಿಂದ 1 ಮೀಟರು ವ್ಯಾಸದ ಬೃಹತ್ ಬೋರ್ವೆಲ್ ಅನ್ನು ಮಗು ಬಿದ್ದ ಬೋರ್ವೆಲ್ ಗೆ ಸಮನಾ೦ತರವಾಗಿ ಕೊರೆಯಲಾಗುತ್ತಿದೆ. ತಮಿಳು ಆರೋಗ್ಯ ಮಂತ್ರಿ ವಿಜಯ ಭಾಸ್ಕರ್ ಖುದ್ದು ಸ್ಥಳದಲ್ಲಿ ಮೇಲ್ವಿಚಾರಣೆಗೆ ನಿಂತಿದ್ದಾರೆ.
ಇನ್ನು ಸುಮಾರು 12 ಕಾಲ ಬೇಕಾಗಬಹುದು ಮಗುವನ್ನು ರಕ್ಷಿಸಲು. ಮಗು ಉಸಿರಾಡುತ್ತಿದ್ದು ಮಗುವಿನ ಹೃದಯದ ಬಡಿತ ಸ್ಥಿರವಾಗಿದೆ ಎನ್ನುವುದೇ ಸ್ವಲ್ಪ ನೆಮ್ಮದಿಯ ವಿಷಯ.
ದೇಶಾದ್ಯಂತ ನಡೆಯುತ್ತಿರುವ ಪ್ರಾರ್ಥನೆ ಫಲಿಸದೆ ಇರದು.  ಮಗು ಖಂಡಿತ ಬದುಕಿ ಬರಲಿದೆ.
ಮುಂದೆ ಇಂತಹಾ ಘಟನೆ ಮರುಕಳಿಸದಿರಲು ನೀರಿಲ್ಲದ ಡ್ರೈ ಬೋರ್ ವೆಲ್ ಗಳನ್ನು ಬೋರು ಕೊರೆದ ತಕ್ಷಣ ಮುಚ್ಚಬೇಕು. ನೀರು ಸಿಕ್ಕ ಬೋರ್ವೆಲ್ ಗಳ ಕೇಸಿಂಗ್ ಪೈಪ್ ಅನ್ನು ಕೂಡ ಲಾಕ್ ಆಂಡ್ ಕೀ ಮಾಡಿ ಇಡಬೇಕು. ಈಗಾಗಲೇ ಬೋರು ಕೊರೆದು ಹಾಗೆಯೇ ಬಿಟ್ಟಿರಬಹುದಾದ ಬೋರೆವೆಲ್ ಗಳನ್ನು ಗುರುತಿಸುವ ಕೆಲಸ ಆಗಬೇಕು. ಪ್ರಬಲ ಕಾನೂನಿನ ಅಗತ್ಯವಿದೆ : ಬೋರ್ವೆಲ್ ಯಾರು ಕೊರೆಯುತ್ತಿದ್ದಾರೆ ಮತ್ತು ನಿಯಮಗಳನ್ನು ಪಾಲಿಸಲಾಗುತ್ತಿದೆಯಾ, ಇಲ್ಲವಾ ಎಂದು. ಮಕ್ಕಳ ರಕ್ಷಣೆ ಮತ್ತು ಅಂತರ್ಜಲ ರಕ್ಷಿಸುವ ನಿಟ್ಟಿನಲ್ಲಿಯೂ ಇದು ಸಹಾಯಕಾರಿ.
ಇಲ್ಲಿ ಹೆಚ್ಚು ಮಾತಾಡುವ ಅಗತ್ಯ ಇಲ್ಲ. ನಾವು ಪ್ರಕಟಿಸಿದ ಚಿತ್ರವೇ ಮಾತಾಡುತ್ತಿದೆ. ನಿಮ್ಮಮಗುವಿನ, ನಿಮ್ಮ ಕುಟುಂಬದ ಮತ್ತು ನಿಮ್ಮಊರಿನ ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಬೇರೆ ಯಾರೋ ಮುಚ್ಚದೆ ಹಾಗೆಯೇ ಬಿಟ್ಟರೆ ತಕ್ಷಣ ಒಂದು ಮೂಕರ್ಜಿಯಲ್ಲಾದ್ರೂ ಸರಿ, ಪೊಲೀಸ್ ಕಂಪ್ಲೈನ್ಟ್ ಕೊಡಿ. ಇದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ.

 

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.