Ants or humans: ಇರುವೆಗಳೆಂಬ ಪುರಾತನ ಕೃಷಿಕರು | ಅವು ನಾಟಿ ಕಾರ್ಯಕ್ಕೆ ಇಳಿದು 65 ಮಿಲಿಯನ್ ವರ್ಷಗಳಾಯಿತು ಎಂದರೆ ನೀವ್ ನಂಬ್ತೀರಾ ?!

ಮನುಷ್ಯ ಮಾತ್ರ ದೊಡ್ಡ ಮಿದುಳನ್ನು ಹೊಂದಿದ ಪ್ರಾಣಿ. ಆತನ ಬಾಡಿ ಟು ಬ್ರೈನ್ ರೇಶಿಯೋ ದೊಡ್ಡದು. ಅದೇ ಕಾರಣಕ್ಕೆ ಆತನಲ್ಲಿದೆ ಅದ್ಭುತ ಮೈಂಡ್ ಪವರ್. ಜೀವಕುಲದ ಅತ್ಯಂತ ಸಣ್ಣ ಜೀವಿಗಳಲ್ಲಿ ಇರುವೆಯೂ (Ant) ಕೂಡ ಒಂದು. ಆದರೆ ಈ ಇರುವೆಗಳ ಮುಂದೆ ಮನುಷ್ಯನ ಕಾರ್ಯಕ್ಷಮತೆ ಏನೇನೂ ಇಲ್ಲ.

ಇರುವೆಗಳ ಸಾಮಾಜಿಕ ಸ್ಥಿತಿ ಅತ್ಯಂತ ಸಂಕೀರ್ಣ. ಇರುವೆಗಳು ಪರಸ್ಪರ ತಮ್ಮತಮ್ಮಲ್ಲೇ ಮಾಡಿಕೊಳ್ಳುವ ಸoಹವನನ್ನ ನಮ್ಮಲ್ಲಿ ಬೆರಗು ಮೂಡಿಸದೇ ಇರದು. ಗುಂಪಿನಲ್ಲಿರುವ ಪ್ರತಿ ಇರುವೆಗೂ ತನ್ನದೇ ಆದ particular ಘಮವಿರುತ್ತದೆ. ಇದಕ್ಕೆ ಕಾರಣವಾಗಿರುವುದು ಫೆರೋಮೋನ್ ಎಂಬ ಹಾರ್ಮೋನುಗಳು. ಈ ಸ್ಮೆಲ್ ಹಾರ್ಮೋನುಗಳ ಸಹಾಯದಿಂದ ತಮ್ಮ ಗುಂಪಿಗೆ ಬರುವ ಅಪರಿಚಿತ ‘ಅತಿಥಿ’ ಗಳನ್ನು ಅವು ಗುರುತಿಸಿ ಹೊರಗಟ್ಟಬಲ್ಲವು. ಆಹಾರಗಳನ್ನು ಮೂಸಿನೋಡಿ ಅದರ ಕ್ವಾಲಿಟಿ ಚೆಕ್ ಪರೀಕ್ಷಿಸಬಲ್ಲವು.

ತಾವು ಯಾವ ಆಹಾರವನ್ನು ಕಂಡುಕೊಂಡು ಬಂದೆ ಎಂದು ಎದುರಿನ ಇರುವೆಗೆ ಕಮ್ಯುನಿಕೇಟ್ ಮಾಡಬಲ್ಲವು. ಇರುವೆಯ ತಲೆಯ ಭಾಗದಲ್ಲಿರುವ ಉದ್ದದ ಫೀಲರ್ ಗಳೆಂಬ ಆಂಟೇನಾದ ಸಹಾಯದಿಂದ ಪರಸ್ಪರ ಮುಟ್ಟಿಕೊಂಡು ವಾಸನೆ ಗ್ರಹಿಸಿಕೊಂಡು ವಿಷಯಗಳನ್ನು ಪರಿಣಾಮಕಾರಿಯಾಗಿ ವರ್ಗಾಯಿಸಿಕೊಳ್ಳಬಲ್ಲವು. ಏಕೆಂದರೆ ಇರುವೆಗಳ ದೃಷ್ಟಿ ಮಂದವಾಗಿರುವುದರಿಂದ ಏನೇ ಸಂವಹನ ಮಾಡಬೇಕಿದ್ದರೂ ಅದು ವಾಸನೆ ಮತ್ತು ಪರಸ್ಪರ ಮುಟ್ಟುವಿಕೆಯಿಂದಲೇ ಆಗಬೇಕು.

ಈ ಇರುವೆಗಳು ಒಂದು ತರ ವೇಟ್ ಲಿಫ್ಟರ್ ಗಳಿದ್ದಂತೆ ತಮ್ಮ ದೇಹದ ತೂಕದ 50 ಪಟ್ಟು ತೂಕದ ವಸ್ತುವನ್ನು ಹೊತ್ತೊಯ್ಯಬಲ್ಲವು. ಮನುಷ್ಯ ನೀನಿದ್ದಿಯಲ್ಲಪ್ಪ. ನಿನ್ನ ತೂಕ ಎಷ್ಟು? 60 ಕೆಜಿ ಅಂದ್ಕೊ. ನೀ ಎಷ್ಟು ಭಾರ ಹೊರಬಲ್ಲೆ?  50 ಕೆಜಿ ಯ ಕೆಎಂಎಫ್ ಹಿ೦ಡಿಯ ಮೂಟೆ ನೀ ಹೊತ್ತರೆ ಹೆಚ್ಚು!

ಇರುವೆಗಳು ತಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಫೆರೋಮೋನ್ ಹಾರ್ಮೋನನ್ನು ತಾನು ಕ್ರಮಿಸುವ ದಾರಿಯುದ್ದಕ್ಕೂ ಸಿಂಪಡಿಸಿ ತಾನು ವಾಪಸ್ಸು ತನ್ನ ಮನೆ ಸೇರಿಕೊಳ್ಳುವ ದಾರಿ ಗುರುತಿಸಿಕೊಳ್ಳಬಲ್ಲವು. ಈ ಇರುವೆಗಳ ಉದಯ ಡೈನೋಸಾರಸ್ ಗಳು ಭೂಮಿಯ ಮೇಲೆ ಓಡಾಡಿಕೊಂಡಿದ್ದ ಸಮಯದಲ್ಲಿ. ಅಂದರೆ 245 ರಿಂದ 65 ಮಿಲಿಯನ್ ವರ್ಷಗಳ ಹಿಂದೆ !

ಮನುಷ್ಯನು ಕಾಡಿನಲ್ಲಿ ಓಡಾಡಿಕೊಂಡಿದ್ದು ಬೇಟೆ ಮತ್ತು ಕಾಡಿನಲ್ಲಿ ಸಿಗುವ ಗೆಡ್ಡೆಗೆಣಸುಗಳ ಮೇಲೆ ಪೂರ್ತಿ ಅವಲಂಬಿತನಾಗಿದ್ದ. ಅವಲಂಬಿತನಾಗಿದ್ದಳು ಕೂಡ ! (ಯಾಕೆಂದರೆ ಫಾರ್ಮಿಂಗ್, ಅಂದರೆ ಕೃಷಿ ಶುರುವಾದದ್ದು ಹೆಂಗಸರಿಂದ). ಮನುಷ್ಯ ಕೃಷಿ ಮಾಡಲು ಪ್ರಾರಂಭಿಸಿದ್ದು ಮೊನ್ನೆ ಮೊನ್ನೆ ಅಂದರೆ, ಕೇವಲ 23 ಸಾವಿರ ವರ್ಷಗಳ ಹಿಂದೆ! ಆದರೆ ಇರುವೆಗಳು 50 ಮಿಲಿಯನ್ ವರ್ಷಗಳ ಹಿಂದಿನಿಂದಲೂ ಕೃಷಿಯನ್ನು ಮಾಡಿಕೊಂಡು ಬಂದಿವೆ. ಅವು ಫಂಗಸ್ ಅನ್ನು( ಅವುಗಳ ಆಹಾರ) ಸಸ್ಯಗಳ ಎಲೆಯ ಮೇಲೆ ಹಾಕಿ ಬೆಳೆಯಲು ಬಿಟ್ಟು ಅವು ಬೆಳೆಯುತ್ತಿದ್ದಂತೆಯೇ ಒಂದೊಂದೇ ಬದಿಯಿಂದ ತುಂಡರಿಸಿ, ಕಟಾವು ಮಾಡಿ ತಿನ್ನುತ್ತವೆ. ಇಂತಹ ಸಾವಿರಾರು ಮೈಲಿಗಳಷ್ಟು ಉದ್ದದ ಫಾರ್ಮಿಂಗ್ ಕಾಲೋನಿಗಳನ್ನು ಮಾಡಿ, ಅವು ಕಟಾವು ಮಾಡುತ್ತಿದ್ದವು.

ಇರುವೆಗಳು ವಿಪರೀತ ಶ್ರಮಜೀವಿಗಳು. ಬಹುಪಾಲು ಇರುವೆಗಳು ನೌಕರಿ,ಚಾಕರಿ ಮಾಡಿ ಬದುಕುತ್ತವೆ.ಅವು ಎಂದು ಕೂಡ ವ್ಯವಸ್ಥೆಯ ಎದುರು ನಿಂತಿಲ್ಲ. ಸ್ಟ್ರೈಕ್ ಮಾಡಿಲ್ಲ. ಕೆಲಸಗಳ್ಳತನ ಮಾಡಿದ ಉದಾಹರಣೆಯಿಲ್ಲ. ಅವು ಸಾಲುಸಾಲಾಗಿ ಒಂದರ ಹಿಂದೆ ಒಂದು ಚಲಿಸುತ್ತವೆ. ನಮ್ಮಂತೆ ಟ್ರಾಫಿಕ್ ರೂಲ್ಸ್ ಅವು ಬ್ರೇಕ್ ಮಾಡುವುದಿಲ್ಲ !
ಇವತ್ತಿಗೂ ಪ್ರತಿಯೊಬ್ಬ ಮನುಷ್ಯನಿಗೆ 15 ಲಕ್ಷ ಇರುವೆಗಳ ಸಂಖ್ಯೆ ಇದೆ. ಅವು ತಮ್ಮ ಪಾಡಿಗೆ ಸದ್ದಿಲ್ಲದೆ,ಮತ್ಸರವಿಲ್ಲದೆ, ಅಲ್ಲದೆ ಕೌಟುಂಬಿಕ-ಸಾಮಾಜಿಕ  ವ್ಯವಸ್ಥೆಯಲ್ಲಿ ಪರಸ್ಪರ ಸಾಮರಸ್ಯದಿಂದ ಬದುಕುತ್ತಿವೆ.

ಈಗ ಹೇಳಿ ಯಾರು ದೊಡ್ಡವರು, ಇರುವೆಗಳಾ ಅಥವಾ ಮನುಷ್ಯರಾ?

 

1 Comment
  1. blankets says

    Hey there! Do you know if they make any plugins to help with Search Engine
    Optimization? I’m trying to get my blog to rank for some targeted
    keywords but I’m not seeing very good results. If you know of any please share.
    Appreciate it! I saw similar blog here: Blankets

Leave A Reply

Your email address will not be published.