ಆಗ ತಾನೇ ಸ್ನಾನ ಮುಗಿಸಿದ ಹಬೆಯಾಡುವ ಅವಳ ಎದುರು ನಿಂತಿದ್ದ ಪೀಟರ್ !

ಆ ದಿನ ಭಾನುವಾರ. ಗಂಡ ಹೆಂಡತಿ ಕೊಂಚ ಲೇಟಾಗಿಯೇ ಎದ್ದಿದ್ದರು. ಪೀಟರ್ ಅಡುಗೆಮನೆಯಲ್ಲಿ ಆಮ್ಲೆಟ್ಟಿಗೆ ಮೊಟ್ಟೆ ಒಡೆಯುತ್ತಿದ್ದ. ಜೋಸೆಫಿನ್ ಬಾತ್ ರೂಮಿನಲ್ಲಿದ್ದಳು. ಇನ್ನೇನು ಆಕೆಯ ಸ್ನಾನ ಮುಗಿಯಲಿತ್ತು.

 

ಅಷ್ಟರಲ್ಲಿ ಕಾಲಿಂಗ್ ಬೆಲ್ ನ ಸದ್ದು. ಮಾಮೂಲಿನಂತೆ ಹೆಂಡತಿ ಬಾಗಿಲು ತೆಗೆಯಲಿ ಅಂತ ಗಂಡ, ಗಂಡ attend ಮಾಡಲಿ ಎಂದು ಹೆಂಡತಿ ಸುಮ್ಮನಿದ್ದರು. ಮತ್ತೆ ಸದ್ದು. ಬೆಲ್ಲಿನ ಮೇಲೆ ಬೆಲ್ಲು ! ಕೊನೆಗೆ ಹೆಂಡತಿಯೇ ಸೋತು ದೊಡ್ಡ ಟವಲ್ಲು ಎದೆಗವಚಿಕೊಂಡು ಬಾತ್ ರೂಮಿಂದ ಹೊರಬಂದಳು. ಆಗ ತಾನೇ ಬಿಸಿನೀರ ಸ್ನಾನ ಮುಗಿಸಿ ಬಂದ ಆಕೆಯ ದೇಹ ಹಬೆಯಾಡುತ್ತಿತ್ತು. ಬೆವರ ಹನಿಯಂತಹ ಬಿಸಿನೀರ ಹಬೆಯು ಅವಳ ಹಣೆಯ ಮೇಲೆ ಮುತ್ತುಗಳಂತೆ ಕೂತಿತ್ತು. ಬಿಸಿ ಬಿಸಿ ನೀರಿನ ಸ್ನಾನದ ಪರಿಣಾಮ ಆಕೆಯ ಉಸಿರು ಸುಧೀರ್ಘವಾಗಿ, ಎದೆ ವಿಪರೀತ ಏರಿಳಿಯುತ್ತಿತ್ತು!

ಜೋಸೆಫಿನ್ ಲಗುಬಗನೇ ಬಂದು ಬಾಗಿಲು ತೆಗೆದಳು. ಎದುರಿಗೆ ಪಕ್ಕದ ಮನೆಯ ಹ್ಯಾರಿ ನಿಂತಿದ್ದ. ಆಕೆಯನ್ನು ನೋಡಿ ನಕ್ಕ. ಆಕೆ ಆತನ ಎದುರು ‘ಆ ರೀತಿ’ ನಿಂತ ಭಂಗಿಗೆ ಆತ ಆಸೆಗಣ್ಣುಗಳಿಂದ ನೋಡಿದ. ಆಮೇಲೆ ನಕ್ಕು ನುಡಿದ. “ನೀನು ಕೈಬಿಟ್ಟು ಟವೆಲ್ ಕೆಳಗೆ ಬೀಳಿಸಿದರೆ ನಿನಗೆ ಐವತ್ತು ಸಾವಿರ ರೂಪಾಯಿ ಕೊಡುತ್ತೇನೆ”.
ಆಕೆಗೆ ಹ್ಯಾರಿ ಮೇಲೆ ತಕ್ಷಣಕ್ಕೆ ಕೋಪ. ಮತ್ತೆ ಆಶ್ಚರ್ಯ. ಮತ್ತೆ ಹಣದ ಮೇಲೆ ಆಸೆ ಕೂಡಾ. ಒಂದೆರಡು ಕ್ಷಣಗಳಲ್ಲಿ ನಿರ್ಧಾರ ಬಂದಿತ್ತು. ಕೊನೆಗೂ ಆಸೆಯೇ ಗೆದ್ದಿತ್ತು.
ಆಕೆ ಅಪ್ರಯತ್ನವಾಗಿ ಟವೆಲ್ ಬೀಳಿಸಿದಳು. ಮತ್ತೆ ಸಾರೀ ಅನ್ನುತ್ತಾ ಟವೆಲ್ ಎತ್ತಿಕೊಂಡು ಸುತ್ತಿಕೊಂಡಳು. ಉಲ್ಲಾಸಗೊಂಡ ಹ್ಯಾರಿ, ಐವತ್ತು ಸಾವಿರ ರೂಪಾಯಿ ಆಕೆಯ ಕೈಗಿತ್ತು ವಿಷಲ್ ಹಾಕುತ್ತ ನಡೆದ. ದುಡ್ಡನ್ನೆತ್ತಿಕೊಂಡು ತನ್ನ ರೂಮಿಗೆ ನಡೆಯುತ್ತಿದ್ದಾಗ ಗಂಡ ಪ್ರಶ್ನಿಸಿದ.
“ಬಂದದ್ದು ಯಾರು?”
“ಹ್ಯಾರಿ”

ಆತ ಐವತ್ತು ಸಾವಿರ ರೂಪಾಯಿ ಕೊಟ್ಟಿರಬೇಕಲ್ಲವಾ?” ಮರು ಪ್ರಶ್ನಿಸಿದ. ಆಕೆಗೆ ಆಶ್ಚರ್ಯ. ತಕ್ಷಣ ತನ್ನ ಚರ್ಯೆ ಬಹಿರಂಗವಾದ ಬಗ್ಗೆ ಭಯ ಉಂಟಾಯಿತು. ಜೋಸೆಫಿನ್ ಗಂಡನನ್ನು ನೋಡಿದಳು. ಗಂಡ ಮಾಮೂಲಾಗಿದ್ದ. ಆಕೆಗೆ ಏನೊಂದೂ ಅರ್ಥವಾಗಲಿಲ್ಲ. ಅಷ್ಟರಲ್ಲಿ ಗಂಡ ನುಡಿದ.” ಕಳೆದ ತಿಂಗಳು ಹ್ಯಾರಿ ಐವತ್ತು ಸಾವಿರ ಸಾಲ ಪಡೆದಿದ್ದ “!!! ಜೋಸೆಫಿನ್ ನಲ್ಲಿ ಏಕಕಾಲದಲ್ಲಿ ಮೂರೂ ಭಾವಗಳು. ಗಂಡನಿಗೆ ಗೊತ್ತಾಗದೆ ಇದ್ದುದಕ್ಕೆ ಖುಷಿ, ದುಡ್ಡು ಹೊದ್ದುದಕ್ಕೆ ಬೇಸರ, ಮತ್ತು ಹ್ಯಾರಿ ಮಾಡಿದ ಟ್ರಿಕ್ಕಿಗೆ ಆತನ ಮೇಲೆ ಕೋಪ !!
ಇಲ್ಲಿ ಹೇಳಿದ ಕಥೆ ಕೇವಲ ಕಥೆಯಲ್ಲ. ಕಥೆ, ಒಳಗೊಂದು ಕಥೆ ಹೇಳಲು ಹೊರಟಿದೆ. ಒಂದು ಕುಟುಂಬದಲ್ಲಿನ ಸದಸ್ಯರುಗಳು ಅಥವಾ ಒಂದು ಸಂಸ್ಥೆಯಲ್ಲಿನ ಟೀಮ್ ಮೆಂಬರ್ ಗಳೆಲ್ಲ ತೆಗೆದುಕೊಳ್ಳುವ ಅತಿ ಪ್ರಮುಖವಾದ ಇನ್ ಫರ್ಮಶನ್ ನ್ನು ತಮ್ಮ ತಮ್ಮೊಳಗೆ ಸಕಾಲದಲ್ಲಿ ಹಂಚಿಕೊಳ್ಳದೇ ಏನಾಗಬಹುದೆಂದು ಮೇಲಿನ ಘಟನೆ ತಿಳಿಸಿ ಹೇಳುತ್ತದೆ. ‘keep informed ‘ಅನ್ನು ಪಾಲಿಸದಿದ್ದರೆ ನಷ್ಟ ಸ್ಪಷ್ಟವಾಗಿ ನಮಗೇ.ವಿ ಷಯ ಜತೆಗಾರರೊಂದಿಗೆ ಸಕಾಲದಲ್ಲಿ ಹಂಚಿಕೊಳ್ಳಿ. ಅನಿರೀಕ್ಷಿತ exploitationನ್ನಿಂದ ಬಚಾವಾಗಿ.

Leave A Reply

Your email address will not be published.