Home Interesting ರೈಲಿನಲ್ಲಿ ದುರ್ವಾಸನೆ ತಾಳಲಾರದೆ ದೂರು ಸಲ್ಲಿಸಿದ ಪ್ರಯಾಣಿಕ | ಸಹ ಪ್ರಯಾಣಿಕನ ಬ್ಯಾಗ್ ಒಳಗಿತ್ತು 7...

ರೈಲಿನಲ್ಲಿ ದುರ್ವಾಸನೆ ತಾಳಲಾರದೆ ದೂರು ಸಲ್ಲಿಸಿದ ಪ್ರಯಾಣಿಕ | ಸಹ ಪ್ರಯಾಣಿಕನ ಬ್ಯಾಗ್ ಒಳಗಿತ್ತು 7 ರಣಹದ್ದುಗಳು !

Hindu neighbor gifts plot of land

Hindu neighbour gifts land to Muslim journalist

ಮಧ್ಯಪ್ರದೇಶ : ಖಾಂಡ್ವಾ ರೈಲು ನಿಲ್ದಾಣದಲ್ಲಿ ರಣಹದ್ದು ಮಾರುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ರಣಹದ್ದು ಹಿಡಿದುಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಹತ್ತಿರದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕೋರ್ವರು ದುರ್ವಾಸನೆ ತಾಳಲಾರದೇ ಟಿಕೆಟ್ ಪರಿವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ.

ರೈಲು ಖಾಂಡ್ವಾ ರೈಲು ನಿಲ್ದಾಣಕ್ಕೆ ಬಂದ ತಕ್ಷಣ ಟಿಕೆಟ್ ಪರಿವೀಕ್ಷಕರು ಈ ಬಗ್ಗೆ ಆರ್ ಪಿಎಎಫ್ ಗೆ ಮಾಹಿತಿ ನೀಡಿದರು.

ಈ ರಣಹದ್ದುಗಳು ಅಪರೂಪದ ಜಾತಿಯ ಈಜಿಪ್ಟ್ ರಣಹದ್ದು ಎಂದು ಕಂಡು ಬಂದಿದೆ.

ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಅಲ್ಲಿಗೆ ಆಗಮಿಸಿ ಜಂಟಿಯಾಗಿ ರೈಲಿನ ಮೇಲೆ ದಾಳಿ ನಡೆಸಿದರು. ಏಳು ಬಿಳಿ ರಣಹದ್ದುಗಳು ಅಥವಾ ಈಜಿಪ್ಟ್ ರಣಹದ್ದುಗಳನ್ನು ಪತ್ತೆ ಹಚ್ಚಿದ ನಂತರ ಆರೋಪಿ ಫರೀದ್ ಅಹ್ಮದ್ ನನ್ನು ಬಂಧಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಎಸ್ ಡಿಒ‌ ಆರ್ ಎಸ್ ಸೋಲಂಕಿ ತಿಳಿಸಿದ್ದಾರೆ.