Home Interesting ಬಲು ಅಪರೂಪ ನಮ್ ಜೋಡಿ | 38 ಇಂಚು ಎತ್ತರದ ವರನಿಗೆ 5.3 ಅಡಿ ಎತ್ತರದ...

ಬಲು ಅಪರೂಪ ನಮ್ ಜೋಡಿ | 38 ಇಂಚು ಎತ್ತರದ ವರನಿಗೆ 5.3 ಅಡಿ ಎತ್ತರದ ವಧು !!|ದೇವರೇ ಒಂದು ಮಾಡಿದ ಈ ಜೋಡಿಯ ಹಿಂದಿರುವ ಕಥೆ ಇಲ್ಲಿದೆ ನೋಡಿ

Hindu neighbor gifts plot of land

Hindu neighbour gifts land to Muslim journalist

ದೇವರ ಇಚ್ಛೆಯನ್ನು ಬಲ್ಲವರು ಯಾರು ಅಲ್ವಾ? ಅವನು ನಡೆದಂತೆ ನಮ್ಮ ಬದುಕು. ಹೀಗೆ ಯಾರ ಜೀವನದಲ್ಲಿ ಯಾರು ಇರಬೇಕು ಎಂಬುದನ್ನು ಆತ ನಿರ್ಧಾರಿಸುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.ಹೌದು. ಇಲ್ಲೊಂದು ವಿಶೇಷವಾದ ಮದುವೆ ನಡೆದಿದ್ದು,ಎತ್ತರದ ಹುಡುಗಿಗೆ ಕುಳ್ಳನೆಯ ಹುಡುಗ.

ನೀಲಗುಂದ ಗ್ರಾಮದ ಬಸವೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಭಾನುವಾರ ಈ ಅಪರೂಪದ ಮದುವೆ ನಡೆದಿದ್ದು,ವರನ ಎತ್ತರ 38″ ಇಂಚು ಇದ್ದರೆ, ವಧುವಿಗೆ 5.3 ಅಡಿ ಎತ್ತರ ಇದ್ದಾರೆ. ಗ್ರಾಮಸ್ಥರು ಸೇರಿದಂತೆ ಇಬ್ಬರ ಮನೆಯವರು ಈ ಮದುವೆಗೆ ಒಪ್ಪಿಗೆ ನೀಡಿ ಹಿಂದೂ ಸಂಪ್ರದಾಯದಂತೆ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮದುವೆ ಮಾಡಿಸಿದ್ದಾರೆ.

ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ 38 ಇಂಚು ಎತ್ತರದ ಬಸವರಾಜನಿಗೆ 30 ವಯಸ್ಸು. ಕುಬ್ಜನಾಗಿದ್ದ ಬಸವರಾಜ ಕುಂಬಾರ ಕನ್ಯೆಗಾಗಿ ಹುಡುಕುತ್ತಿದ್ದ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗಣಿ ಗ್ರಾಮದಲ್ಲಿನ 22 ವಯಸ್ಸಿನ ಯುವತಿ ರುಕ್ಮಿಣಿಯೊಂದಿಗೆ ಮದುವೆ ಮಾಡಿಸಿದ್ದಾರೆ.ತಾನೆ ಒಪ್ಪಿ ಯುವಕನನ್ನು ವರಿಸಲು ಮುಂದಾದ ರುಕ್ಮಿಣಿ, ‘ಬಸವರಾಜ ಜೊತೆ ಮದುವೆಯಾಗಿ ಹೊಂದಾಣಿಕೆಯಿಂದ ಜೀವನ ನಡೆಸುತ್ತೇನೆ. ಯಾರ ಒತ್ತಡವೂ ಇಲ್ಲ ಪ್ರೇಮದಿಂದಲೇ ಮದುವೆಯಾಗುತ್ತಿದ್ದೇನೆ ‘ಎಂದು ರುಕ್ಮಿಣಿ ಹೇಳಿಕೊಂಡರು.

‘5 ವರ್ಷಗಳಿಂದ ನನ್ನ ಮಗನಿಗೆ ಕನ್ಯಾ ನೋಡುತ್ತಿದ್ದೆ ಆದರೂ ಸಿಕ್ಕಿರಲಿಲ್ಲ. ಈಗ ಎಲ್ಲರಂತೆ ನನ್ನ ಮಗನಿಗೆ ಕನ್ಯಾ ಸಿಕ್ಕಿದೆ ಮದುವೆಯು ನಡೆಯಿತು’ ಎಂದು ಸಂತಸಗೊಂಡ ಬಸವರಾಜನ ತಾಯಿ ಶಾಂತಮ್ಮ ನನಗಂತು ಬಹಳ ಖುಷಿಯಾಗಿದೆ ಎಂದರು.ಇಂದು ನಮ್ಮೂರಲ್ಲಿ ನಡೆದ ಮದುವೆ ಬಹಳ ವಿಶೇಷವಾದದ್ದು. ಇಬ್ಬರ ಮನೆಯವರ ಒಪ್ಪಿಗೆಯನ್ನು ಪಡೆದು ಮದುವೆ ಮಾಡಿಸಿದ್ದೇವೆ, ಮುಖಂಡರು ಗ್ರಾಮಸ್ಥರು ಸೇರಿದಂತೆ 600 ಕ್ಕೂ ಹೆಚ್ಚು ಜನ ಪಾಲ್ಗೊಂಡು ಶುಭ ಹಾರೈಸಿದರು ಎಂದು ನೀಲಗುಂದಮಲ್ಲಪ್ಪ ಸೋಮಪ್ಪ ಹೂಗಾರ ಗ್ರಾಪಂ ಮಾಜಿ ಅಧ್ಯಕ್ಷ ಹೇಳಿದ್ದಾರೆ.ನನ್ನ ಸಹೋದರನಂತಿರುವ ಬಸವರಾಜನಿಗೆ ಮದುವೆ ಕುರಿತು ಎಲ್ಲರು ವ್ಯಂಗ್ಯ ಮಾಡುತ್ತಿದ್ದರು ಆದರೆ ಇಂದು ಅವನಿಗೆ ಮದುವೆಯಾಗಿದ್ದು ಇಡಿ ಗ್ರಾಮಸ್ಥರಿಗೆ ಸಂತಸ ತಂದಿದೆ ಎಂದು ಟಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರು ತಿಳಿಸಿದ್ದಾರೆ. ಒಟ್ಟಾರೆ ಈ ಅಪರೂಪದ ಜೋಡಿಯ ಮದುವೆ ಕಣ್ತುಂಬಿಸಿಕೊಂಡವರೇ ಅದೃಷ್ಟರು ಅಲ್ವಾ!!?