Home Interesting ಒಡಹುಟ್ಟಿದ ತಂಗಿ ಸತ್ತು ನಾಲ್ಕು ದಿನ ಸಂದರೂ ಹೆಣದ ಜೊತೆಯೇ ಕಾಲ ಕಳೆದ ಅಕ್ಕ!! |ಹೆತ್ತವರನ್ನೂ...

ಒಡಹುಟ್ಟಿದ ತಂಗಿ ಸತ್ತು ನಾಲ್ಕು ದಿನ ಸಂದರೂ ಹೆಣದ ಜೊತೆಯೇ ಕಾಲ ಕಳೆದ ಅಕ್ಕ!! |ಹೆತ್ತವರನ್ನೂ ಕಳೆದುಕೊಂಡಿದ್ದ ಆಕೆ ತಂಗಿಯೂ ಬಿಟ್ಟು ಹೋದಳಲ್ಲ ಎಂಬ ಕೊರಗು

Hindu neighbor gifts plot of land

Hindu neighbour gifts land to Muslim journalist

ತೆಲಂಗಾಣ : ತನ್ನ ಒಡಹುಟ್ಟಿದ ತಂಗಿ ಅನಾರೋಗ್ಯದಿಂದ ಸತ್ತರೂ ಅದನ್ನು ಯಾರಿಗೂ ಹೇಳದೇ ಅಕ್ಕ ಆ ಶವದ ಜೊತೆಯೇ ನಾಲ್ಕು ದಿನ ಕಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

26 ವರ್ಷದ ಸ್ವಾತಿ ಮತ್ತು ತಂಗಿ ( 24) ಶ್ವೇತಾ ಇಬ್ಬರೂ ಪೆದ್ದಪಲ್ಲಿ ಪಟ್ಟಣದ ಪ್ರಗತಿ ನಗರದಲ್ಲಿ ವಾಸವಿದ್ದರು.

ಕಳೆದ ಒಂದು ವಾರದಿಂದ ಶ್ವೇತಾ ಜ್ವರದಿಂದ ನರಳುತ್ತಿದ್ದರು. ಆಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಟ್ಟು ಮನೆಗೆ ವಾಪಾಸ್ ಬಂದಿದ್ದಾರೆ. ಆದರೂ ಆರೋಗ್ಯ ತೀರಾ ಹದಗೆಟ್ಟು ಉಸಿರಾಟ ಸಮಸ್ಯೆ ಉಂಟಾಗಿ ಶ್ವೇತಾ ಮನೆಯಲ್ಲೇ ಮೃತಪಟ್ಟಿದ್ದಾರೆ.ಆದರೆ ಈ ಸಾವಿನ ಸುದ್ದಿ ಯಾರಿಗೂ ತಿಳಿಸದೆ ಸ್ವಾತಿ ಶವದ ಜೊತೆಯಲ್ಲೇ ನಾಲ್ಕು ದಿನ ಕಳೆದಿದ್ದಾಳೆ.

ಶ್ವೇತಾ ಎಂಬಿಎ ಪದವೀಧರೆ. ಎಂಟೆಕ್ ಓದಿರುವ ಸ್ವಾತಿ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಶವ ಕೊಳೆಯರಾರಂಭಿಸಿ ದುರ್ವಾಸನೆ ಬೀರುತ್ತಿದ್ದರೂ ಅಕ್ಕ ಯಾರಿಗೂ ಹೇಳಿಲ್ಲ. ಅಕ್ಕಪಕ್ಕದ ಮನೆಯವರು ದುರ್ವಾಸನೆ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಒಳ ಹೋಗಿ ಪರಿಶೀಲಿಸಿದಾಗ ಶ್ವೇತಾ ಶವ ಕಂಡುಬಂದಿದೆ. ಕೊಳೆತ ದೇಹವನ್ನು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರ ಮಾಡಲಾಯಿತು.

ಅಕ್ಕ ಸ್ವಾತಿಯನ್ನು ವಿಚಾರಣೆ ನಡೆಸಿದ್ದು, ತಂಗಿ ಅನಾರೋಗ್ಯದಿಂದ ಸಾವನ್ನಪ್ಪಿದ್ದು ತಿಳಿದು ಬಂದಿದೆ.ಸ್ವಾತಿ ಹಾಗೂ ಶ್ವೇತಾ ಅವರ ತಂದೆ ತಾಯಿ ಇಬ್ಬರೂ ಈ ಮೊದಲೇ ಮೃತಪಟ್ಟಿದ್ದು, ಇಬ್ಬರೂ ಅಜ್ಜಿಯಂದಿರ ಆಶ್ರಯದಲ್ಲೇ ಬೆಳೆದಿದ್ದಾರೆ. ಅಜ್ಜಿಯಂದಿರೂ ಇತ್ತೀಚೆಗೆ ಮೃತಪಟ್ಟಿದ್ದು, ಅವರು ಸತ್ತಾಗಲೂ ಎರಡ್ಮೂರು ದಿನ ಅಕ್ಕತಂಗಿ ಯಾರಿಗೂ ಈ ವಿಷಯ ಹೇಳಿರಲಿಲ್ಲ ಎಂಬುದು ಸಮೀಪದ ಮನೆಯವರ ಮಾತಾಗಿದೆ.