Home Interesting ಉದ್ಯೋಗಿಯೊಬ್ಬನ ಖಾತೆಗೆ ತಪ್ಪಾಗಿ 1.43 ಕೋಟಿ ರೂಪಾಯಿ ಸಂಬಳ ಹಾಕಿದ ಕಂಪನಿ, ಬಳಿಕ ಆತ ಮಾಡಿದ್ದೇನು...

ಉದ್ಯೋಗಿಯೊಬ್ಬನ ಖಾತೆಗೆ ತಪ್ಪಾಗಿ 1.43 ಕೋಟಿ ರೂಪಾಯಿ ಸಂಬಳ ಹಾಕಿದ ಕಂಪನಿ, ಬಳಿಕ ಆತ ಮಾಡಿದ್ದೇನು ಗೊತ್ತಾ!?

Hindu neighbor gifts plot of land

Hindu neighbour gifts land to Muslim journalist

ಉಚಿತವಾಗಿ ಖಾತೆಗೆ ಹಣ ಬೀಳುತ್ತೆ ಅಂದ್ರೆ ಯಾರು ತಾನೇ ಸುಮ್ಮನಿರಲಾರ. ಸಿಕ್ಕಿದ್ದೇ ಚಾನ್ಸ್ ಅಂದುಕೊಂಡು ಏನೂ ಆಗದವರಂತೆ ಇರುತ್ತಾರೆ. ಅಂತದರಲ್ಲಿ ಇಲ್ಲೊಬ್ಬನ ಖಾತೆಗೆ 1.43 ಕೋಟಿ ರೂಪಾಯಿ ಜಮೆಯಾಗಿದೆ. ಆದರೆ ಈ ವ್ಯಕ್ತಿ ಹಣವನ್ನು ಹಿಂದಿರುಗಿಸುವ ಬದಲು, ಮಾಡಿದ್ದೇನು ಗೊತ್ತಾ!?

ಹೌದು. ಕಂಪನಿಯೊಂದು ಉದ್ಯೋಗಿಗೆ ತಿಂಗಳಿಗೆ 45 ಸಾವಿರ ರೂಪಾಯಿ ಜಮೆ ಮಾಡುವ ಬದಲು, ತಪ್ಪಾಗಿ 1.43 ಕೋಟಿ ರೂಪಾಯಿ ಹಣವನ್ನು ಸಂಬಳ ರೂಪದಲ್ಲಿ ಪಾವತಿಸಿದ ಘಟನೆ ನಡೆದಿದೆ. ಆದರೆ ತಪ್ಪಿ ಬಂದ ಹಣವನ್ನು ಹಿಂದಿರುಗಿಸುವಂತಹ ಮನಸ್ಸು ಯಾರಿಗೆ ತಾನೇ ಇರುತ್ತೆ ಹೇಳಿ. ಅದೇ ರೀತಿ, ಇಷ್ಟೊಂದು ದೊಡ್ಡ ಮೊತ್ತ ಖಾತೆಗೆ ಬಂದು ಬೀಳುತ್ತಿದ್ದಂತೆಯೇ ಈ ವ್ಯಕ್ತಿಯು ಕೆಲಸಕ್ಕೆ ರಾಜೀನಾಮೆ ನೀಡಿ ನಾಪತ್ತೆಯಾದ ಘಟನೆಯು ಚಿಲಿ ದೇಶದಲ್ಲಿ ನಡೆದಿದೆ.

ಆರಂಭದಲ್ಲಿ ಉದ್ಯೋಗಿಯು ತಾನು ಹೆಚ್ಚುವರಿ ಹಣವನ್ನು
ವಾಪಸ್ ನೀಡುತ್ತೇನೆಂದು ಭರವಸೆ ನೀಡಿದ್ದ, ಆದರೆ ಬಳಿಕ ಪರಾರಿಯಾಗಿದ್ದಾರೆ. ಕಂಪನಿಯು ಇದೀಗ ಈತನ ವಿರುದ್ಧ ಕಾರ್ಮಿಕರ ಹಣ ದುರುಪಯೋಗ ಆರೋಪವನ್ನು ಹೊರಿಸಿದೆ.