Home ಬೆಂಗಳೂರು Murder : ಕೈ ನೋಡಿ ಭವಿಷ್ಯ ಹೇಳಲು ಹೋದವ ಕೊಲೆಯಲ್ಲಿ ಅಂತ್ಯ : ಸ್ನೇಹಿತನಿಗೆ ಕಲ್ಲಿನಿಂದ...

Murder : ಕೈ ನೋಡಿ ಭವಿಷ್ಯ ಹೇಳಲು ಹೋದವ ಕೊಲೆಯಲ್ಲಿ ಅಂತ್ಯ : ಸ್ನೇಹಿತನಿಗೆ ಕಲ್ಲಿನಿಂದ ಹೊಡೆದು ಕೊಲೆ

Murder

Hindu neighbor gifts plot of land

Hindu neighbour gifts land to Muslim journalist

Murder  :  ಬೆಂಗಳೂರು : ಕಂಠ ಪೂರ್ತಿ ಕುಡಿದ ಅಮಲಿನಲ್ಲಿ ಕೈ ನೋಡಿ ಭವಿಷ್ಯ ಹೇಳುತ್ತಿದ್ದ ಸ್ನೇಹಿತನಿಗೆ ಕಲ್ಲಿನಿಂದ ಹೊಡೆದು ಬರ್ಬರವಾಗಿ (Murder) ಹತ್ಯೆಗೈದಿದ್ದ ಘಟನೆ ಬೆಂಗಳೂರಿನ ಗೋವಿಂದರಾಜನಗರದಲ್ಲಿ ನಡೆದಿದೆ.

ಶನಿವಾರ ಮಧ್ಯಾಹ್ನ ಸುಮಾರಿಗೆ ನಾಗರಭಾವಿ ಮುಖ್ಯರಸ್ತೆಯಲ್ಲಿರುವ ಬಾರ್‌ನಲ್ಲಿ ಕುಡಿಯುವುದಕ್ಕಾಗಿ ಸ್ನೇಹಿತರಿಬ್ಬರಾದ ಮಾರಿಮುತ್ತು ಮತ್ತು ನರೇಶ್ ತೆರಳಿದ್ದರು. ಈ ಸಂದರ್ಭದಲ್ಲಿ ಕುಡಿಯುತ್ತಿದ್ದಂತೆ ನರೇಶ್ ನ ಕೈ ನೋಡಿ ಭವಿಷ್ಯ ಹೇಳುವುದಾಗಿ ಮಾರಿಮುತ್ತು ಹೇಳಲು ಮುಂದಾದನು. ನರೇಶ್‌ ಕೈ ನೋಡುತ್ತಾ..’ನಿನಗೆ ದುಶ್ಚಟಗಳಿವೆ, ಹುಡುಗಿಯರ ಸಹವಾಸ ಜಾಸ್ತಿ, ಕೆಲವೇ ವರ್ಷಗಳಲ್ಲಿ ನೀನು ಸಾಯುತ್ತೀಯ’ ಎಂದು ಆತನನ್ನ ರೇಗಿಸಲಾರಂಭಿಸಿದ್ದನು.

ಸಿಟ್ಟಿಗೆದ್ದ ಮಾರಿಮುತ್ತು ಮತ್ತು ನರೇಶ್ ಬಾರ್ ಒಳಗಡೆ ಪರಸ್ಪರ ಕಿತ್ತಾಡಿಕೊಂಡಿದ್ದರು. ಬಳಿಕ ಬಾರ್‌ ಹೊರಗಡೆ ಇದ್ದ ಟೈಲ್ಸ್‌ಗೆ ನರೇಶ್‌ ತಲೆಯನ್ನು ಹೊಡೆದು ಬರ್ಬರವಾಗಿ ಕೊಲೆಗೈದಿದ್ದಾನೆ. ಬಳಿಕ ನರೇಶ್‌ನ ಉಸಿರು ನಿಂತಿದೆ ಎಂದು ಮಾರಿಮುತ್ತು ತಿಳಿದು ಘಟನಾ ಸ್ಥಳದಿಂದ ಎಸ್ಕೇಪ್‌ ಆಗಿದ್ದಾನೆ. ಮಾರಿಮುತ್ತು ಈ ಹಿಂದೆಯೇ ಹಲವು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂಧನಗೊಂಡು ಹೊರ ಬಂದಿದ್ದನು. ಈತನ ಸ್ವಭಾವವೂ ಸ್ವಲ್ಪ ವಿಚಿತ್ರ ಎಂದು ಊರಿನ ಎಲ್ಲರಿಗೂ ತಿಳಿದಿತ್ತು. ಮೃತ ನರೇಶ್, ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಗೋವಿಂದರಾಜನಗರದಲ್ಲಿ ವಾಸವಿದ್ದ. ಗಾರೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ.

ಹೀಗಿರಬೇಕಾದರೆ ಮಾರ್ಚ್ 25 ರಂದು ಬೆಳಗ್ಗೆ 11 ಗಂಟೆಗೆ ಕಬ್ಬಿನ ಹಾಲು ಕುಡಿದು ಬರ್ತಿನಿ ಅಂತಾ ಮನೆಯಿಂದ ಹೊರ ಬಂದವನು ಕೊಲೆಯಾಗಿದ್ದಾನೆ. ಬಾರ್​ಗೆ ಒಟ್ಟೊಟ್ಟಿಗೆ ಹೋಗಿದ್ದ ಸ್ನೇಹಿತನೇ ಭೀಕರವಾಗಿ ಕೊಂದಿದ್ದಾನೆ. ಮೃತನ ಪತ್ನಿ ಮಹಾದೇವಿ ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನ ಬಂಧಿಸಿಸಲಾಗಿದೆ. ಸ್ನೇಹಿತ ನಡುವೆ ತಮಾಷೆ ಮಾಡಿದ್ದು ಕೊಲೆಯಲ್ಲಿ ಅಂತ್ಯವಾಗಿದ್ದು ಅಘಾತವನ್ನು ಉಂಟುಮಾಡಿದಂತೂ ನಿಜ.