Home latest BMTC ಟಿಕೆಟ್ ದರ ಏರಿಕೆ| ಚುನಾವಣೆ ಬೆನ್ನಲ್ಲೇ ಪ್ರಯಾಣಿಕರಿಗೆ ಬಿಸಿಮುಟ್ಟಿಸಿದ ಸರ್ಕಾರ|

BMTC ಟಿಕೆಟ್ ದರ ಏರಿಕೆ| ಚುನಾವಣೆ ಬೆನ್ನಲ್ಲೇ ಪ್ರಯಾಣಿಕರಿಗೆ ಬಿಸಿಮುಟ್ಟಿಸಿದ ಸರ್ಕಾರ|

Hindu neighbor gifts plot of land

Hindu neighbour gifts land to Muslim journalist

ಚುನಾವಣೆ ಬೆನ್ನಲ್ಲಿ ಸರ್ಕಾರ ಜನರಿಗೆ ಉಪಯುಕ್ತವಾಗುವ ಹಲವು ರೀತಿಯ ಯೋಜನೆಗಳನ್ನು ಜಾರಿಗೊಳಿಸಿ, ಕೆಲವು ಹಣ ಪಾವತಿ ಮಾಡುವ ವಿಚಾರಗಳಲ್ಲಿ ದರವನ್ನು ಕಡಿಮೆ ಮಾಡಿ ಜನರ ಮನಗೆಲ್ಲಲು ಯತ್ನಿಸುತ್ತದೆ. ಆದರೆ ಇದೀಗ ಸರ್ಕಾರ ಬೆಂಗಳೂರಿನಲ್ಲಿ ಬಿಎಂಟಿಸಿ ವೋಲ್ವೋ ಬಸ್ಸಿನ ಟಿಕೆಟ್ ದರವನ್ನು ಏರೆಸಿ ಪ್ರಯಾಣಿಕರಿಗೆ ಬಿಸಿಮುಟ್ಟಿಸಿದೆ.

ಹೌದು, ಕೊರೊನಾ ಕಾರಣಕ್ಕೆ ಬಿಎಂಟಿಸಿ ಆಡಳಿತ ಸಂಸ್ಥೆ, ಬಿಎಂಟಿಸಿಯ ವೋಲ್ವೋ ಬಸ್‌ಗಳ ದರವನ್ನು ಶೇ.34 ರಷ್ಟು ಕಡಿಮೆ ಮಾಡಿತ್ತು. ನಂತರ ಐಟಿಬಿಟಿ ಸೆಕ್ಟರ್ ಕಡೆ ಹೆಚ್ಚು ಸಂಚಾರ ಮಾಡುತ್ತಿದ್ದ ವೋಲ್ವೋ ಬಸ್ ಗಳನ್ನ ಬೇರೆ ಬೇರೆ ಮಾರ್ಗಗಳಿಗೆ ನಿಯೋಜನೆ ಮಾಡಿತ್ತು. ಆದರೆ ಇದೀಗ ಮತ್ತದೆ ಹಳೆಯ ದರವನ್ನೇ ಜಾರಿಗೆ ತಂದಿದೆ.

ಸಾರ್ವಜನಿಕರ ಹಿತಾಸಕ್ತಿಯಿಂದ ಹಾಗೂ ದರವನ್ನು ಕಡಿಮೆ ಮಾಡುವ ಮೂಲಕ ಪ್ರಯಾಣಿಕರನ್ನ ವೋಲ್ವೋ ಬಸ್ ಗಳ ಕಡೆ ಸೆಳೆಯುವ ಕೆಲಸವನ್ನು ಬಿಎಂಟಿಸಿ ಸಂಸ್ಥೆ ಮಾಡಿತ್ತು. ಇದೀಗ ಇಂಧನ ದರ ಏರಿಕೆಯ ಕಾರಣ ನೀಡಿ ಮತ್ತೆ ಡಿಸೆಂಬರ್ 2021ರ ಹಿಂದಿನ ದರವನ್ನೇ ಜಾರಿಗೆ ತಂದು ಚುನಾವಣೆ ಬೆನ್ನಲ್ಲೇ ಜನರಿಗೆ ಹಾಗೂ ಪ್ರಯಾಣಿಕರಿಗೆ ಬಿಸಿಮುಟ್ಟಿಸುತ್ತಿದೆ.

ಪ್ರಸ್ತುತ ಬದಲಾದ ದರವನ್ನು ನೋಡುವುದಾದರೆ ಸಾಮಾನ್ಯ ದರ 20ರೂಪಾಯಿ ಇದ್ದು ಏರಿಕೆ ನಂತರ 25 ರೂಪಾಯಿ ಆಗಲಿದೆ, ತಿಂಗಳ ಪಾಸ್ ದರ 1,500 ಇದ್ದು ಏರಿಕೆ ಬಳಿಕ 1,800ರೂ ಆಗಲಿದೆ. ದಿನದ ಪಾಸ್ ದರ 100 ರೂಪಾಯಿಗಳಿಂದ 120ರೂಪಾಯಿಗಳಿಗೆ ಏರಿಕೆ ಆಗಲಿದೆ. ಈ ದರದ ಬದಲಾವಣೆಯು ಜಿಎಸ್ಟಿ ಯನ್ನೂ ಒಳಗೊಂಡಿದೆ.