Home Crime Bengaluru Crime: ಮನೆ ಮಾರಲು ಒಪ್ಪದ 74 ರ ಹರೆಯದ ತಂದೆಗೆ ಮಗನಿಂದ ಹತ್ಯೆ ಬೆದರಿಕೆ

Bengaluru Crime: ಮನೆ ಮಾರಲು ಒಪ್ಪದ 74 ರ ಹರೆಯದ ತಂದೆಗೆ ಮಗನಿಂದ ಹತ್ಯೆ ಬೆದರಿಕೆ

Bengaluru Crime

Hindu neighbor gifts plot of land

Hindu neighbour gifts land to Muslim journalist

ಮನೆ ಮಾರಾಟ ಮಾಡಲು ಒಪ್ಪದ ವೃದ್ಧ ತಂದೆ, ತಾಯಿ ಮೇಲೆ ಹಲ್ಲೆ ನಡೆಸಿದ ಪುತ್ರ ರಿವಾಲ್ವರ್‌ನಿಂದ ಶೂಟ್ ಮಾಡಿ ಕೊಲ್ಲುವ ಬೆದರಿಕೆಯೊಡ್ಡಿದ ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

ಇದನ್ನೂ ಓದಿ: North Delhi : ಶಾಲೆಯ ಆವರಣದಲ್ಲಿ ಪತ್ತೆಯಾಯ್ತು ಯುವ ಬಿಜೆಪಿ ಕಾರ್ಯಕರ್ತೆಯ ಶವ – 4 ದಿನದ ಬಳಿಕ ಬಯಲಾಯ್ತು ರೋಚಕ ವಿಷ್ಯ !!

ಈ ಕುರಿತು 74 ವರ್ಷದ ಸಂತ್ರಸ್ತ ವ್ಯಕ್ತಿ, ಮಗ ಹಾಗೂ ಸೊಸೆ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಧುಸೂದನ್ ಹಾಗೂ ಅವರ ಪತ್ನಿ ಬಂದ್ರಿಲ್ಲಾ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿವೃತ್ತ ಸರಕಾರಿ ಅಧಿಕಾರಿ ಯಾಗಿರುವ ದೂರುದಾರರು ಪತ್ನಿ ಜತೆ ಸ್ವಂತ ಮನೆಯಲ್ಲಿನೆಲೆಸಿದ್ದಾರೆ. ಅವರ ಪುತ್ರ ಮಧುಸೂದನ್ 2023ರಲ್ಲಿ ಇಂದ್ರಿಲ್ಲಾ ಎಂಬುವವರನ್ನು ಪ್ರೀತಿಸಿ ಮದುವೆಯಾ ಗಿದ್ದು, ಒಂದೇ ಮನೆಯಲ್ಲಿ ನೆಲೆಸಿದ್ದರು.

“ಸೊಸೆ, ಮಗ ಇಬ್ಬರೂ ಮನೆ ಮಾರಾಟ ಮಾಡಿ ಉದ್ಯಮ ಸ್ಥಾಪನೆಗೆ ಹಣ ಕೊಡುವಂತೆ ಒತ್ತಾಯಿಸುತ್ತಿದ್ದರು. ಹಲವು ಬೋಕರ್‌ಗಳನ್ನು ಮನೆ ಮಾರಲು ಕರೆತಂದಿದ್ದರು. ಇದಕ್ಕೆ ಒಪ್ಪದಿದ್ದುದರಿಂದ ಕಿರುಕುಳ ನೀಡುತ್ತಿದ್ದರು. ಫೆ.12ರಂದು

ಸೊಸೆ, ಕುದಿಸಿದ ನೀರನ್ನು ಪತ್ನಿಯ ಮುಖಕ್ಕೆ ಎರಚಲು ಪ್ರಯತ್ನಿಸಿದ್ದರು. ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ ಬಿಸಿನೀರು ಕೈ ಬಲ ಪಕ್ಕೆಗೆ ಬಿದ್ದುಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ದೂರುದಾರರು ವಿವರಿಸಿದ್ದಾರೆ.” ಎಂದು ಪೊಲೀಸರು ತಿಳಿಸಿದ್ದಾರೆ.

”ಫೆ.25ರಂದು ಜಗಳ ಮಾಡಿದ ಮಗ, ಸೊಸೆ ಮನೆಯ ಟಿ.ವಿ. ಒಡೆದು ಹಾಕಿ, ಹೂ ಕುಂಡಗಳನ್ನು ಬಿಸಾಡಿದ್ದರು. ಜತೆಗೆ, ಮನೆ ಮಾರಾಟ ಮಾಡಿ ಹಣ ಕೊಡದಿದ್ದರೆ ರಿವಾಲ್ವರ್‌ನಿಂದ ಗುಂಡು ಹಾರಿಸಿ ಕೊಲ್ಲುವು ದಾಗಿ ಮಗ ಬೆದರಿಸಿದ್ದಾನೆ. ಈ ಕೃತ್ಯಕ್ಕೆ ಸೊಸೆ ಕುಮ್ಮಕ್ಕು ನೀಡಿದ್ದಾಳೆ. ಕುಟುಂಬದ ಗೌರವ ಹೋಗಲಿದೆ ಎಂಬ ಕಾರಣಕ್ಕೆ ಇಷ್ಟು ದಿನ ದೂರು ನೀಡಿರಲಿಲ್ಲ. ಅಂತಿಮವಾಗಿ ಅವರ ಕ್ರೌರ್ಯ ಸಹಿಸಲಾಗದೆ ದೂರು ನೀಡಲಾ ಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ಬಳಿಕ ಆರೋಪಿಗಳು ತಲೆಮರೆಸಿ ಕೊಂಡಿದ್ದಾರೆ. ಬಂಧನಕ್ಕೆ ಕ್ರಮ ವಹಿಸಲಾ ಗಿದೆ,” ಎಂದು ಪೊಲೀಸರು ಹೇಳಿದ್ದಾರೆ.