Home ಬೆಂಗಳೂರು ತಾಯಿಯನ್ನು ಮನೆಗೆ ಕರೆದುಕೊಂಡ ಮಗ : ಪತ್ನಿಯಿಂದ ತಗಾದೆ | ತಾಯಿಯೊಂದಿಗೆ ನೇಣು ಬಿಗಿದು ಆತ್ಮಹತ್ಯೆ...

ತಾಯಿಯನ್ನು ಮನೆಗೆ ಕರೆದುಕೊಂಡ ಮಗ : ಪತ್ನಿಯಿಂದ ತಗಾದೆ | ತಾಯಿಯೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಮಗ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಪುತ್ರನೊಬ್ಬ ವಯಸ್ಸಾದ ತಾಯಿಯನ್ನು ಮನೆಗೆ ಕರೆದುಕೊಂಡು ಬಂದ ಹಿನ್ನೆಲೆಯಲ್ಲಿ ಪತ್ನಿ ತಗಾದೆ ತೆಗೆದ ಕಾರಣದಿಂದ ಮನನೊಂದು ತಾಯಿ ಹಾಗೂ ಪುತ್ರ ನೇಣಿಗೆ ಶರಣಾಗಿರುವ ದುರ್ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಭಾಗ್ಯಮ್ಮ (57), ಆಕೆಯ ಪುತ್ರ ಶ್ರೀನಿವಾಸ್ (33) ಎಂದು ಗುರುತಿಸಲಾಗಿದೆ.

ಶ್ರೀನಿವಾಸ್ ಅವರು ಕೆಲವು ದಿನಗಳ ಹಿಂದೆ ವಯಸ್ಸಾದ ಹಿನ್ನೆಲೆಯಲ್ಲಿ ತಮ್ಮ ತಾಯಿಯನ್ನು ಊರಿನಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಆದರೆ ಇದೇ ಕಾರಣವನ್ನು ಮುಂದಿಟ್ಟುಕೊಂಡು ಶ್ರೀನಿವಾಸ್ ಪತ್ನಿ ಸಂಧ್ಯಾ ತನ್ನ ಪತಿಯೊಂದಿಗೆ ನಿತ್ಯ ಜಗಳ ಮಾಡುತ್ತಿದ್ದಳು ಎನ್ನಲಾಗಿದೆ.

ರವಿವಾರ ಬೆಳಗ್ಗೆ ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ಸಂಭವಿಸಿದೆ. ಇದರಿಂದ ಮನನೊಂದ ಶ್ರೀನಿವಾಸ್ ತನ್ನ ತಾಯಿಯೊಂದಿಗೆ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.