Home ದಕ್ಷಿಣ ಕನ್ನಡ ಪುತ್ತೂರು : ಉಪ ವಲಯ ಅರಣ್ಯಾಧಿಕಾರಿಯಿಂದ ಹಿಂದೂ,ಗೋಮಾತೆಯ ವಿರುದ್ದ,ಡಾ.ವೀರೇಂದ್ರ ಹೆಗ್ಗಡೆ ವಿರುದ್ದ ಅಶ್ಲೀಲ ಪದ ಬಳಸಿ...

ಪುತ್ತೂರು : ಉಪ ವಲಯ ಅರಣ್ಯಾಧಿಕಾರಿಯಿಂದ ಹಿಂದೂ,ಗೋಮಾತೆಯ ವಿರುದ್ದ,ಡಾ.ವೀರೇಂದ್ರ ಹೆಗ್ಗಡೆ ವಿರುದ್ದ ಅಶ್ಲೀಲ ಪದ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಉಪವಲಯ ಅರಣ್ಯಾಧಿಕಾರಿ ಕಾಣಿಯೂರಿನ ಸಂಜೀವ ಕೆ. ಎಂಬಾತ ಹಿಂದೂಗಳ ವಿರುದ್ಧ, ಗೋಮಾತೆಯ ವಿರುದ್ಧ, ಕೊರಗಜ್ಜನ ಕುರಿತು, ಡಾ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಶ್ಲೀಲ ಪದ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ವ್ಯಕ್ತಿ ಹಲವು ಸಮಯಗಳಿಂದ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಬರಹಗಳನ್ನು ಬರೆಯುತ್ತಿದ್ದು,ಪ್ರಧಾನಿ ನರೇಂದ್ರ ಮೋದಿ,ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ತನ್ನ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ದವೂ ಆಕ್ಷೇಪಾರ್ಹ ಬರಹಗಳನ್ನು ಬರೆದಿದ್ದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಭಜನಾ ಕಾರ್ಯಕ್ರಮದ ಬಗ್ಗೆಯೂ ಆಕ್ಷೇಪಾರ್ಹ ಬರಹದಿಂದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.