Home Karnataka State Politics Updates Karkala: ಕರಾವಳಿಗರಿಗೆ ಬಿಗ್ ಶಾಕ್- ಕಾರ್ಕಳ ಪರಶುರಾಮನ ಮೂರ್ತಿ ಬದಲಾವಣೆ ?! ಅಸಲಿ-ನಕಲಿ ಬಗ್ಗೆ ಸಚಿವೆ...

Karkala: ಕರಾವಳಿಗರಿಗೆ ಬಿಗ್ ಶಾಕ್- ಕಾರ್ಕಳ ಪರಶುರಾಮನ ಮೂರ್ತಿ ಬದಲಾವಣೆ ?! ಅಸಲಿ-ನಕಲಿ ಬಗ್ಗೆ ಸಚಿವೆ ಹೇಳಿದ್ದೇನು?

Karkala parasurama idol

Hindu neighbor gifts plot of land

Hindu neighbour gifts land to Muslim journalist

Karkala parasurama idol : ಕಾರ್ಕಳದ(Karkala) ಥೀಮ್ ಪಾರ್ಕ್ ನಲ್ಲಿ ಬಿಜೆಪಿ ನಾಯಕ ಸುನಿಲ್ ಕುಮಾರ್(Sunil kumar) ನೇತೃತ್ವದಲ್ಲಿ ನಿರ್ಮಿಸಲಾದ ಪರಶುರಾಮನ 33ಅಡಿ ಎತ್ತರದ ಕಂಚಿನ ಮೂರ್ತಿಯು (Karkala parasurama idol)ನಕಲಿ ಎಂಬ ವಿಚಾರ ಭಾರಿ ದಿನಗಳಿಂದ ಕರಾವಳಿಯಾದ್ಯಂತ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಸ್ಥಳಕ್ಕೆ ಭೇಟಿ ನೀಡಿದ್ದು ಮೂರ್ತಿಯ ಪರಿಶೀಲನೆಯನ್ನು ಮಾಡಿ ಅಧಿಕಾರಿಗಳನ್ನು ತಾರಾಟಗೆ ತೆಗೆದುಕೊಂಡಿದ್ದಾರೆ.

ಹೌದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಕಾಳದ ಬೈಲೂರು ಗ್ರಾಮದ ಉಮಿಕಲ್ ಬೆಟ್ಟದ ಮೇಲೆ
ಕಾರ್ಕಳದ ಶಾಸಕ, ಮಾಜಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರ ಮಹಾತ್ವಾಕಾಂಕ್ಷೆಯ ಈ ಪರಶುರಾಮ ಥೀಮ್ ಪಾರ್ಕ್‌ನ್ನು ಬಿಜೆಪಿ ಸರ್ಕಾರದ ಅವಧಿಯ ಕೊನೆಯಲ್ಲಿ ವಿಧಾನಸಭಾ ಚುನಾವಣೆಯ ಮೊದಲು ತರಾತುರಿಯಲ್ಲಿ ಮುಖ್ಯಮಂತ್ರಿ ಬೊಮ್ಮಯಿ ಉದ್ಘಾಟಿಸಿದ್ದರು. ಆದರೆ 15 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪರಶುರಾಮ ಥೀಮ್ ಪಾರ್ಕ್ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಸುದ್ದಿ ಕರಾವಳಿವಳಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ವಿಚಾರ ದೃಡಪಟ್ಟ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೂರ್ತಿಯನ್ನು ಪರಿಶೀಲಿಸಿ ಇದು ಅರ್ಧ ನಕಲಿ– ಅರ್ಧ ಅಸಲಿ ಎಂದು ಹೇಳಿ, ಇದರ ನಿರ್ಮಾಣಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅಂದಹಾಗೆ ಈ ಅವ್ಯವಹಾರದ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಉಮಿಕಲ್ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಈ ಯೋಜನೆಯ ಗುತ್ತಿಗೆದಾರರಾದ ಉಡುಪಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸಚಿವೆಗೆ ಸರಿಯಾದ ಉತ್ತರವನ್ನು ನೀಡುವುದಕ್ಕೆ ತಡವರಿಸಿದರು. ಜೊತೆಗೆ ಪರಶುರಾಮನ ಪ್ರತಿಮೆಯ ಕೈ, ಮುಖ ಸೇರಿದಂತೆ ಪ್ರತಿಮೆಯ ಅರ್ಧ ಭಾಗವನ್ನೇ ಬದಲಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕೊನೆ ಕೊನೆಗೆ ಮೂರ್ತಿ ಕಂಚಿನದಲ್ಲ, ಈಗಿರುವುದು ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಮೂರ್ತಿ, ಅದನ್ನು ತೆಗೆದು ನೈಜ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಸಮಜಾಯಿಸಿ ನೀಡಲು ಅಧಿಕಾರಿಗಳು ಯತ್ನಿಸಿದರು. ಈ ಉತ್ತರ ಸಚಿವೆಗೆ ಸಮಾಧಾನ ನೀಡಲಿಲ್ಲ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಈ ನಕಲಿ ಮೂರ್ತಿ ಸ್ಥಾಪನೆಯ ಬಗ್ಗೆ ವರದಿ ಪಡೆದು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರಶುರಾಮ ಪ್ರತಿಮೆ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸಲಾಗಿದೆ. ವಿಧಾನಸಭಾ ಚುನಾವಣೆ ಹತ್ತಿರ ಇರುವಾಗ ರಾಜಕೀಯ ಲಾಭಕ್ಕಾಗಿ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ವೇಗವಾಗಿ ಮುಗಿಸಲು ಹೋಗಿ ಹಲವು ತಪ್ಪುಗಳನ್ನು ಎಸಗಿರುವುದು ಕಂಡುಬಂದಿದೆ. ಯಾವ ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು. ಸದ್ಯ ಪ್ರತಿಮೆ ವಿಚಾರದಲ್ಲಿ ರಾಜಕೀಯ ಮಾಡುವುದಕ್ಕಿಂತ ಜನರ ಸುರಕ್ಷತೆ ಮುಖ್ಯವಾಗಿದೆ. ಪ್ರತಿಮೆ ಎತ್ತರದ ಪ್ರದೇಶದಲ್ಲಿರುವುದರಿಂದ ಮಳೆ ಗಾಳಿಗೆ ಬಿದ್ದು ಅವಘಡಗಳಾದರೆ ಯಾರು ಹೊಣೆ ಎಂಬ ಆತಂಕ ಕಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಮೆ ಸುರಕ್ಷಿತವಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಮೆ ನಿರ್ಮಾಣ ಮಾಡಿರುವ ಬೆಂಗಳೂರಿನ ಕಲಾವಿದರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Kundapura name: ಚೈನ್ ಚೈತ್ರಾಳ ಹೆಸರೊಂದಿಗೆ ‘ಕುಂದಾಪುರ’ ಹೆಸರು ಬಳಸಬೇಕೋ ಬೇಡವೋ ?! ಕೋರ್ಟ್ ನಿಂದ ಬಂತು ಮಹತ್ವದ ತೀರ್ಪು !!