Home ದಕ್ಷಿಣ ಕನ್ನಡ ಮಂಗಳೂರು : ಪಕ್ಕದ ಮನೆಯಾತನ ಜೊತೆಗೆ ಎರಡು ಮಕ್ಕಳ ತಾಯಿಯ ಅಕ್ರಮ ಸಂಬಂಧ | ಮದುವೆ...

ಮಂಗಳೂರು : ಪಕ್ಕದ ಮನೆಯಾತನ ಜೊತೆಗೆ ಎರಡು ಮಕ್ಕಳ ತಾಯಿಯ ಅಕ್ರಮ ಸಂಬಂಧ | ಮದುವೆ ನಿರಾಕರಿಸಿದ್ದಕ್ಕೆ ಲಾಡ್ಜ್ ನಲ್ಲಿ ಸಾವಿಗೆ ಶರಣಾದ ಮಹಿಳೆ

Hindu neighbor gifts plot of land

Hindu neighbour gifts land to Muslim journalist

ತನ್ನ ಗಂಡನ ಸ್ನೇಹಿತ, ಪಕ್ಕದ ಮನೆಯಾತನೇ ಆಗಿದ್ದ ಯುವಕನ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡಿದ್ದ ಎರಡು ಮಕ್ಕಳ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿದ ಮಹಿಳೆಯನ್ನು ತೊಕ್ಕೊಟ್ಟಿನ ಕುತ್ತಾರು ಬಳಿಯ ಮುನ್ನೂರು ಗ್ರಾಮದ ಸುಭಾಷ್ ನಗರ ನಿವಾಸಿ ಭಾರತಿ (36) ಎಂದು ಗುರುತಿಸಲಾಗಿದೆ.

ಮಂಗಳೂರಿನ ಬಂದರಿನ ಲಾಡ್ಜ್ ಒಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿ.29ರಂದು ಮಹಿಳೆ ನಾಪತ್ತೆಯಾಗಿದ್ದು, ಈ ಬಗ್ಗೆ ಆಕೆಯ ಗಂಡ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ತಪಾಸಣೆ ನಡೆಸಿದಾಗ ಪಕ್ಕದ ಮನೆಯ ಸಂದೀಪ್ ಎಂಬಾತನೂ ನಾಪತ್ತೆಯಾಗಿದ್ದ.

ಮರುದಿನ ಸಂದೀಪ್ ತನ್ನ ಮನೆಗೆ ಮರಳಿದ್ದು, ಮಹಿಳೆಯ ಬಗ್ಗೆ ಪೊಲೀಸರು ಪ್ರಶ್ನೆ ಮಾಡಿದಾಗ ಬಂದರಿನ ಲಾಡ್ಜ್ ಹೆಸರು ಹೇಳಿದ್ದ. ಪೊಲೀಸರು ಅಲ್ಲಿಗೆ ತೆರಳಿ ನೋಡಿದಾಗ, ಮಹಿಳೆ ಕೊಠಡಿಯಲ್ಲಿ ವಿಷ ಕುಡಿದು ಮೃತಪಟ್ಟಿರುವುದು ಕಂಡುಬಂದಿತ್ತು. ಮಹಿಳೆ ಮತ್ತು ಸಂದೀಪ್ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗುತ್ತಿದ್ದು, ಇದೇ ನೆಪದಲ್ಲಿ ಆಕೆ ತನ್ನನ್ನು ಮದುವೆಯಾಗಲು ಒತ್ತಾಯಿಸಿ ನಿರಾಕರಿಸಿದ್ದಕ್ಕೆ ಸಾವಿಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ.

ಸಂದೀಪ್ ಗೆ ಈಗಾಗಲೇ ಬೇರೆ ಮದುವೆಯಾಗಿದ್ದು, ತಿಂಗಳ ಹಿಂದಷ್ಟೇ ಮಗುವಾಗಿ ಇತ್ತೀಚೆಗೆ ತನ್ನ ಮನೆಯಲ್ಲಿ ತೊಟ್ಟಿಲು ಹಾಕುವ ಕಾರ್ಯವೂ ನಡೆದಿತ್ತು. ಇವರಿಬ್ಬರ ಮನೆಯೂ ಹತ್ತಿರದಲ್ಲೇ ಇದ್ದು ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಹೆಸರಲ್ಲಿ ಕೇಸು ದಾಖಲಿಸಿ ಆರೋಪಿ ಸಂದೀಪ್ ನನ್ನು ಬಂಧಿಸಿದ್ದಾರೆ. ಮೃತ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದು, ಮಕ್ಕಳು ಮತ್ತು ಗಂಡನನ್ನು ಬಿಟ್ಟು ಸಾವಿಗೆ ಶರಣಾಗಿದ್ದಾಳೆ.

ಮೃತ ಮಹಿಳೆಯ ಗಂಡ ಮತ್ತು ಸಂದೀಪ್ ಗೆಳೆಯರಾಗಿದ್ದು, ಒಡನಾಟ ಇರಿಸಿಕೊಂಡಿದ್ದರು. ಸಂದೀಪ್ ಕುತ್ತಾರು ಕೊರಗಜ್ಜನ ಕಟ್ಟೆಯ ಬಳಿ ಫ್ಯಾಬ್ರಿಕೇಶನ್ ಅಂಗಡಿ ನಡೆಸುತ್ತಿದ್ದ ಗಂಡನ ಪರಿಚಯದಲ್ಲಿ ಮನೆಗೆ ಬರುತ್ತಿದ್ದ ಸಂದೀಪ್ ಮತ್ತು ಮಹಿಳೆಯ ನಡುವೆ ಹತ್ತಿರದ ಸಂಬಂಧ ಬೆಳೆದಿತ್ತು. ಇದೇ ಸಂಬಂಧ ಈಗ ಮಹಿಳೆಯ ಸಾವಿಗೆ ಕಾರಣವಾದರೆ, ಸಂದೀಪ್ ನನ್ನು ಜೈಲು ಕಂಬಿ ಎಣಿಸುವಂತೆ ಮಾಡಿದೆ.