Home latest Breaking : ಮಂಗಳೂರು ಮತ್ತೆ ರಕ್ತ ಸಿಕ್ತ, ಚಿನ್ನದ ಅಂಗಡಿಗೆ ನುಗ್ಗಿ ತಳವಾರ್ ದಾಳಿಗೆ ಓರ್ವ...

Breaking : ಮಂಗಳೂರು ಮತ್ತೆ ರಕ್ತ ಸಿಕ್ತ, ಚಿನ್ನದ ಅಂಗಡಿಗೆ ನುಗ್ಗಿ ತಳವಾರ್ ದಾಳಿಗೆ ಓರ್ವ ಬಲಿ !

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಮತ್ತೆ ಮಂಗಳೂರು ರಕ್ತ ಸಿಕ್ತವಾಗಿದೆ. ಮಂಗಳೂರಿನ ಹೃದಯ ಭಾಗದಲ್ಲಿ ಮತ್ತೊಂದು ಹೆಣ ಬಿದ್ದಿದೆ. ಹಲವು ಸರಣಿ ಮರ್ಡರ್ ಗಳ ನಂತರ ಸಣ್ಣ ಬಿಡುವು ಪಡೆದು ಕೊಂಡಿದ್ದ ನಗರದಲ್ಲಿ ಮತ್ತೆ ರಕ್ತ ಹರಿದಿದೆ.

ಚಿನ್ನದ ಅಂಗಡಿಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ನಗರದಲ್ಲಿ ನಡೆದಿದೆ. ಘಟನೆಯು ಮಂಗಳೂರಿನ ಹಂಪನಕಟ್ಟೆಯ ಬಳಿ ನಡೆದಿದೆ.
ಹಂಪನ ಕಟ್ಟೆಯ ಮಂಗಳೂರು ಜ್ಯುವೆಲ್ಲರ್ಸ್ ನಲ್ಲಿ ಈ ಘಟನೆ ನಡೆದಿದ್ದು ಇಂದು ಸಂಜೆ 4. 15 ರ ಸುಮಾರಿಗೆ ಆಗಂತುಕನೊಬ್ಬ ಕತ್ತಿಯ ಸಮೇತ ಪ್ರತ್ಯಕ್ಷನಾಗಿದ್ದ. ಮಂಗಳೂರು ಜ್ಯೂವೆಲ್ಲರ್ಸ್ ನಲ್ಲಿ ಕುಳಿತಿದ್ದ ವ್ಯಕ್ತಿಯ ಮೇಲೆ ಇರಿತ ಸಂಭವಿಸಿದೆ. ಚೂರಿ ಇರಿತದಿಂದ ಮೃತಪಟ್ಟ ವ್ಯಕ್ತಿಯನ್ನು ರಾಘವ ಆಚಾರಿ (50) ಎಂದು ಗುರುತಿಸಲಾಗಿದೆ.

ಚೂರಿ ಇರಿತದಿಂದ ಹತ್ಯೆ ಸಂಪೂರ್ಣ ದೃಶ್ಯಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಕೃತ್ಯ ದಾಖಲಾಗಿದೆ ಎನ್ನಲಾಗಿದ್ದು, ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊಲೆ ಸಾಧ್ಯತೆಗಳ ಪರಿಶೀಲನೆ ನಡೆಯುತ್ತಿದೆ. ಹತ್ಯೆಯು ಯಾವ ಕಾರಣಕ್ಕೆ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ. ಪೊಲೀಸರು ಸಂಪೂರ್ಣವಾಗಿ ಹತ್ಯಾ ಸ್ಥಳವನ್ನು ಸುತ್ತುವರೆದಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ಶೀಘ್ರ ಅಪ್ಡೇಟ್ ಮಾಡಲಿದ್ದೇವೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸುಳ್ಯದ ಮಸೂದ್, ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಮತ್ತು ನಂತರ ನಡೆದ ಫಾಝಿಲ್ ಹತ್ಯೆಗಳ ನಂತರ ತಲ್ಲಣಗೊಂಡಿದ್ದ ಮಂಗಳೂರಿನಲ್ಲಿ ಈಗ ಮತ್ತೊಂದು ಹತ್ಯೆ ನಡೆದಿರುವುದು ಆತಂಕ ಮೂಡಿಸಿದೆ.