Home ದಕ್ಷಿಣ ಕನ್ನಡ ಮಂಗಳೂರು : ಚೂರಿ ಇರಿದು ವ್ಯಕ್ತಿಯ ಹತ್ಯೆ | ಫಾಝಿಲ್ ಹತ್ಯೆ ಬೆನ್ನಲ್ಲೇ ನಡೆಯಿತು ಮತ್ತೊಂದು...

ಮಂಗಳೂರು : ಚೂರಿ ಇರಿದು ವ್ಯಕ್ತಿಯ ಹತ್ಯೆ | ಫಾಝಿಲ್ ಹತ್ಯೆ ಬೆನ್ನಲ್ಲೇ ನಡೆಯಿತು ಮತ್ತೊಂದು ಕೃತ್ಯ !!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಕಳೆದ ಕೆಲ ತಿಂಗಳುಗಳ ಹಿಂದೆ ನಡೆದ ಸರಣಿ ಹತ್ಯೆಯ ಬಳಿಕ ಉದ್ವಿಗ್ನಗೊಂಡು ಇದೀಗ ತಾನೇ ಶಾಂತವಾಗಿದ್ದ ಜಿಲ್ಲೆಯಲ್ಲಿ ಮತ್ತೆ ನೆತ್ತರು ಹರಿದಿದೆ. ಇಂದು ಇಳಿ ಸಂಜೆಯ ಹೊತ್ತಿನಲ್ಲಿ ಮಂಗಳೂರಿನ ಹೊರವಲಯದ ಸುರತ್ಕಲ್ ಪ್ರದೇಶದಲ್ಲಿ ತಳವಾರ್ ಝಳಪಿಸಿದೆ. ಫಾಝಿಲ್ ಹತ್ಯೆ ನಡೆದ ಸುರತ್ಕಲ್ ಸುತ್ತಮುತ್ತಲೇ ಈ ಹತ್ಯೆ ನಡೆದಿದೆ. ಸರಣಿ ಸಾವು ಕಂಡು ಕಂಗಾಲಾಗಿದ್ದ ಕರಾವಳಿಯ ಜನತೆ ಬೆಚ್ಚಿ ಬಿದ್ದಿದ್ದಾರೆ.

ಸುರತ್ಕಲ್ ಸಮೀಪದ ಕಾಟಿಪಳ್ಳ ನೈತಂಗಡಿ ಪ್ರದೇಶದಲ್ಲಿ ಯುವಕನೊಬ್ಬನಿಗೆ ಚೂರಿ ಇರಿತವಾಗಿತ್ತು. ಆತ ಗಂಭೀರವಾಗಿ ಗಾಯಗೊಂಡ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಾಳು ಯುವಕನನ್ನು ಕೃಷ್ಣಾಪುರ ನಿವಾಸಿ ಜಲೀಲ್ ಎಂದು ಗುರುತಿಸಲಾಗಿದ್ದು, ದಾಳಿ ನಡೆಸಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಚೂರಿ ಇರಿತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಕಳೆದ ಕೆಲ ತಿಂಗಳುಗಳ ಹಿಂದೆ ಸುರತ್ಕಲ್ ನಲ್ಲಿ ಫಾಝಿಲ್ ಎಂಬ ಯುವಕನೊಬ್ಬನನ್ನು ಸಂಜೆ ವೇಳೆಗೆ ಅಂಗಡಿಯೊಂದರ ಮುಂಭಾಗದಲ್ಲೇ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡವು ಹತ್ಯೆ ಮಾಡಿತ್ತು. ಇಂದು ಅದೇ ರೀತಿಯಲ್ಲಿ ಜಲೀಲ್ ಗೂ ಚೂರಿ ಇರಿತವಾಗಿದ್ದು, ಇದೂ ಅಂಗಡಿಯೊಂದರ ಮುಂಭಾಗದಲ್ಲೇ ನಡೆದ ಕೃತ್ಯ ಇದಾಗಿದೆ.

ಸದ್ಯ ಘಟನೆಯಿಂದ ಗಾಯಗೊಂಡ ಯುವಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಸ್ಪತ್ರೆಯಲ್ಲಿ ಆತ ಕೊನೆಯುಸಿರಿಳೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ಹತ್ಯೆ ಯಾಕಾಯಿತು, ಅದರ ಹಿನ್ನೆಲೆ ಏನು ಎಂಬ ಮಾಹಿತಿ ಇನ್ನು ಕೂಡಾ ಬಂದಿಲ್ಲ. ಆದರೆ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಕೋಲ ನಡೆದಿದೆ ಎನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ದೌಡಾಯಿಸಿದ್ದು ಅಲ್ಲಿನ ಪ್ರದೇಶವನ್ನು ತಮ್ಮ ನಿಯಂತ್ರಣಕ್ಕೆ ತಂದುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.