Home ದಕ್ಷಿಣ ಕನ್ನಡ Dharmasthala Sowjanya: ಪೂಂಜಾ ಮೇಲೆ ಭರವಸೆ ಇಲ್ಲ; ನಾವು ಚಿಕ್ಕ ತೋಡು, ಅದು ಮಹಾ ಸಮುದ್ರ...

Dharmasthala Sowjanya: ಪೂಂಜಾ ಮೇಲೆ ಭರವಸೆ ಇಲ್ಲ; ನಾವು ಚಿಕ್ಕ ತೋಡು, ಅದು ಮಹಾ ಸಮುದ್ರ – ಆದರೂ ನಾವು ಈಜುತ್ತೇವೆ ಎಂದ ಸೌಜನ್ಯಾ ತಾಯಿ !

Hindu neighbor gifts plot of land

Hindu neighbour gifts land to Muslim journalist

Dharmasthala Sowjanya: ಕಳೆದ 11 ವರ್ಷಗಳ ಹಿಂದೆ ಬೆಳ್ತಂಗಡಿ (Belthangdi )ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಗೌಡ  (Sowjanya) ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿದ್ದ ಆರೋಪಿ ಸಂತೋಷ್ ರಾವ್ ದೋಷ ಮುಕ್ತಗೊಂಡ ಬೆನ್ನಲ್ಲೇ ಮತ್ತೊಮ್ಮೆ ಹೋರಾಟದ ಕಿಚ್ಚು ಹತ್ತಿದ್ದು, ಶೀಘ್ರ ಮರು ತನಿಖೆ ನಡೆಸಲು ಹಲವೆಡೆ ಪ್ರತಿಭಟನೆ ಆರಂಭಗೊಂಡಿದೆ.

ಇತ್ತೀಚೆಗೆ ಸೌಜನ್ಯ (Dharmasthala Sowjanya) ಅತ್ಯಾಚಾರ, ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಮಹತ್ತರ ತಿರುವು ಪಡೆದುಕೊಳ್ಳುತ್ತಿದೆ. ಜೊತೆಗೆ ಪ್ರಕರಣದ ಮರು ತನಿಖೆಗೆ ಒತ್ತಾಯ ಕೇಳಿಬರುತ್ತಿದೆ. ಈ ಮಧ್ಯೆ ಸೌಜನ್ಯ ತಾಯಿ ಕುಸುಮಾವತಿ ನ್ಯೂಸ್ 18 ಸಂದರ್ಶನದಲ್ಲಿ ಹೇಳಿಕೆ ನೀಡಿದ್ದು ಭಾರೀ ವೈರಲ್ ಆಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramigh) ನೇತೃತ್ವದಲ್ಲಿ ಪ್ರಕರಣದ ಮರು ತನಿಖೆಗೆ ಸೌಜನ್ಯ ತಾಯಿ ಕುಸುಮಾವತಿ ಒತ್ತಾಯ ಮಾಡಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ಸರಿಯಾದ ತನಿಖೆ ಮಾಡುವಂತೆ ಒತ್ತಾಯ ಮಾಡಿದ್ದೇವೆ. 11 ವರ್ಷದ ಹಿಂದೆ ನಾವು ಕೆಲವರ ಹೆಸರು ನೀಡಿದ್ದೆವು. ಆದರೆ, ಅವರ ಮೇಲೆ ತನಿಖೆ ನಡೆದಿಲ್ಲ. ಇಷ್ಟು ದಿನ ಪ್ರಕರಣದ ತನಿಖಾ ತಂಡದಲ್ಲಿದ್ದ ಪೊಲೀಸರು ಹಾಗೂ ವೈದ್ಯರನ್ನು ಸಹ ವಿಚಾರಣೆಗೆ ಒಳಪಡಿಸಬೇಕು ಎಂದು ಕುಸುಮಾವತಿ ಮನವಿ ಮಾಡಿಕೊಂಡರು. ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರು ಒಮ್ಮೆ ನಮ್ಮ ಮನೆಗೆ ಬರಬೇಕು. ಅವರ ನೇತೃತ್ವದಲ್ಲಿ ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Harish poonja) ಅವರು ಸೌಜನ್ಯ ಪ್ರಕರಣದ ಮರು ತನಿಖೆ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಮಾತನಾಡಿದ ಸೌಜನ್ಯ‌ ತಾಯಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮರು ತನಿಖೆಗೆ ಮನವಿ ಮಾಡಿದ್ದಾರೆ. ಆದರೆ ಇದರ ಮೇಲೆ‌ ನಮಗೆ ಭರವಸೆ ಇಲ್ಲ. ಇವರು ಪ್ರಕರಣವನ್ನು ಇಲ್ಲಿಗೆ ನಿಲ್ಲಿಸಬೇಕು ಎಂಬ ಉದ್ದೇಶದಿಂದ ಸಿಎಂ ಬಳಿ ಮನವಿ ಮಾಡಿದ್ದಾರೆ. ಅಲ್ಲದೆ, ಹರೀಶ್ ಪೂಂಜಾ ಅವರು ನಮ್ಮನ್ನು ಜೊತೆಗೆ ಕರೆದುಕೊಂಡು ಹೋಗಿ ಮನವಿ ಮಾಡಬಹುದಿತ್ತು. ಶಾಸಕ ಹರೀಶ್ ಪೂಂಜಾ ಒಮ್ಮೆಯೂ ನಮ್ಮ ಮನೆಗೆ ಭೇಟಿ ನೀಡಿಲ್ಲ. ನಾವು ಚಿಕ್ಕ ತೋಡು, ಅದು ಮಹಾ ಸಮುದ್ರ ಆದರೂ ನಾವು ಈಜುತ್ತೇವೆ ಎಂದು ಸೌಜನ್ಯಾ ತಾಯಿ ಹೇಳಿದರು.

ಜಿಲ್ಲೆಯ ಜನ ನಮ್ಮ‌ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ರಾಜ್ಯಾ, ದೇಶಾದ್ಯಂತ ನಮ್ಮ ಹೋರಾಟಕ್ಕೆ ಬೆಂಬಲ ಸಿಗುತ್ತಿದೆ. ಅವರ ಮನೆಯ ಮಗಳ ರೀತಿ ಜನ ಮರು ತನಿಖೆಗೆ ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Nitin Desai Death: ‘ಬಿಗ್ ಬಾಸ್’ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಿಗ್ ಮನೆಯ ಒಡೆಯ !