Home ದಕ್ಷಿಣ ಕನ್ನಡ ಫೆ.9-13 : ಗುರುವಾಯನಕೆರೆ ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಬ್ರಹ್ಮ ಕುಂಬಾಭಿಷೇಕ 

ಫೆ.9-13 : ಗುರುವಾಯನಕೆರೆ ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಬ್ರಹ್ಮ ಕುಂಬಾಭಿಷೇಕ 

Hindu neighbor gifts plot of land

Hindu neighbour gifts land to Muslim journalist

Beltangady: ಸುಮಾರು 800 ವರ್ಷಗಳ ಇತಿಹಾಸ ಇರುವ ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದಲ್ಲಿ 12 ವರ್ಷಗಳ ನಂತರ ಬ್ರಹ್ಮಕುಂಭಾಭಿಷೇಕ ಫೆ.9ರಿಂದ ಫೆ 13ರವರೆಗೆ ನಡೆಯಲಿದೆ.

ಉದ್ಯಮಿ ಹಾಗೂ ಧಾರ್ಮಿಕ ಹಾಗೂ ಸಾಮಾಜಿಕ ಧುರೀಣ ಶಶಿಧರ್ ಶೆಟ್ಟಿ ಬರೋಡ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬ್ರಹ್ಮ ಕುಂಭಾಭಿಷೇಕಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಫೆ.7ರಂದು – ದೈವಸ್ಥಾನದ ಕಾರ್ಯಾಲಯವನ್ನು ಶಕ್ತಿನಗರ ನವಶಕ್ತಿ ರಾಜೇಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ.

ಫೆ.9ರಂದು ಸಂಜೆ 5 ಗಂಟೆಗೆ ನವಶಕ್ತಿ ಕ್ರೀಡಾಂಗಣದಿಂದ ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದವರೆಗೆ ಮೆರವಣಿಗೆ ಹಾಗೂ 7.30ರ ಹೊತ್ತಿಗೆ ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲರಿಂದ ಉಗ್ರಾಣ ಮುಹೂರ್ತ ನೆರವೇರಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮಸ್ಥಳ ಕ್ಷೇತ್ರದ ಡಿ. ಹರ್ಷೇದ್ರ ಕುಮಾ‌ರ್ ನೆರವೇರಿಸಲಿದ್ದು ಶಶಿಧರ್ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸಲಿದ್ದಾರೆ.ವಾಗ್ಮಿ ಶ್ರೀಕಾಂತ್ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಫೆ. 10ರಂದು ಶಶಿಧರ್ ಶೆಟ್ಟಿ ಬರೋಡ ಸಭಾಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ವಿದ್ವಾಂಸ ದಯಾನಂದ ಕತ್ತಲ್‌ಸಾ‌ರ್ ಹಾಗೂ ಫೆ. 11ರ ಸಭಾ ಕಾರ್ಯಕ್ರಮದಲ್ಲಿ ತುಳು ಜನಪದ ವಿದ್ವಾಂಸ ಕೆ.ಕೆ. ಪೇಜಾವರ ಸುರತ್ಕಲ್ ಹಾಗೂ ರವೀಶ್ ಪಡುಮಲೆಯವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಮೂರು ದಿನವೂ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದ್ದು ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಎಕ್ಸೆಲ್ ಕಲಾ ವೈಭವ ನೂತನ ನೃತ್ಯ ಪ್ರಕಾರಗಳ ಅನಾವರಣ, ಗುರುವಾಯನಕರೆಯ ವೇದ ವ್ಯಾಸ ಶಿಶುಮಂದಿರದ ಮಕ್ಕಳಿಂದ ಹೆಜ್ಜೆನಾದ, ಬೆನಕ ಆರ್ಟ್ಸ್ ತಂಡದಿಂದ ಪೊರಿಪುದಪ್ಪೆ ಜಲದುರ್ಗೆ ನಾಟಕ ನಡೆಯಲಿದೆ. ಫೆ.11ರಂದು ರಾತ್ರಿ ಗುರುವಾಯನಕೆರೆಯ ದೇವಿಕಿರಣ್ ಕಲಾನಿಕೇತನ ತಂಡದಿಂದ ನೃತ್ಯಾರ್ಪಣಂ ಹಾಗೂ ಪುಂಜಾಲಕಟ್ಟೆ ಯಕ್ಷಧ್ರುವ ಪಟ್ಲ ಫೌಂಡೇಶನ್ ವಿದ್ಯಾರ್ಥಿಗಳಿಂದ ರತಿಕಲ್ಯಾಣ ಯಕ್ಷಗಾನ ಬಯಲಾಟ ಜರಗಲಿದೆ.

ಫೆ 12ರಂದು ಬೆಳಗ್ಗೆಯಿಂದ ಕುಂಭ ಸಂಕ್ರಮಣದ ಕುಂಭಲಗ್ನದಲ್ಲಿ ಪ್ರಧಾನ ಕುಂಭಾಭಿಷೇಕ ಪೂಜೆ ಹಾಗೂ ಸಂಜೆಯಿಂದ ಬಲಿ ಉತ್ಸವ ಮತ್ತು ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ. ಈ ಬಾರಿ ವಿಶೇಷಎಂಬಂತೆ ಫೆ.13ರಂದು ಕುರಿತಂಬಿಲ ಸೇವೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.