Home latest ಸುಳ್ಯದಲ್ಲಿ ಭೂಕಂಪನ : ಇಂದು ಮತ್ತೆ ಕಂಪಿಸಿದ ಭೂಮಿ, ಆತಂಕಗೊಂಡ ಜನ

ಸುಳ್ಯದಲ್ಲಿ ಭೂಕಂಪನ : ಇಂದು ಮತ್ತೆ ಕಂಪಿಸಿದ ಭೂಮಿ, ಆತಂಕಗೊಂಡ ಜನ

Hindu neighbor gifts plot of land

Hindu neighbour gifts land to Muslim journalist

ದಕ್ಷಿಣ ಕನ್ನಡದ ಕರಾವಳಿ ಭಾಗ ಸೇರಿದಂತೆ ಹಲವು ಕಡೆ ಭಾರೀ ಮಳೆ ಗಾಳಿ ಉಂಟಾಗಿದ್ದು, ಭಾರೀ ಆಸ್ತಿ ಪಾಸ್ತಿ ಹಾನಿಯುಂಟಾಗಿದ್ದು, ಅಕ್ಷರಶಃ ಜನ ನಲುಗಿ ಹೋಗಿರುವಂಥದ್ದಂತೂ ನಿಜ.

ಸುಳ್ಯದ ಕೆಲವು ಕಡೆ ಭಾರೀ ತಲ್ಲಣ ಮೂಡಿಸಿದ್ದ ಭೂಕಂಪನ, ಕಳೆದ ಕೆಲ ದಿನಗಳಿಂದ ತಣ್ಣಗಾಗಿತ್ತುಮ ಆದರೆ ಇಂದು ( ಆ.14) ಸುಳ್ಯದ ಕೆಲಭಾಗಗಳಲ್ಲಿ ಸಂಜೆ ಮತ್ತೆ ಭೂಮಿ ಕಂಪಿಸಿದೆ.

ತಾಲೂಕಿನ ಕಲಕಾರು, ಕೊಲ್ಲಮೊಗ್ರು ಗ್ರಾಮಗಳಲ್ಲಿ ಸಂಜೆ 6ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಗುತ್ತಿಗಾರು, ದೇವಚಳ್ಳ, ಮಡಪ್ಪಾಡಿ, ಮರ್ಕಂಜ ಭಾಗಗಳಲ್ಲಿ ಗುಡುಗಿನಂತಹ ಶಬ್ದ ಕೇಳಿಬಂದಿದೆ.
ಇದರಿಂದ ಜನರು ಮತ್ತೆ ಭಯಭೀತರಾಗಿದ್ದಾರೆ.