Home Crime Vitla: ಅಡ್ಯನಡ್ಕ ಕರ್ನಾಟಕ ಬ್ಯಾಂಕ್‌ ಕಳವು ಪ್ರಕರಣ; ಮೂವರು ಅಂತರಾಜ್ಯ ಕಳ್ಳರ ಬಂಧನ, ಆರೋಪಿಗಳನ್ನು ಪತ್ತೆ...

Vitla: ಅಡ್ಯನಡ್ಕ ಕರ್ನಾಟಕ ಬ್ಯಾಂಕ್‌ ಕಳವು ಪ್ರಕರಣ; ಮೂವರು ಅಂತರಾಜ್ಯ ಕಳ್ಳರ ಬಂಧನ, ಆರೋಪಿಗಳನ್ನು ಪತ್ತೆ ಮಾಡಿದ ತಂಡಕ್ಕೆ ಬಹುಮಾನ ಘೋಷಣೆ

Vitla

Hindu neighbor gifts plot of land

Hindu neighbour gifts land to Muslim journalist

Vitla: ಬಂಟ್ವಾಳ ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಕರ್ನಾಟಕ ಬ್ಯಾಂಕಿನಲ್ಲಿ ನಗ,ನಗದು ಕಳ್ಳತನ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ವಿಶೇಷ ತನಿಖಾ ತಂಡ ತನಿಖೆ ನಡೆಸಲಾಗಿ ಆರೋಪಿಗಳನ್ನು ಪೊಲೀಸರು ಬಂಧಿದ್ದು, ಈ ಕುರಿತು ದ.ಕ.ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಸಿ ಬಿ ರಿಷ್ಯಂತ್‌ ಐ.ಪಿ.ಎಸ್‌ ಪತ್ರಿಕಾಗೋಷ್ಠಿ ಮೂಲಕ ಮಾಹಿತಿಯನ್ನು ನೀಡಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: BS Yediyurappa: ಬಿಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್‌; CID ಗೆ ವರ್ಗಾವಣೆ

ಬಂಟ್ವಾಳ ಗೂಡಿನ ಬಳಿ ನಿವಾಸಿ ಮಹಮ್ಮದ್‌ ರಫೀಕ್‌ (35), ಮಂಜೇಶ್ವರ ಬಿಂಗಿನಾನಿ ನಿವಾಸಿ ಇಬ್ರಾಹಿಂದ ಕಲಂದರ್‌ (41), ಮಂಜೇಶ್ವರ ಗಾಳಿಯಡ್ಕ ನಿವಾಸಿ ದಯಾನಂದ ಎಸ್‌ (37) ಬಂಧಿತರು.

ಮಾ.7 ರಂದು ಕರ್ನಾಟಕ ಬ್ಯಾಂಕಿನ ಕಿಟಿಯ ಸರಳನ್ನು ಕಳ್ಳರು ಮುರಿದು ಒಳಪ್ರವೇಶಿಸಿ ಗ್ಯಾಸ್‌ ಕಟರ್‌ನಿಂದ ಸ್ಟ್ರಾಂಗ್‌ ರೂಮಿನ ಬಾಗಿಲನ್ನು ತುಂಡರಿಸಿ ಒಳ ಪ್ರವೇಶಿಸಿ 17,28,735 ರೂ. ನಗದು 696.21 ಗ್ರಾಂ ಚಿನ್ನಾಭರಣ ಮತ್ತು 1ಲಕ್ಷ ಮೌಲ್ಯದ ಬೆಳ್ಳಿ ಕಳ್ಳತನದ ಮಾಡಿದ್ದರು. ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಕುರಿತಂತೆ ಆರೋಪಿಗಳನ್ನು ಬಂಧನ ಮಾಡಲಾಗಿದ್ದು 2,40,700/-, ಕಳ್ಳತನ ಹಣದಿಂದ ಗೃಹಪಯೋಗಿ ಸಾಮಾಗ್ರಿ ಮೌಲ್ಯ 2 ಲಕ್ಷ ರೂ.4,40,700/- ಹಾಗೂ 12,48,218/- ಮೌಲ್ಯದ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಬ್ರಿಝಾ ಕಾರು-01 ಗ್ಯಾಸ್‌ ಕಟರ್‌ ಹಾಗೂ ಇತರೆ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 25,70,918 ಎಂದು ವರದಿಯಾಗಿದೆ.

ಸದ್ರಿ ಆರೋಪಿ ಪತ್ತೆಯ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಬಂಧಿಸಿದ ಪೊಲೀಸ್‌ ತಂಡಕ್ಕೆ ಪೊಲೀಸ್ ಅಧೀಕ್ಷಕರು ನಗದು ಬಹುಮಾನ ಘೋಷಿಸಿರುತ್ತಾರೆ.