

Belthangady: ಮೂಡಿಗೆರೆ ತಾಲೂಕಿನ ದೇವರ ಮನೆ ಪ್ರವಾಸಕ್ಕೆ ಬಂದಿದ್ದ ಬೆಳ್ತಂಗಡಿ(Belthangady) ತಾಲೂಕಿನ ಕೊಯ್ಯೂರು ಗ್ರಾಮದ ದೀಕ್ಷಿತ್ (27)ಎಂಬಾತ ಅ.10 ರಂದು ಮಂಗಳವಾರ ಸಂಜೆ ನಾಪತ್ತೆಯಾಗಿರುದ ಘಟನೆಯೊಂದು ನಡೆದಿದೆ.
ಸಂಜೆ ನಾಪತ್ತೆಯಾಗಿರುವ ಈತನನ್ನು ಸ್ಥಳೀಯರು ಹಾಗೂ ಬಣಕಲ್ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.
ನಾಲ್ಕು ಯುವಕರ ತಂಡವೊಂದು ದೇವರಮನೆಗೆ ಪ್ರವಾಸಕ್ಕೆ ಹೋಗಿದ್ದು, ವಾಪಾಸು ಬರುವ ಸಂದರ್ಭದಲ್ಲಿ ಗಲಾಟೆ ನಡೆದಿತ್ತು ಎನ್ನಲಾಗಿದೆ. ನಂತರ ಈ ಯುವಕ ಕೋಪದಿಂದ ಬೇರೆಯಾಗಿ ಹೋಗಿದ್ದ ಎನ್ನಲಾಗಿದೆ. ಯುವಕನ ನಾಪತ್ತೆ ಪ್ರಕರಣ ಅನುಮಾನ ಮೂಡಿಸಿದ್ದು, ಹುಡುಕಾಟ ಮುಂದುವರಿದಿದೆ.
ಇದೀಗ ಬಂದ ಸುದ್ದಿ: ಬೆಳ್ತಂಗಡಿ ತಾಲೂಕಿನ ನಾಲ್ಕು ಜನ ಒಂದೇ ಊರಿನವರು ಪ್ರವಾಸಕ್ಕೆಂದು ದೇವರ ಮೆನಗೆ ಕಾರಿನಲ್ಲಿ ಹೋಗಿದ್ದರು. ಆದರೆ ಪ್ರವಾಸ ಮುಗಿಸಿ ವಾಪಾಸು ಬರುವ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕರ ಮಧ್ಯೆ ಗಲಾಟೆ ನಡೆದಿದ್ದು, ಹೊಡೆದಾಟ ಮಾಡಿದ್ದಾರೆ. ನಂತರ ಕೋಪದಿಂದ ದೀಕ್ಷಿತ್ ಪೂಜಾರಿ ಬೇರೆ ಹೋಗಿದ್ದ.
ಅನಂತರ ಹುಡುಕಾಟ ನಡೆದಿದ್ದು, ಇಂದು ಕೂಡಾ ಕಾರ್ಯಾಚರಣೆ ಮುಂದುವರಿದಿದ್ದು, ಇದೀಗ ನಾಪತ್ತೆಯಾದ ಯುವಕ ಬೇರೆ ವಾಹನದ ಮೂಲಕ ಊರಿಗೆ ಮರಳಿ ಬಂದಿರುವ ಬಗ್ಗೆ ಬಣಕಲ್ ಪೊಲೀಸರಿಗೆ ಮನೆಮಂದಿ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದೀಗ ನಾಪತ್ತೆ ಯುವಕ ಅ.11ರಂದು ಬೆಳಗ್ಗೆ ಮನೆಯ ಹತ್ತಿರದ ಮೋರಿಯಲ್ಲಿ ಕುಳಿತಿರುವುದನ್ನು ಊರವರು ಪತ್ತೆ ಹಚ್ಚಿ ಮನೆಗೆ ಸೇರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೊನೆಗೂ ಯುವಕನ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.
ಇದನ್ನೂ ಓದಿ: Psycho Lover:ಪ್ರಿಯತಮೆ ಪಾಲಿಗೆ ವಿಕೃತ ಕಾಮಿಯಾದ ಪ್ರಿಯತಮ – ತನ್ನವಳ ನಗ್ನ ಫೋಟೋವನ್ನೇ ಎಲ್ಲರಿಗೂ ಹಂಚಿದ













