Home ದಕ್ಷಿಣ ಕನ್ನಡ ಬಂಟ್ವಾಳ : ಹುಲ್ಲುಗಾವಲಿಗೆ ಹಚ್ಚಿದ ಬೆಂಕಿ ದಂಪತಿಗಳನ್ನೇ ಸುಟ್ಟಿತು !

ಬಂಟ್ವಾಳ : ಹುಲ್ಲುಗಾವಲಿಗೆ ಹಚ್ಚಿದ ಬೆಂಕಿ ದಂಪತಿಗಳನ್ನೇ ಸುಟ್ಟಿತು !

Hindu neighbor gifts plot of land

Hindu neighbour gifts land to Muslim journalist

 

ಮಂಗಳೂರು : ಗುಡ್ಡವೊಂದರಲ್ಲಿ ಹುಲ್ಲುಗಾವಲಿಗೆ ಬೆಂಕಿ ಹಚ್ಚಿದ ಪತಿ ಪತ್ನಿ ಇಬ್ಬರೂ ಸಜೀವ ದಹನಗೊಂಡ ಘಟನೆ ಬಂಟ್ವಾಳ ತಾಲೂಕಿನ ಲೋರೆಟ್ಟೋ ಸಮೀಪದ ತುಂಡುಪದವು ಎಂಬಲ್ಲಿ ಜ.28ರ ಭಾನುವಾರ ಮಧಾಹ್ನ ವೇಳೆ ಸಂಭವಿಸಿದೆ.

ಲೊರೆಟ್ಟೆಪದವು ತುಂಡುಪದವು ನಿವಾಸಿ, ಕ್ರಿಸ್ಟಿನ್ ಕಾರ್ಲೋ(51) ಹಾಗೂ ಗಿಲ್ಬರ್ಟ್ ಕಾರ್ಲೊ (65) ಮೃತಪಟ್ಟವರು. ಮೃತರ ಮನೆ ಸಮೀಪದ ಗುಡ್ಡದಲ್ಲಿರುವ ಮುಳಿಹುಲ್ಲು ತೆಗೆಯುವ ಉದ್ದೇಶದಿಂದ ಅದಕ್ಕೆ ಬೆಂಕಿ ನೀಡಿದ್ದರು. ಮಧ್ಯಾಹ್ನದ ವೇಳೆಯಾಗಿದ್ದ ಕಾರಣ ಬೆಂಕಿಯ ಜ್ವಾಲೆ ಇವರಿಗೂ ಹತ್ತಿಕೊಂಡಿರಬೇಕು ಎಂದು ಶಂಕಿಸಲಾಗಿದೆ.

ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.