Home latest ಬಂಟ್ವಾಳ : ವಿವಾಹಿತ ಸಂಬಂಧಿಕ ಮಹಿಳೆಯರ ಜೊತೆ ದೈಹಿಕ ಸಂಪರ್ಕ| ನಂತರ ಹಣಕ್ಕಾಗಿ ಬೇಡಿಕೆ |...

ಬಂಟ್ವಾಳ : ವಿವಾಹಿತ ಸಂಬಂಧಿಕ ಮಹಿಳೆಯರ ಜೊತೆ ದೈಹಿಕ ಸಂಪರ್ಕ| ನಂತರ ಹಣಕ್ಕಾಗಿ ಬೇಡಿಕೆ | ಆರೋಪಿಯನ್ನು ಜೈಲಿಗಟ್ಟಿದ ಪೊಲೀಸರು

Hindu neighbor gifts plot of land

Hindu neighbour gifts land to Muslim journalist

ಬಂಟ್ವಾಳ : ಸಂಬಂಧಿಕರ ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ನಂತರ ಹಣಕ್ಕಾಗಿ ಪೀಡಿಸುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಟ್ವಾಳ ಮಂಡಾಡಿ ನಿವಾಸಿ ರಾಧಾಕೃಷ್ಣ ಬಂಧಿತ ಆರೋಪಿ. ಈತನನ್ನು ಬಂಟ್ವಾಳದಲ್ಲೇ ಬಂಧಿಸಲಾಗಿದೆ.

ಬಂಟ್ವಾಳ ಬಿ‌.ಕಸ್ಬಾ ಗ್ರಾಮದ ನಿತ್ಯಾನಂದ ನಗರ ನಿವಾಸಿ ಮಹಿಳೆಯೊಬ್ಬಳ ನಗ್ನ ಫೋಟೋಗಳನ್ನು ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆಯ ಗಂಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಆರೋಪಿ ರಾಧಾಕೃಷ್ಣ ಈ ಮಹಿಳೆಯ ನಗ್ನ ಫೋಟೋಗಳನ್ನು ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತೇನೆಂದು ಹೆದರಿಸಿ ಕಳೆದ ಕೆಲವು ದಿನಗಳಿಂದ 4.48 ಲಕ್ಷ ರೂ. ನೀಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ನಂತರ ಮಹಿಳೆಯ ಗಂಡನ ಬಳಿ ಫೋಟೋ‌ ತೋರಿಸಿ ಹಣ ಕೊಡುವಂತೆ ಹೆದರಿಸಿದ್ದಾನೆ. ಎರಡು ದಿನಗಳ ಬಳಿಕ‌ ಸಂಬಂಧಿಕರ ವಾಟ್ಸಪ್ ಗ್ರೂಪ್ ಮಾಡಿದ್ದಾರೆ. ಇದರಲ್ಲಿ ಒಟ್ಟು 17 ಜನರನ್ನು ಸೇರಿಸಿದ್ದಾನೆ. ಅದರಲ್ಲಿ ಸಂತ್ರಸ್ತ ಮಹಿಳೆ ಜೊತೆಗೆ ಆಕೆಯ ಗಂಡನನ್ನು ಕೂಡಾ ಸೇರಿಸಿದ್ದಾನೆ. ನಂತರ ಈ ಫೋಟೋಗಳನ್ನು ಶೇರ್ ಮಾಡಿದ್ದಾನೆ. ಈ ಬಗ್ಗೆ ಗಂಡ ದೂರಿನಲ್ಲಿ ತಿಳಿಸಿದ್ದಾರೆ.

ಮದುವೆಯಾದ ಮಹಿಳೆಯರು ಅದರಲ್ಲೂ ಸಂಬಂಧಿಕ ಮಹಿಳೆಯರೇ ಈತನ ಟಾರ್ಗೆಟ್ . ಈತ ಇಲ್ಲಿಯವರೆಗೆ 10 ಕ್ಕೂ ಹೆಚ್ಚು ಮಹಿಳೆಯರ ಜೊತೆ ಈ ರೀತಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ‌ಪೊಲೀಸರು ಈಗ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.