Home latest ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಆಂಡ್ ಕಾಮರ್ಸ್ ಕಾಲೇಜಿನಲ್ಲಿ ವಿಶ್ವಪರಿಸರ ದಿನ ಹಾಗೂ ವನಮಹೋತ್ಸವ.

ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಆಂಡ್ ಕಾಮರ್ಸ್ ಕಾಲೇಜಿನಲ್ಲಿ ವಿಶ್ವಪರಿಸರ ದಿನ ಹಾಗೂ ವನಮಹೋತ್ಸವ.

Hindu neighbor gifts plot of land

Hindu neighbour gifts land to Muslim journalist

ವಿಜಯನಗರ
ಹೊಸಪೇಟೆ : ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಆಂಡ್ ಕಾಮರ್ಸ್ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಹಾಗೂ ವನಮಹೋತ್ಸವ ಕಾರ್ಯಕ್ರಮ ಜರುಗಿತು. ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಸಾಂಸ್ಕೃತಿಕ‌ ವಿಭಾಗಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ.ಕೆ.‌ ರವೀಂದ್ರ, ನಿರ್ದೇಶಕ ಟಿ.ಎಂ.‌ಚಂದ್ರಶೇಖರ್ ಅವರು ಸಸಿ ನೆಡುವ ಮೂಲಕ ಕಾರ್ಯ ಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂ.ಕೆ. ರವೀಂದ್ರ ಅವರು, ಇರುವುದೊಂದೇ ಭೂಮಿ. ಅದನ್ನು ಉಳಿಸಿಕೊಳ್ಳುವ ಅವಶ್ಯಕತೆ ಇದೆ. ಪರಿಸರವನ್ನು ನಾವು ಸಂರಕ್ಷಿಸಿದರೆ ಅದು ಸಮಸ್ತ ಜೀವ ಸಂಕುಲವನ್ನೂ ಕಾಪಾಡುತ್ತದೆ. ಪ್ರತಿಯೊಬ್ಬರು ಪರಿಸರ ಉಳಿಸಿ, ಬೆಳೆಸಲು ಸಂಕಲ್ಪ ತೊಡಬೇಕು ಎಂದು ಸಲಹೆ ನೀಡಿದರು. ಪ್ರಾಚಾರ್ಯರಾದ ಪ್ರೊ. ವಿ.ಎಸ್. ದಯಾನಂದಕುಮಾರ್, ಶಿಕ್ಷಣ ಸಂಯೋಜಕರಾದ ಪಿ.ವಿ.ಶೇಷಸಾಯಿ ಅವರೂ ಸಸಿ ನೆಟ್ಟರು. ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಸ್ವಯಂಸ್ಪೂರ್ತಿಯಿಂದಸಂಯೋಜಕಿ ನೆಟ್ಟು ನೀರುಣಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ಆರ್. ನಾಗರಾಜ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಸಂಯೋಜ ಚಿತ್ರಕಲಾ, ಉಪನ್ಯಾಸಕರಾದ ಸಿಂಧು ಸಿ., ದೀಪಕ್ ನವಲೆ, ಮಂಜುನಾಥ ಕೆ., ರಾಜೇಶ್ ನವಲೆ, ಡಾ. ಸಂಗಮೇಶ ಎಸ್. ಗಣಿ, ಪ್ರತಿಭಾ ಹಿರೇಮಠ, ದೈಹಿಕ ಶಿಕ್ಷಣ ಉಪನ್ಯಾಸಕ ಮಲ್ಲಿಕಾರ್ಜುನ ಸೇರಿದಂತೆ ಇತರೆ ಉಪನ್ಯಾಸಕರು ಸಸಿ ನೆಟ್ಟರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಹಾಗೂ ವಿದ್ಯಾರ್ಥಿಗಳು ಸೇರಿಕೊಂಡು ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು.