Home latest ಕಾಸರಗೋಡು:ಜ್ಯೋತಿಷ್ ಸಾವಿಗೆ ಕ್ಯಾರ್ ಅನ್ನದ ಬಿಜೆಪಿ!! ಪಕ್ಷದ ನಿಲುವನ್ನು ಪ್ರತಿಭಟಿಸಿ ಹಲವು ನಾಯಕರು ರಾಜೀನಾಮೆ

ಕಾಸರಗೋಡು:ಜ್ಯೋತಿಷ್ ಸಾವಿಗೆ ಕ್ಯಾರ್ ಅನ್ನದ ಬಿಜೆಪಿ!! ಪಕ್ಷದ ನಿಲುವನ್ನು ಪ್ರತಿಭಟಿಸಿ ಹಲವು ನಾಯಕರು ರಾಜೀನಾಮೆ

Hindu neighbor gifts plot of land

Hindu neighbour gifts land to Muslim journalist

ಕಾಸರಗೋಡು: ಜಿಲ್ಲೆಯ ಹಿಂದೂ ಕಾರ್ಯಕರ್ತರ ಸರಣಿ ಕೊಲೆಯ ಬಳಿಕವೂ ಸೈಲೆಂಟ್ ಆಗಿರುವ ಪಕ್ಷದ ನಡೆಗೆ ಬೇಸರಗೊಂಡು ಬಿಜೆಪಿ ಮಂಡಲದ ಹಲವು ನಾಯಕರು ಪಕ್ಷದ ಜವಾಬ್ದಾರಿಗಳಿಗೆ ರಾಜೀನಾಮೆ ಘೋಷಿಸಿದ ಬಗ್ಗೆ ಸುದ್ದಿಯಾಗಿದೆ.

ಪಕ್ಷದ ಸಿದ್ಧಾಂತಗಳನ್ನು ಬಲಿಕೊಟ್ಟು ನಾಯಕರು ಸ್ವಯಂ ಪ್ರತಿಷ್ಠೆ ಮೆರೆಯುತ್ತಿದ್ದು,ಮೊನ್ನೆಯ ದಿನ ಮೃತಪಟ್ಟ ಪ್ರಭಾವಿ ನಾಯಕ ಜ್ಯೋತಿಷ್ ಸಾವಿನಲ್ಲೂ ಉನ್ನತ ನಾಯಕರ ನಿಲುವನ್ನು ಪ್ರತಿಭಟಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಹುಟ್ಟಿನಿಂದ ಇಲ್ಲಿಯ ವರೆಗೆ ಬಿಜೆಪಿಯೇ ಉಸಿರೆಂದು ತನ್ನ ಜೀವನವನ್ನೇ ಮುಡಿಪಾಗಿಟ್ಟ, ರಾತ್ರಿ ಹಗಲೆನ್ನದೆ ಪಾರ್ಟಿಯ ಏಳಿಗೆಗಾಗಿ ದುಡಿಯುತ್ತಿದ್ದ ಜ್ಯೋತಿಷ್ ಹಾಗೂ ಕುಂಬಳೆ ವಿಷಯದಲ್ಲಿ ಪಕ್ಷದಿಂದ ಕಾರ್ಯಕರ್ತರಿಗೆ ಆಗುತ್ತಿರುವ ನೋವಿಂದಾಗಿ ರಾಜೀನಾಮೆಗೆ ನೀಡಿದ್ದಾರೆ ಎನ್ನಲಾಗಿದೆ.

ಸದ್ಯ ಪದಾಧಿಕಾರಿಗಳ ರಾಜೀನಾಮೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದರೂ ಎಲ್ಲವನ್ನೂ ನಿಯಂತ್ರಿಸಬೇಕಾದ ನಾಯಕರು ಮಾತ್ರ ಇನ್ನೂ ನಿದ್ದೆಯಿಂದ ಎದ್ದಂತಿಲ್ಲ ಎಂದು ಪಕ್ಷದ ಅಭಿಮಾನಿಗಳು ತಳಮಳಗೊಂಡಿದ್ದಾರೆ.