Home latest ಬಾವಿಗೆ ಬಿದ್ದ ಮೊಮ್ಮಗಳನ್ನು ರಕ್ಷಿಸಲು ಹಿಂದೆ ಮುಂದೆ ನೋಡದೆ ಬಾವಿಗೆ ಹಾರಿದ ಅಜ್ಜಿ!!!

ಬಾವಿಗೆ ಬಿದ್ದ ಮೊಮ್ಮಗಳನ್ನು ರಕ್ಷಿಸಲು ಹಿಂದೆ ಮುಂದೆ ನೋಡದೆ ಬಾವಿಗೆ ಹಾರಿದ ಅಜ್ಜಿ!!!

Hindu neighbor gifts plot of land

Hindu neighbour gifts land to Muslim journalist

ಆಕಸ್ಮಿಕವಾಗಿ ಆಯತಪ್ಪಿ ಬಾವಿಗೆ ಬಿದ್ದ ಮೂರು ವರ್ಷದ ಮೊಮ್ಮಗಳನ್ನು ರಕ್ಷಿಸುವ ಮೂಲಕ ಅಜ್ಜಿಯೊಬ್ಬರು ಸಾಹಸ ಮೆರೆದಿದ್ದಾರೆ. ಹೌದು, ಕೆಲವೊಂದು ಜೀವಗಳೇ ಹಾಗೆ, ಜೀವವನ್ನು ಪಣಕ್ಕೆ ಇಟ್ಟು ತಮ್ಮವರನ್ನು ರಕ್ಷಿಸಲು ಮುಂದೆ ಬರುತ್ತಾರೆ. ಅಂಥವರಲ್ಲಿ ಒಬ್ಬಳು ಈ ಅಜ್ಜಮ್ಮ !!

ಈ ಘಟನೆ ಕಾಸರಗೋಡು ಜಿಲ್ಲೆಯ ಕಳ್ಳಾರ್ ಅಡ್ಕದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಮನೆ ಸಮೀಪ ಆಟವಾಡುತ್ತಿದ್ದ ಕಳ್ಳಾರ್ ಅಡ್ಕ ನಿವಾಸಿ ಲೀಲಮ್ಮ ( 56) ಅವರ ಮೊಮ್ಮಗಳು ಆಕಸ್ಮಿಕವಾಗಿ ಬಾವಿಗೆ ಬಿದ್ದಳು. ಇದನ್ನು ನೋಡಿದ ಲೀಲಮ್ಮ ಎರಡು ಯೋಚಿಸದೆ, ಹಿಂದೆ ಮುಂದೆ ನೋಡದೆ ತಕ್ಷಣವೇ ಬಾವಿಗೆ ಧುಮುಕಿದ್ದಾಳೆ. ಬಾವಿಯಲ್ಲಿ ಮಗುವನ್ನು ಎತ್ತಿ ಹಿಡಿದು ಬಾವಿಯೊಳಗೆ ಮೋಟಾರ್ ಗೆ ಅಳವಡಿಸಿದ ಪೈಪನ್ನು ಹಿಡಿದು ನಿಂತಿದ್ದಾರೆ, ಈ ವೀರ ವನಿತೆ !

ಸುದ್ದಿ ತಿಳಿದ ಕೂಡಲೇ ಕುತ್ತಿಕೋಲ್ ನಿಂದ ಕಳ್ಳಾರ್ ಅಡ್ಕಗೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಯು ಅಜ್ಜಿ ಜೊತೆಗೆ ಮಗಳನ್ನು ಕೂಡಾ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಬಾವಿಯಲ್ಲಿ ಅಲ್ಪ ಪ್ರಮಾಣದ ನೀರಿದ್ದ ಕಾರಣ ಹೆಚ್ಚಿನ ಅಪಾಯ ಉಂಟಾಗಿಲ್ಲ ಎನ್ನಲಾಗಿದೆ. ಅಜ್ಜಿಯ ಸಾಹಸಕ್ಕೆ ಬಹುಪರಾಕ್ ಅಂತಿದೆ ಇಡೀ ಗ್ರಾಮ.