Home Travel Travel Tips: ಮಹಿಳೆಯರೇ ಟ್ರಿಪ್ ಹೋಗುತ್ತಿದ್ದೀರಾ? ಹಾಗಾದರೆ ಈ ಟಿಪ್ಸ್ ನೆನಪಿರಲಿ

Travel Tips: ಮಹಿಳೆಯರೇ ಟ್ರಿಪ್ ಹೋಗುತ್ತಿದ್ದೀರಾ? ಹಾಗಾದರೆ ಈ ಟಿಪ್ಸ್ ನೆನಪಿರಲಿ

Hindu neighbor gifts plot of land

Hindu neighbour gifts land to Muslim journalist

ಮಹಿಳೆಯರು ಒಬ್ಬರೆ ಪ್ರವಾಸಕ್ಕೆ ತೆರಳುವಾಗ ಕೆಲವು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. ಯಾಕೆಂದರೆ ಸುರಕ್ಷತೆ ಬಹಳ ಮುಖ್ಯವಾಗಿರುತ್ತದೆ. ಕೆಲವೊಮ್ಮೆ ಒಬ್ಬರೆ ಪ್ರವಾಸ ಮಾಡುವಾಗ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ಮಹಿಳೆಯರೇ ಟ್ರಿಪ್ ಹೋಗುವಾಗ ಈ ಟಿಪ್ಸ್ ನೆನಪಿನಲ್ಲಿಟ್ಟುಕೊಂಡರೆ ಉತ್ತಮ. ಯಾವ ಟಿಪ್ಸ್ ಎಂಬುದು ಇಲ್ಲಿದೆ.

ನೀವು ಒಬ್ಬರೇ ಪ್ರವಾಸಕ್ಕೆ ತೆರಳಿದ್ದರೆ ಮಹಿಳೆಯರ ಹಾಸ್ಟೆಲ್​ನಲ್ಲಿ ಉಳಿದುಕೊಳ್ಳುವುದು ಉತ್ತಮ. ಒಬ್ಬರೇ ಹೋಟೆಲ್​ ರೂಮ್ ಗಳಲ್ಲಿ ಉಳಿದುಕೊಳ್ಳುವುದು ಸುರಕ್ಷಿತವಲ್ಲ. ಇನ್ನೂ, ಯಾವಾಗಲೂ ಪ್ರವಾಸಕ್ಕೆ ತೆರಳುವಾಗ ಲಗೇಜ್ ಜಾಸ್ತಿ ತೆಗೆದುಕೊಂಡು ಹೋಗಬಾರದು. ಯಾಕೆಂದರೆ, ಪ್ರಯಾಣಿಸುವಾಗ ಕಷ್ಟ ಅಲ್ಲದೆ, ವಸ್ತುಗಳು ಕಳೆದು ಹೋಗುವ ಸಾಧ್ಯತೆ ಕೂಡ ಹೆಚ್ಚು. ಹಾಗೇ ಸೂಟ್ಕೇಸ್ ಬದಲು ಬ್ಯಾಗ್ ಪ್ಯಾಕ್ ಬಳಕೆ ಉತ್ತಮ.

ಹಾಗೇ ಅಗತ್ಯವಾದ ಮಾತ್ರೆ ಹಾಗೂ ಔಷಧಿಗಳನ್ನು ಇಟ್ಟುಕೊಳ್ಳಿ. ಯಾಕಂದ್ರೆ ಪ್ರಯಾಣ ಮಧ್ಯೆ ಸಮಸ್ಯೆ ಆದರೆ ಇದು ಸಹಕಾರಿಯಾಗುತ್ತದೆ. ಹಾಗೂ ಪ್ರವಾಸ ಹೋದಾಗ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿ ಇರಿ. ಮನೆಯವರ ಜೊತೆ ಪ್ರತಿದಿನ ಸಂಪರ್ಕದಲ್ಲಿ ಇರಬೇಕು. ಆದರೆ ನೀವು ಎಲ್ಲಿದ್ದೀರಿ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಬೇಡಿ.

ಇನ್ನೂ ಟ್ರಿಪ್ ಗೆ ಹೋಗುವಾಗ ಹವಾಮಾನಕ್ಕೆ ತಕ್ಕಂತೆ ಬಟ್ಟೆಯನ್ನು ಧರಿಸುವುದು ಬಹಳ ಮಖ್ಯವಾಗಿರುತ್ತದೆ. ಚಳಿ ಇದ್ದರೆ ಸ್ವೆಟ್ಟರ್, ಸಾಕ್ಸ್ ಹಾಗೂ ಮಳೆ ಇದ್ದರೆ ರೈನ್ ಕೋಟ್ ಇಟ್ಟುಕೊಂಡಿರಿ. ಈ ರೀತಿ ಅಗತ್ಯ ಬಟ್ಟೆಗಳನ್ನು ಇಟ್ಟುಕೊಂಡರೆ ಅನಗತ್ಯ ಖರ್ಚು ಹಾಗೂ ಸಮಸ್ಯೆ ಉಂಟಾಗುವುದಿಲ್ಲ. ಹಾಗೇ ಟ್ರಿಪ್ ಹೋಗುವ ಸ್ಥಳದ ಬಗ್ಗೆ ಮೊದಲೇ ಮಾಹಿತಿ ತಿಳಿದುಕೊಂಡಿರುವುದು ಉತ್ತಮ.

ಹಾಗೇ ಪ್ರವಾಸಕ್ಕೆ ಹೋಗುವಾಗ ಆಹಾರದ ವಿಚಾರದಲ್ಲಿ ಕೂಡ ಮುನ್ನೆಚ್ಚರಿಕೆ ವಹಿಸಬೇಕು. ಪ್ರಯಾಣ ಮಾಡುವಾಗ ಹಾಗೂ ತೆರಳಿದ ಸ್ಥಳದಲ್ಲಿ ಆರೋಗ್ಯಕರ ಆಹಾರವನ್ನೇ ಉಪಯೋಗಿಸಿ. ಇಲ್ಲವಾದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವುದು ಖಚಿತ.