Home National Railway station: ಈ 5 ರೈಲ್ವೇ ಸ್ಟೇಷನ್ ಗಳಲ್ಲಿ ಮಹಿಳೆಯರದ್ದೇ ದರ್ಬಾರ್ !! ...

Railway station: ಈ 5 ರೈಲ್ವೇ ಸ್ಟೇಷನ್ ಗಳಲ್ಲಿ ಮಹಿಳೆಯರದ್ದೇ ದರ್ಬಾರ್ !! ಇಲ್ಲಿ ಇವರಿಲ್ಲ ಅಂದ್ರೆ ರೈಲೇ ಓಡಲ್ಲ !! ಯಾಕೆ ಅಂತಿರಾ?

Railway station

Hindu neighbor gifts plot of land

Hindu neighbour gifts land to Muslim journalist

Railway Station: ಆಧುನಿಕ ಯುಗದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರಿಗಿಂತ ತಾವೇನು ಕಮ್ಮಿ ಇಲ್ಲ ಎಂದು, ತಮ್ಮ ಸಾಧನೆಯನ್ನು ಸಾಬೀತು ಮಾಡಿದ್ದಾರೆ. ಹೌದು, ಮಹಿಳೆಯರನ್ನು ದುರ್ಬಲರೆಂದು ಪರಿಗಣಿಸಿದ್ದ ಕಾಲ ಇಂದು ಸಂಪೂರ್ಣ ಬದಲಾಗಿದೆ. ಈ ಮಾತಿಗೆ ನಿದರ್ಶನ ಎಂಬಂತೆ ಈ ಐದು ರೈಲ್ವೆ ಸ್ಟೇಷನ್ (Railway Station) ನಿರ್ವಹಣೆ ಬಗ್ಗೆ ನೀವು ಖಂಡಿತಾ ತಿಳಿಯಲೇ ಬೇಕು.

2018ರಿಂದ ಜೈಪುರದಲ್ಲಿರುವ ಗಾಂಧಿನಗರದ ನಿಲ್ದಾಣದಲ್ಲಿ ಆರ್‌ಪಿಎಫ್‌ ಸಿಬ್ಬಂದಿಯಿಂದ ಹಿಡಿದು, ಎಲ್ಲಾ ಕೆಲಸಗಾರರು ಸಂಪೂರ್ಣವಾಗಿ ಮಹಿಳೆಯರಿಂದ ನಿರ್ವಹಿಸಲ್ಪಡುವ ಭಾರತದ ಮೊದಲ ರೈಲು ನಿಲ್ದಾಣವಾಗಿದೆ. ಮಾಹಿತಿ ಪ್ರಕಾರ, ಈ ರೈಲು ನಿಲ್ದಾಣದ ಮೂಲಕ 50 ಕ್ಕೂ ಹೆಚ್ಚು ರೈಲುಗಳು ಹಾದು ಹೋಗುತ್ತವೆ ಮತ್ತು 25 ನಿಲ್ದಾಣದಲ್ಲಿ ನಿಲ್ಲುತ್ತವೆ. ಪ್ರತಿ ದಿನ 7000 ಜನರು ನಿಲ್ದಾಣಕ್ಕೆ ಬರುತ್ತಾರೆ. ಠಾಣೆಯಲ್ಲಿ 40 ಮಹಿಳಾ ಸಿಬ್ಬಂದಿಗಳಿದ್ದಾರೆ.

ಇನ್ನು ಮುಂಬೈನ ಮಾಟುಂಗಾ ರೈಲು ನಿಲ್ದಾಣವನ್ನು ಕೂಡ ಮಹಿಳೆಯರೇ ನಿರ್ವಹಿಸುತ್ತಾರೆ. ಮಾಹಿತಿ ಪ್ರಕಾರ, ಈ ಕಾರಣಕ್ಕಾಗಿ ಈ ನಿಲ್ದಾಣದ ಹೆಸರು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿಯೂ ಕಾಣಿಸಿಕೊಂಡಿದೆ.

ಇನ್ನೊಂದು ಅಜನಿ ರೈಲು ನಿಲ್ದಾಣ ಈ ನಿಲ್ದಾಣದಲ್ಲಿರುವ ಎಲ್ಲರೂ ಮಹಿಳಾ ಉದ್ಯೋಗಿಗಳಿದ್ದಾರೆ. ಮಹಾರಾಷ್ಟ್ರದ ನಾಗ್ಪುರ ಮತ್ತು ಅಜನಿ ರೈಲು ನಿಲ್ದಾಣದ ನಡುವಿನ ರೈಲ್ವೆ ಮಾರ್ಗವು ಕೇವಲ 3 ಕಿಲೋಮೀಟರ್ ಅಂತರವಷ್ಟೆ. ಅದನ್ನು ಕ್ರಮಿಸಲು 8-9 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದು ಅತ್ಯಂತ ಕಡಿಮೆ ರೈಲು ಮಾರ್ಗವೆಂದು ಪರಿಗಣಿಸಲಾಗಿದೆ.

ಮತ್ತೊಂದು ಅಹಮದಾಬಾದ್‌ನಲ್ಲಿರುವ ಮಣಿನಗರ ರೈಲು ನಿಲ್ದಾಣವು ಪಶ್ಚಿಮ ರೈಲ್ವೆಯ ಅಡಿಯಲ್ಲಿ ಬರುತ್ತದೆ. ಇದೊಂದು ಅತ್ಯಂತ ಚಿಕ್ಕ ನಿಲ್ದಾಣವಾಗಿದ್ದು, ಇದರಲ್ಲಿರುವ ಎಲ್ಲಾ ಉದ್ಯೋಗಿಗಳು ಮಹಿಳೆಯರೇ ಆಗಿದ್ದಾರೆ.

ಅದಲ್ಲದೆ ಚಂದ್ರಗಿರಿ ರೈಲು ನಿಲ್ದಾಣ ಈ ರೈಲು ನಿಲ್ದಾಣವು ಆಂಧ್ರಪ್ರದೇಶದಲ್ಲಿದೆ. ಈ ಠಾಣೆಯಲ್ಲಿ ಕಸ ಗುಡಿಸುವವರಿಂದ ಹಿಡಿದು ಠಾಣಾಧಿಕಾರಿಯವರೆಗೆ ಎಲ್ಲರೂ ಮಹಿಳೆಯರೇ ಆಗಿದ್ದಾರೆ ಎಂದು ಮಾಹಿತಿ ಇದೆ.

ಇದನ್ನೂ ಓದಿ: ಮಲಗುವಾಗ ಮೊಬೈಲ್ ವಿಷಯದಲ್ಲಿ ನೀವು ಈ ತಪ್ಪು ಮಾಡುತ್ತೀರಾ ?! ಹಾಗಿದ್ರೆ ಎಚ್ಚರ.. !!