Home Travel ರೈಲಲ್ಲಿ ಪ್ರಯಾಣಿಸುವಾಗ ಟಾಯ್ಲೆಟ್ ಬದಿಯ ಸೀಟ್ ಸಿಗದಹಾಗೇ ಮಾಡಲು ಇಲ್ಲಿವೆ ಕೆಲ ಉಪಾಯ!!!

ರೈಲಲ್ಲಿ ಪ್ರಯಾಣಿಸುವಾಗ ಟಾಯ್ಲೆಟ್ ಬದಿಯ ಸೀಟ್ ಸಿಗದಹಾಗೇ ಮಾಡಲು ಇಲ್ಲಿವೆ ಕೆಲ ಉಪಾಯ!!!

Hindu neighbor gifts plot of land

Hindu neighbour gifts land to Muslim journalist

ಟ್ರಾವೆಲಿಂಗ್ ಇಷ್ಟ ಪಡದೆ ಇರುವವರೇ ವಿರಳ. ರೈಲು ಪ್ರಯಾಣ ವೆಂದರೆ ಎಲ್ಲರಿಗೂ ಇಷ್ಟವೇ.. ದೂರ ಪ್ರಯಾಣದ ಜೊತೆಗೆ ಸುಂದರ ಪ್ರಕೃತಿಯನ್ನು ಕಣ್ತುಂಬಿ ಕೊಳುತ್ತಾ ಸಾಗುವ ಪ್ರಯಾಣವನ್ನು ಸಾಮಾನ್ಯವಾಗಿ ಬಯಸುವವರೆ ಹೆಚ್ಚು. ಆದರೆ ಕೆಲವೊಮ್ಮೆ ಅಲ್ಲಿನ ವಾತಾವರಣದಿಂದ ಇರುಸು ಮುರುಸಿನ ಸ್ಥಿತಿ ಉಂಟಾಗಿ ಟ್ರೈನ್ ಸಹವಾಸವೇ ಬೇಡ ಎನಿಸಿದರೂ ಆಶ್ಚರ್ಯವಿಲ್ಲ.

ನಮಗೆ ಟಾಯ್ಲೆಟ್ ಗೆ ಹತ್ತಿರದ ಸೀಟ್/ಬರ್ಥ್ ದೊರೆತರೆ ಆಗಾಗ ಹೋಗಿ ಬರುವವರಿಂದ ಬಾಗಿಲನ್ನು ಸರಿ ಮುಚ್ಚದೇ ದುರ್ನಾತ ಕೂಡ ಅಸಹನೀಯವಾಗಿ, ಅದರಿಂದ ಕಿರಿಕಿರಿ ಉಂಟಾಗುವುರಲ್ಲಿ ಸಂಶಯವಿಲ್ಲ.
ಹಾಗಾಗಿ ಟಿಕೆಟ್ ಗಳನ್ನು ಸಾಧ್ಯವಾಗುವಷ್ಟು ಬೇಗ ಬುಕ್ ಮಾಡಿಕೊಳ್ಳಲು ಪ್ರಯತ್ನಿಸುವುದು ಉತ್ತಮ. ಏಕೆಂದರೆ ಸೀಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಐ ಆರ್ ಸಿಟಿಸಿ ಮೊದಲು ಬರುವವರಿಗೆ ಆದ್ಯತೆ ನೀಡುತ್ತಾ ಕೋಚ್ ಮಧ್ಯಭಾಗದಿಂದ ಸೀಟ್ ಅಲಾಟ್ ಮಾಡುವುದನ್ನು ಆರಂಭಿಸುತ್ತದೆ.

ಐಆರ್ ಸಿಟಿಸಿ ರೈಲುಗಳಲ್ಲಿ ಸೀಟಿಂಗ್ ವಿಧಾನ ಭಾರತೀಯ ರೈಲ್ವೆ ಅಡಿಯಲ್ಲಿ ಬರುವ ಎಲ್ಲ ಟ್ರೇನ್ ಗಳು ವಿಭಿನ್ನ ಬಗೆಯ ಕೋಚ್ ಗಳನ್ನು ಹೊಂದಿದ್ದು, ನಿರ್ದಿಷ್ಟ ವಿನ್ಯಾಸ ಮತ್ತು ಆಕಾರದಲ್ಲಿ ರಚಿಸಲಾಗಿರುತ್ತವೆ. ಅವುಗಳ ವೆಚ್ಚ, ಬರ್ತ್, ಸೌಕರ್ಯ ಮತ್ತು ಸೌಲಭ್ಯಗಳು ಒಂದೇ ತೆರನಾಗಿರುವುದಿಲ್ಲ. ಆದರೆ ಎಲ್ಲ ಕೋಚ್ ಗಳು ಪ್ರತಿ ತುದಿಯಲ್ಲಿ ಎರಡು ಗೇಟ್‌ಗಳು ಮತ್ತು ಎರಡೆರಡು ಶೌಚಾಲಯಗಳನ್ನು ಹೊಂದಿರುತ್ತವೆ. ದೂರ ಪ್ರಯಾಣದ ರೈಲುಗಳಲ್ಲಿನ ವಿವಿಧ ಕೋಚ್‌ಗಳ ಆಕಾರ ಮತ್ತು ಕುಳಿತುಕೊಳ್ಳುವ ವ್ಯವಸ್ಥೆಯ ಕಡೆ ಗಮನ ಹರಿಸುವುದಾದರೆ:

ಪ್ರಥಮ ದರ್ಜೆ ಎಸಿ (1A) ಕೋಚ್ ಗೆ ನೀಡಲಾಗಿರುವ ಕೋಡ್ ಹೆಚ್ ಆಗಿದೆ. ಕೋಚ್‌ನ ಪ್ರತಿ ಕೂಪ್‌ನಲ್ಲಿ 24 ಬರ್ತ್‌ಗಳಿದ್ದು, ಮೇಲ್ಬಾಗ ಮತ್ತು ಕೆಳಭಾಗದಲ್ಲಿ ಒಂದೊಂದು ಕೂಪ್‌ಗಳಿರುತ್ತವೆ .ಅವಶ್ಯಕತೆಗೆ ತಕ್ಕಂತೆ ಲಾಕ್ ಮತ್ತು ಮುಚ್ಚುವ ಸೌಲಭ್ಯ ಕಲ್ಪಿಸಲಾಗಿದೆ ಅಷ್ಟೇ ಅಲ್ಲದೆ ನಡೆದಾಡಲು ಮತ್ತು ಮುಖ್ಯ ಬಾಗಿಲಿಗೆ ಸಂಪರ್ಕಿಸುವ ಉದ್ದನೆಯ ಕೂಪ್ ಗಳು ಕೋಚ್ ನಲ್ಲಿರುತ್ತವೆ.
2 ಟಿಯರ್ ಎಸಿ ಸ್ಲಿಪರ್ (2A) ಕೋಚ್ ನ ಗಾತ್ರವನ್ನು ಆಧರಿಸಿ 46 ಇಲ್ಲವೇ 54 ಬರ್ಥ್ ಗಳಿದ್ದು, ಮೇಲೊಂದು ಮತ್ತು ಕೆಳಗೊಂದು ಬರ್ಥ್ ವ್ಯವಸ್ಥೆ ಇರುತ್ತದೆ.

3 ಟಿಯರ್ ಎಸಿ ಸ್ಲಿಪರ್ ನಲ್ಲಿ 64 ಬರ್ಥ್ ಗಳಿವೆ. ಸೈಡ್ ಬರ್ಥ್ ಗಳ ಸ್ಥಳದಲ್ಲಿ 2-ಟಿಯರ್ ನಂಥ ವ್ಯವಸ್ಥೆಯಿದ್ದರೂ ಮತ್ತೊಂದು ಭಾಗಕ್ಕೆ ಅಪ್ಪರ್, ಮಿಡ್ ಮತ್ತು ಲೋಯರ್ ಬರ್ಥ್ ಗಳಿವೆ.
ಸ್ಲಿಪರ್ ಕ್ಲಾಸ್ (ಎಸ್ ಎಲ್)
ಇದು ವಾತಾನುಕೂಲಿತವಲ್ಲದ ಕೋಚ್ ಅಗಿದ್ದು ಇದರ ಕೋಡ್ ಎಸ್ ಆಗಿದೆ. ಕೋಚ್ ಗಳಲ್ಲಿ 72 ಜನಕ್ಕೆ ಸೀಟಿಂಗ್ ಮತ್ತು 72 ಬರ್ಥ್ ವ್ಯವಸ್ಥೆ ಇರುತ್ತದೆ. ವಾತಾನುಕೂಲಿತ ಅಂಶವೊಂದನ್ನು ಬಿಟ್ಟರೆ ಈ ಕೋಚ್ ಎಸಿ ಸ್ಲಿಪರ್ ಕೋಚನ್ನು ಹೋಲುತ್ತದೆ. ಗಾಳಿಯಾಡಲು ಕೋಚ್ ಕಿಟಕಿಗಳನ್ನು ತೆರೆದಿಡಬಹುದಾಗಿದೆ.

ಸೆಕೆಂಡ್ ಸೀಟಿಂಗ್ (2 ಎಸ್) ಇದು ಕೂಡ ವಾತಾನುಕೂಲಿತವಲ್ಲದ (ನಾನ್-ಎಸಿ) ಕೋಚ್ ಆಗಿದೆ ಮತ್ತು ಇದರಲ್ಲಿ ಕೇವಲ ಕೂರಲು ಮಾತ್ರ ಆಸನಗಳ ವ್ಯವಸ್ಥೆ ಇರುತ್ತದೆ, ಬರ್ಥ್ ಗಳು ಇರುವುದಿಲ್ಲ.

ಇದು ಎಸಿ ಕೋಚ್ ಮತ್ತು ಕೋಡ್ ಗಳು ಸಿ ಮತ್ತು ಡಿ ಆಗಿರುತ್ತವೆ. ಕೋಚ್ ಸಾರ್ಮಥ್ಯದನುಸಾರ 67 ಇಲ್ಲವೇ 75 ಜನ ಕೂರಬಹುದಾಗಿದೆ. ಮಧ್ಯ ದಾರಿಯ ಎರಡೂ ಪಕ್ಕ ಸೀಟುಗಳ 23 ಸಾಲುಗಳಿವೆ.

ಗರೀಬ್ ರಥ್ (3A):ಗರೀಬ್ ರಥ್ ಟ್ರೇನಿನ ಎಲ್ಲ ಕೋಚ್ ಗಳು ಎಸಿಯಾಗಿದ್ದು ಇವುಗಳಿಗೆ ನೀಡಿರುವ ಕೋಡ್ ಜಿ ಆಗಿದೆ. ಇದರ ಪ್ರತಿ ಕೋಚ್ ನಲ್ಲಿ 81 ಬರ್ಥ್ ಗಳಿವೆ ಮತ್ತು ಸೈಡ್ ಬರ್ಥ್ ಗಳ ಜೊತೆಗೆ ಕೇವಲ 3-ಟಿಯರ್ ಕೋಚ್ ಸೌಲಭ್ಯ ಮಾತ್ರ ಸಿಗುತ್ತದೆ.

ಸೀಟ್ ಗಳನ್ನು ಒದಗಿಸುವ ವಿಧಾನ ಟಾಯ್ಲೆಟ್ ಪಕ್ಕದ ಆಸನಗಳು ಯಾರಿಗೂ ಇಷ್ಟವಾಗುವುದಿಲ್ಲ. ಹಾಗೆ ನೋಡಿದರೆ ನಾವು ಅಪೇಕ್ಷಿಸುವಂಥ ಸಮಸ್ಯೆರಹಿತ ಸೀಟ್ ಪಡೆಯುವ ಸಾಧ್ಯತೆ ಕಮ್ಮಿಯಾದರೂ ನೀವು ಪ್ರಯತ್ನಿಸಿದಲ್ಲಿ ನಿಮಗಿಷ್ಟದ ಸೀಟ್ ಗಿಟ್ಟಿಸುವುದು ಸಾಧ್ಯವಿದೆ.
ನಿರ್ದಿಷ್ಟ ನಂಬರಿನ ಸೀಟ್ ಬೇಕೆಂದು ಕೇಳುವ ಅವಕಾಶವಿಲ್ಲವಾದರೂ, ಐ ಆರ್ ಸಿಟಿಸಿ ಪ್ರಯಾಣಿಕರಿಗೆ ಸೀಟ್ ಅಲಾಟ್ ಮಾಡಲು ಒಂದು ನಿರ್ದಿಷ್ಟವಾದ ವಿಧಾನ ಅನುಸರಿಸುತ್ತದೆ.

ಐ ಆರ್ ಸಿಟಿಸಿ ಸೀಟ್ ಅಲಾಟ್ ಮಾಡುವ ವಿಧಾನ:

ವಿಧಾನದ ಪ್ರಕಾರ ಮೊದಲಿಗೆ ಕೋಚ್ ಮಧ್ಯಭಾಗದಿಂದ ಸೀಟ್ ಗಳನ್ನು ಅಲಾಟ್ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ. ಹೀಗೆ ಮಾಡುವುದರಿಂದ ಕೋಚ್ ಗಳಲ್ಲಿನ ಲೋಡ್ ಸಮಾನವಾಗಿ ಹಂಚಿಕೆಯಾಗುತ್ತದೆ ಮತ್ತು ಟ್ರೇನಲ್ಲಿ ಬ್ಯಾಲೆನ್ಸ್ ಸಮರ್ಪಕವಾಗಿ ನಿರ್ವಹಣೆಯಾಗುತ್ತದೆ. ಮಧ್ಯಬಾಗದ ಸೀಟುಗಳನ್ನು ಅಲಾಟ್ ಮಾಡಿದ ಬಳಿಕ ಕೋಚ್ ,ಕೊನೆಭಾಗದಲ್ಲಿರುವ ಸೀಟುಗಳನ್ನು ಅಲಾಟ್ ಮಾಡಲಾಗುತ್ತದೆ.

ಟಾಯ್ಲೆಟ್ ಪಕ್ಕದ ಸೀಟು ಆಲಾಟ್ ಆಗುವುದನ್ನು ತಪ್ಪಿಸಿಕೊಳ್ಳಲು ಕೆಲ ಉಪಾಯಗಳು

ಟಿಕೆಟ್ ಗಳನ್ನು ಸಾಧ್ಯವಾಗುವಷ್ಟು ಬೇಗ ಬುಕ್ ಮಾಡಿಕೊಳ್ಳಲು ಪ್ರಯತ್ನಿಸಿದರೆ, ಸೀಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಐ ಆರ್ ಸಿಟಿಸಿ ಮೊದಲು ಬರುವವರಿಗೆ ಆದ್ಯತೆ ನೀಡುತ್ತಾ ಕೋಚ್ ಮಧ್ಯಭಾಗದಿಂದ ಸೀಟ್ ಅಲಾಟ್ ಮಾಡುವುದನ್ನು ಆರಂಭಿಸುವುದರಿಂದ ಬೇಗ ಟಿಕೆಟ್ ಮಾಡಿಸಿಕೊಂಡರೆ ಟಾಯ್ಲೆಟ್ ಗಳಿಗೆ ದೂರದ ಮತ್ತು ಕೋಚ್ ಮಧ್ಯಭಾಗದ ಸೀಟ್ ಸಿಗುವ ಸಾಧ್ಯತೆ ಜಾಸ್ತಿಯಿರುತ್ತದೆ.

ಬುಕಿಂಗ್ ಕೌಂಟರ್ ಆಥವಾ ಐ ಆರ್ ಸಿಟಿಸಿ ಸೈಟ್ ನಲ್ಲಿ ಕೂತಿರುವ ಅಧಿಕಾರಿ ಸೀಟ್ ಒದಗಿಸುವಾಗ ಆದ್ಯತೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸುತ್ತಾರೆ . ಆದ್ಯತೆ ಕಾಲಂನಲ್ಲಿ ಏನನ್ನೂ ನಮೂದಿಸದಿರುವುದೇ ಉತ್ತಮ. ನಮೂದಿಸಿದರೆ ನಿಮಗೆ ಕೋಚ್ ನ ಕೊನೆ ಭಾಗದಲ್ಲಿ ಸೀಟು ಸಿಗುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಕೆಲವೊಮ್ಮೆ ತಡವಾಗಿ ಟಿಕೆಟ್ ಬುಕ್ ಮಾಡಿದರೂ ಕೋಚ್ ಮಧ್ಯಭಾಗದ ಸೀಟು ಸಿಗಬಹುದು. ಬುಕ್ ಮಾಡುವಾಗ ಕನ್ಫರ್ಮ್ ಟಿಕೆಟ್ ಗಳನ್ನು ಪಡೆದವರು ತಮ್ಮ ಯೋಜಿತ ಪ್ರಯಾಣವನ್ನು ರದ್ದು ಮಾಡಿದರೂ ಕೂಡ ಅವರಿಗೆ ಮೀಸಲಾಗಿದ್ದ ಸೀಟುಗಳು ಸಿಗುವ ಚಾನ್ಸ್ ಇರುತ್ತದೆ.

ಪ್ರತಿಯೊಬ್ಬರೂ ಪ್ರಯಾಣ ಮಾಡುವಾಗ ಹಿತಕರ ಅನುಭವ ಪಡೆಯಲು ಇಚ್ಚಿಸುವುದು ಸಾಮಾನ್ಯ.ಆದರೆ ರೈಲು ಪ್ರಯಾಣ ವೆಂದಾಗ ದೂರ ಕ್ರಮಿಸುವ ಸಂದರ್ಭದಲ್ಲಿ ಸಿಗುವ ಸೀಟು ನಮಗೆ ಆರಾಮದಾಯವಾಗಿರದೆ ಹೋದರೆ ಟ್ರೈನ್ ಸಹವಾಸವೇ ಸಾಕು ಎನಿಸುವಷ್ಟು ಬೇಸರವಾಗುತ್ತದೆ.ಹಾಗಾಗಿ ಬೇಗ ಸೀಟು ಬುಕ್ ಮಾಡುವುದು ಉತ್ತಮ.