Home latest Assam Bus Accident: ಅಸ್ಸಾಂನಲ್ಲಿ ಭೀಕರ ರಸ್ತೆ ಅಪಘಾತ: 14 ಮಂದಿ ಸಾವು, ಹಲವರಿಗೆ ಗಾಯ!!

Assam Bus Accident: ಅಸ್ಸಾಂನಲ್ಲಿ ಭೀಕರ ರಸ್ತೆ ಅಪಘಾತ: 14 ಮಂದಿ ಸಾವು, ಹಲವರಿಗೆ ಗಾಯ!!

Assam Bus Accident

Hindu neighbor gifts plot of land

Hindu neighbour gifts land to Muslim journalist

Assam Bus Accident: ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ (Assam Road Accident)ಸಂಭವಿಸಿದ್ದು, 14ಮಂದಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಗೋಲಾಘಾಟ್ ಪೂರ್ವ ತಹಸಿಲ್ ವ್ಯಾಪ್ತಿಗೆ ಬರುವ ದೇರ್ಗಾಂವ್ ಬಳಿಯ ಬಲಿಜನ್ ಗ್ರಾಮದಲ್ಲಿ 40ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಿಂದ(Assam Bus Accident) 14 ಮಂದಿ ಮೃತಪಟ್ಟರೆ, 27 ಮಂದಿ ಗಂಭೀರವಾಗಿ ಗಾಯಗೊಂಡಿರುವ(Road Accident Today) ದಾರುಣ ಘಟನೆ ವರದಿಯಾಗಿದೆ.

ಇದನ್ನು ಓದಿ: Chikkamagaluru: ಹೊಸ ವರ್ಷಕ್ಕೆ ಬಿಸಿ ಬಿಸಿ ರಾಗಿ ಮುದ್ದೆ ಉಂಡು ಮಲಗಿದರು, ಬೆಳಗಾಗುವುದರೊಳಗೆ ಹೆಣವಾಗಿದ್ದರು !!

ದಟ್ಟವಾದ ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿ ಚಾಲಕನ ಅತಿವೇಗವು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗುತ್ತಿದೆ. ಅಸ್ಸಾಂನ ದೇರ್ಗಾಂವ್‌ನಲ್ಲಿ ಬುಧವಾರ ಮುಂಜಾನೆ 40 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಬಸ್ ತಿನ್ಸುಕಿಯಾದ ತಿಲಿಂಗ ಮಂದಿರಕ್ಕೆ ತೆರಳುತ್ತಿದ್ದ ಸಂದರ್ಭ ನಿಂತಿದ್ದ ಕಲ್ಲಿದ್ದಲು ತುಂಬಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ದುರ್ಘಟನೆಯಲ್ಲಿ ಪಿಕ್ನಿಕ್ ಪ್ರವಾಸದಲ್ಲಿದ್ದ 14 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.