Home Temple Tirupati: ಇಂದಿನಿಂದ ವೈಕುಂಠ ದ್ವಾರ ದರ್ಶನ ಟೋಕನ್ ನೋಂದಣಿ ಆರಂಭ

Tirupati: ಇಂದಿನಿಂದ ವೈಕುಂಠ ದ್ವಾರ ದರ್ಶನ ಟೋಕನ್ ನೋಂದಣಿ ಆರಂಭ

Tirupati Tour

Hindu neighbor gifts plot of land

Hindu neighbour gifts land to Muslim journalist

Tirupati: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಡಿಸೆಂಬ‌ರ್ 30 ರಿಂದ 10 ದಿನಗಳ ಕಾಲ ನಡೆಯಲಿರುವ ವೈಕುಂಠ ಏಕಾದಶಿ ಸಂದರ್ಭದಲ್ಲಿ ತೆರೆಯಲಾಗುವ ವೈಕುಂಠ ದ್ವಾರದ ದರ್ಶನಕ್ಕೆ ಟಿಕೆಟ್‌ಗಳನ್ನು ಟಿಟಿಡಿ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ.

ಕಳೆದ ವರ್ಷ ನಡೆದ ಕಾಲ್ತುಳಿತ ಪ್ರಕರಣ ಮರುಕಳಿಸದಂತೆ ತಡೆಯಲು ಈ ವರ್ಷ ವೈಕುಂಠದ್ವಾರ ದರ್ಶನ ಮತ್ತು ಹೊಸವರ್ಷಾಚರಣೆಯ ದಿನದಂದು ದರ್ಶನಕ್ಕೆ ಟಿಟಿಡಿ ಯು, ಸ್ಪಷ್ಟವಾದ ವೇಳಾಪಟ್ಟಿಯನ್ನು ಪ್ರಕಟಿಸಿದೆ. (ನ.27) ಡಿಸೆಂಬರ್ 1 ರವರೆಗೆ ನೋಂದಣಿ ಸೌಲಭ್ಯ ಲಭ್ಯವಿರಲಿದ್ದು ಇದರಲ್ಲಿ ಆಯ್ಕೆಯಾದ ಭಕ್ತರಿಗೆ ಸಂದೇಶ ಕಳುಹಿಸಲಾಗುತ್ತದೆ. ಅವರ ದರ್ಶನದ ದಿನಾಂಕ ಮತ್ತು ಸಮಯವನ್ನು ತಿಳಿಸಲಾಗುತ್ತೆ.

ದೆಟಿಟಿಡಿ ವೆಬ್‌ಸೈಟ್‌, ಮೊಬೈಲ್ ಅಪ್ಲಿಕೇಶನ್ ಮತ್ತು ಸರ್ಕಾರಿ ವಾಟ್ಸಾಪ್ ಸೇವೆಗಳ ಮೂಲಕ ನೋಂದಣಿ ಮಾಡಬಹುದಾಗಿದ್ದು ವೈಕುಂಠ ದ್ವಾರ ದರ್ಶನದ ಸಮಯದಲ್ಲಿ ಭಕ್ತರಿಗೆ ಸುಮಾರು 182 ಗಂಟೆಗಳ ಕಾಲ ಭಗವಂತನ ದರ್ಶನದ ಅವಕಾಶ ಸಿಗಲಿದೆ. ಸಾಮಾನ್ಯ ಭಕ್ತರಿಗೆ 164 ಗಂಟೆಗಳ ದರ್ಶನ ಸಮಯವನ್ನು ನಿಗದಿಪಡಿಸಲಾಗುವುದು ಎಂದು ಟಿಟಿಡಿ ಅಧ್ಯಕ್ಷರು ಘೋಷಿಸಿದ್ದಾರೆ.