Home Temple Kadakol Rathotsava: ಕಡಕೋಳ ಜಾತ್ರೆಯಲ್ಲಿ ರಥದ ಚಕ್ರ ಕಟ್ಟಾಗಿ ಅವಘಡ

Kadakol Rathotsava: ಕಡಕೋಳ ಜಾತ್ರೆಯಲ್ಲಿ ರಥದ ಚಕ್ರ ಕಟ್ಟಾಗಿ ಅವಘಡ

Hindu neighbor gifts plot of land

Hindu neighbour gifts land to Muslim journalist

Kadakol Rathotsava: ಯಡ್ರಾಮಿ ತಾಲೂಕಿನ ಕಡಕೋಳ ಮಡಿವಾಳೆಶ್ವರ ಜಾತ್ರೆಯ ಮಹಾರಥೋತ್ಸವದ (Kadakol Rathotsava) ವೇಳೆ ತೇರಿನ ಆ್ಯಕ್ಸೆಲ್ (Axle Break) ಮುರಿದು ರಥೋತ್ಸವ ಅರ್ಧಕ್ಕೆ ಮೊಟಕುಗೊಂಡಿರುವ ಘಟನೆ ನಡೆದಿದೆ‌. ಸಂಜೆ ರಥೋತ್ಸವಕ್ಕೆ ಚಾಲನೆ ನೀಡಿದ್ದ ರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದ್ದು, ಮಠದ ಎದುರಿನಿಂದ ತೇರು 20 ಮೀಟರ್ ಸಾಗುವಷ್ಟರಲ್ಲಿ ರಥದ ಆ್ಯಕ್ಸೆಲ್ ಮುರಿದ ಹಿನ್ನೆಲೆ ಅವಘಡದ ಬೆನ್ನಲ್ಲೇ ಪೋಲಿಸ್ ಇಲಾಖೆ ಎಚ್ಚೆತ್ತು ಭಕ್ತರನ್ನು ಸುರಕ್ಷಿತವಾಗಿ ಚದುರಿಸಿದ್ದಾರೆ.

ದೇವಸ್ಥಾನ ಸಮೀತಿಯಿಂದ ರಥದ ಬುಡಕ್ಕೆ ಕಲ್ಲು, ಮರದ ತುಂಡು ಜೋಡಿಸಿ ಬಿಳದಂತೆ ಕ್ರಮ ಜರುಗಿಸಲಾಯಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಸುಪ್ರಸಿದ್ಧವಾಗಿರೋ ಕಡಕೋಳ ಮಡಿವಾಳೇಶ್ವರರು ಪ್ರತಿ ವರ್ಷವೂ ಸರಾಗವಾಗಿ ಸಾಗುತ್ತಿದ್ದ ರಥೋತ್ಸವಕ್ಕೆ ಈ ಬಾರಿ ಕಡಕೋಳ ಗ್ರಾಮ ಪಂಚಾಯತಿ ತನಕ ಎಳೆದು ಮರಳಿ ಮಠದತ್ತ ಬರಬೇಕಿದ್ದಾಗ ಅವಘಡ ನಡೆದಿದೆ.ಇನ್ನೂ ರಥೋತ್ಸವ ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತರಿಗೆ ಅರ್ಧಕ್ಕೆ ನಿಂತ ರಥೋತ್ಸವ ಭಕ್ತರ ನಿರಾಸೆಯಾಗಿದೆ.