Home News ಚೀನಾದ ಐಷರಾಮಿ ಸ್ಕೂಟರ್ ಭಾರತದಲ್ಲಿ ಬಿಡುಗಡೆ! ಶ್ರೀಮಂತವಾಗಿದೆ ಈ ಗಾಡಿ ವೈಶಿಷ್ಟ್ಯ!!!!

ಚೀನಾದ ಐಷರಾಮಿ ಸ್ಕೂಟರ್ ಭಾರತದಲ್ಲಿ ಬಿಡುಗಡೆ! ಶ್ರೀಮಂತವಾಗಿದೆ ಈ ಗಾಡಿ ವೈಶಿಷ್ಟ್ಯ!!!!

Hindu neighbor gifts plot of land

Hindu neighbour gifts land to Muslim journalist

zontes 350d chinese scooter : ಸ್ಕೂಟರ್‌ಗಳು ಭಾರತದಲ್ಲಿ (india )ಹೆಚ್ಚಿನ ಹವಾ ಸಾಧಿಸಿದೆ. ಸದ್ಯ ದೂರದ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲು ಅಡ್ಜಸ್ಟ್‌ಏಬಲ್ ವಿಂಡ್‌ಸ್ಕ್ರೀನ್ ಪಡೆದಿರುವ ಚೀನಾದ ಬಹುನೀರಿಕ್ಷಿತ ಐಷಾರಾಮಿ ಸ್ಕೂಟರ್ (scooter )ಭಾರತದಲ್ಲಿ ಬಿಡುಗಡೆಯಾಗಲಿದ್ದು, ಉತ್ತಮ ವೈಶಿಷ್ಯಗಳನ್ನು ಒಳಗೊಂಡಿದೆ. ಹೌದು ಚೀನಾದ ಝೊಂಟೆಸ್ ಶೀಘ್ರದಲ್ಲೇ ಐಷಾರಾಮಿ 350D ಸ್ಕೂಟರ್‌ನ್ನು ಲಾಂಚ್ ಮಾಡಲಿದೆ.

ಈಗಾಗಲೇ ಕಳೆದ ತಿಂಗಳು ದೆಹಲಿಯಲ್ಲಿ (dehali)ಮುಕ್ತಾಯಗೊಂಡ ಆಟೋ ಎಕ್ಸ್‌ಪೋದಲ್ಲಿ ‘ಝೊಂಟೆಸ್’ ಕಂಪನಿ 350 ಸಿಸಿ (Zontes 350D chinese scooter) ಮ್ಯಾಕ್ಸಿ-ಸ್ಕೂಟರ್‌ನ್ನು ಬಿಡುಗಡೆ ಮಾಡಿತ್ತು. ಆದರೆ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ ಮತ್ತು ಈ ಸ್ಕೂಟರ್ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿರಲಿದೆ.

ಈ ನೂತನ ಝೊಂಟೆಸ್ 350D ಸ್ಕೂಟರ್ ವೈಶಿಷ್ಟ್ಯ ಇಂತಿವೆ :

• ಝೊಂಟೆಸ್ 350D ಸ್ಕೂಟರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 349 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 36 hp ಪವರ್ ಹಾಗೂ 38 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೆ, ಈ ಸ್ಕೂಟರ್, 2,025 ಎಂಎಂ ಉದ್ದ ಹಾಗೂ 780 ಎಂಎಂ ಅಗಲವಿದೆ. ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್)ನೊಂದಿಗೆ ಫ್ರಂಟ್, ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, 15 ಇಂಚಿನ ಅಲಾಯ್ ವೀಲ್ಸ್ ಪಡೆದುಕೊಂಡಿದೆ.

• TFT ಇನ್ಸ್ಟ್ರುಮೆಂಟ್ ಡಿಸ್ಪ್ಲೇ, TPMS (ಟೈರ್-ಪ್ರೆಜರ್ ಮಾನಿಟರಿಂಗ್ ಸಿಸ್ಟಮ್), ಟ್ರಾಕ್ಷನ್ ಕಂಟ್ರೋಲ್, ಕೀಲೆಸ್ ಸ್ಟಾರ್ಟ್-ಸ್ಟಾಪ್, ಎಲೆಕ್ಟ್ರಾನಿಕ್ ಕೀ, ಲಾಕ್ ಹಾಗೂ 2 ಫಾಸ್ಟ್ ಚಾರ್ಜಿಂಗ್ USB ಪಾಯಿಂಟ್‌ಗಳನ್ನು ಹೊಂದಿದೆ.

• ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಬಿಎಂಡಬ್ಲ್ಯೂ ಸಿ 400 ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ರೂ.10,74,904 ಆನ್ -ರೋಡ್ ಬೆಲೆಯಲ್ಲಿ ಸಿಗಲಿದೆ. 350 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿದ್ದು, 33.5 bhp ಪವರ್, 35.25 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 12.8 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ.

ನೂತನ ಬಿಎಂಡಬ್ಲ್ಯೂ ಸಿ 400 GT ಸ್ಕೂಟರ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ನೊಂದಿಗೆ ಡುಯೆಲ್ ಡಿಸ್ಕ್ ಬ್ರೇಕ್ ಪಡೆದುಕೊಂಡಿದೆ. ಬರೋಬ್ಬರಿ 214 ಕೆಜಿ ತೂಕವಿದ್ದು, LED ಹೆಡ್‌ಲೈಟ್, LED ಟರ್ನ್ ಇಂಡಿಕೇಟರ್‌, ಕೀ ಲೆಸ್, 6.5-ಇಂಚಿನ TFT ಸ್ಕ್ರೀನ್, ಬ್ಲೂಟೂತ್ ಸೇರಿದಂತೆ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ಐಷಾರಾಮಿ ಸ್ಕೂಟರ್ ಆಗಿರುವುದರಿಂದ ಬಹುತೇಕ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ.

ಇಕೋ ಮತ್ತು ಸ್ಪೋರ್ಟ್ ಎಂಬ ಎರಡು ರೈಡಿಂಗ್ ಮೋಡ್‌ ಆಯ್ಕೆಗಳನ್ನು ಈ ಸ್ಕೂಟರ್ ಹೊಂದಿದ್ದು, ಭಾರತದ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಆದರೆ, ಯಾವಾಗ ಎಂಬ ಬಗ್ಗೆ ಕಂಪನಿ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇದೊಂದು ಐಷಾರಾಮಿ ಸ್ಕೂಟರ್ ಆಗಿರುವುದರಿಂದ ಸುಮಾರು 3 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ :  ಸ್ಟೈಲಿಷ್‌ ಲುಕ್‌ನೊಂದಿಗೆ ಹೀರೋ ವಿಡಾ ಎಲೆಕ್ಟ್ರಿಕ್‌ ಸ್ಕೂಟರ್‌ ಲಾಂಚ್‌