Home News ಈ ಸ್ಮಾರ್ಟ್ ಫೋನ್ ಎಲ್ಲರ ಮನಗೆಲ್ಲೋದು ಖಂಡಿತ | 2023 ರಲ್ಲಿ ಪಕ್ಕಾ ಸೌಂಡ್ ಮಾಡೋ...

ಈ ಸ್ಮಾರ್ಟ್ ಫೋನ್ ಎಲ್ಲರ ಮನಗೆಲ್ಲೋದು ಖಂಡಿತ | 2023 ರಲ್ಲಿ ಪಕ್ಕಾ ಸೌಂಡ್ ಮಾಡೋ ಫೋನ್ ಇದು |

Hindu neighbor gifts plot of land

Hindu neighbour gifts land to Muslim journalist

ಈಗಾಗಲೇ ಸಾಕಷ್ಟು ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುತ್ತಲೇ ಇದೆ. ಒಂದೊಂದು ಬ್ರಾಂಡ್’ನ ಹೊಸ ಹೊಸ ಸ್ಟೈಲಿಶ್ ಮಾದರಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲಿದೆ. ಈ ಪಟ್ಟಿಗೆ ಈಗ ಮತ್ತೊಂದು ಸೇರ್ಪಡೆ ಆಗಿದೆ. ಚೀನಾದ ಶಿಯೋಮಿ ಕಂಪೆನಿಯ ಶಿಯೋಮಿ Civi 3 ಸ್ಮಾರ್ಟ್‌ಫೋನ್‌ ಈಗಾಗಲೇ ಸಾಕಷ್ಟು ಸೌಂಡ್‌ ಮಾಡ್ತಿದೆ. ಈ ಹೊಸ ಸ್ಮಾರ್ಟ್‌ಫೋನ್‌ 2023 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ಸಾದ್ಯತೆಯಿದೆ. ಬಿಡುಗಡೆಗೂ ಮುನ್ನವೇ ವಿವಿಧ ಕಾರಣಗಳಿಂದ ಈ ಫೋನ್‌ ಸದ್ದು ಮಾಡ್ತಿದೆ!!

ಹೌದು, ಶಿಯೋಮಿ Civi 3 ಸ್ಮಾರ್ಟ್‌ಫೋನ್‌ ಭಾರಿ ಸಂಚಲನ ಸೃಷ್ಟಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅಲ್ಲದೆ ಇದರ ಫೀಚರ್ಸ್‌ ಕಾರಣಗಳಿಂದಾಗಿಯೂ ಫೋನ್‌ ಪ್ರಿಯರ ಗಮನಸೆಳೆಯುವುದರಲ್ಲಿ ಎರಡು ಮಾತಿಲ್ಲ. ಇದರ ಪ್ರೊಸೆಸರ್‌ ವಿಚಾರ ಇದೀಗ ಎಲ್ಲೆಡೆ ಸಂಚಲನ ಸೃಷ್ಟಿಸುವ ಮೂಲಕ ಈ ಫೋನ್‌ ಮಾರುಕಟ್ಟೆಯಲ್ಲಿ ದೂಳೆಬ್ಬಿಸುವ ಸೂಚನೆ ನೀಡಿದೆ.ಇದೀಗ ಇಡೀ ಮಾರುಕಟ್ಟೆಯೆ ಸಂಚಲನಗೊಳ್ಳುವಂತ ಸುದ್ದಿಯೊಂದು ಹೊರಬಿದ್ದಿದೆ. ಅದರಂತೆ ಶಿಯೋಮಿ Civi 3 ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 8200 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ.

ಶಿಯೋಮಿ Civi 3 ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಜೊತೆಗೆ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿರಬಹುದು ಎನ್ನಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಡೈಮೆನ್ಸಿಟಿ 8200 ಚಿಪ್‌ಸೆಟ್‌ ಅನ್ನು ಜೊತೆಗೆ 8GB RAM ಮತ್ತು 256 GB ವರೆಗಿನ ಇಂಟರ್‌ ಸ್ಟೋರೇಜ್‌ ಆಯ್ಕೆಯೊಂದಿಗೆ ಬರಬಹುದು ಎಂದು ಅಂದಾಜಿಸಲಾಗಿದೆ.

ಇನ್ನು, ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಹೇಗಿದೆ ಅಂತೀರಾ.. ಶಿಯೋಮಿ Civi 3 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ. ಇದರಲ್ಲಿ 64ಮೆಗಾಪಿಕ್ಸೆಲ್‌ ಸೆನ್ಸಾರ್‌ ಮೇನ್ ಕ್ಯಾಮೆರಾ,16 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಮತ್ತು 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ಸೆಲ್ಫಿ ಕ್ಯಾಮೆರಾದೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ

80W ವೇಗದ ಚಾರ್ಜಿಂಗ್‌ಗೆ ಬೆಂಬಲದ ಜೊತೆಗೆ 5000mAh ಬ್ಯಾಟರಿಯನ್ನೂ ಈ ಸ್ಮಾರ್ಟ್‌ಫೋನ್‌ ಹೊಂದಿರಲಿದೆ ಎನ್ನುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್‌ನ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ. ಆದರೆ ಈ ಫೋನ್‌ನ ಫೀಚರ್ಸ್‌, ಬೆಲೆಯ ವಿವರಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗುವ ಸಾಧ್ಯತೆಯಿದೆ.

ಇನ್ನು ಕಳೆದ ವರ್ಷ ಎಂಟ್ರಿ ನೀಡಿದ್ದ ಶಿಯೋಮಿ Civi 2 ಸ್ಮಾರ್ಟ್‌ಫೋನ್‌ ಕೂಡ ಆಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿತ್ತು. ಈ ಸ್ಮಾರ್ಟ್‌ಫೋನ್‌ 6.55 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಇದು 120Hz ರಿಫ್ರೆಶ್ ರೇಟ್‌ ಮತ್ತು 240Hz ಟಚ್ ಸ್ಯಾಂಪ್ಲಿಂಗ್‌ ರೇಟ್‌ ಅನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ನ ಮುಖ್ಯ ಕ್ಯಾಮೆರಾ ಪಡೆದಿದೆ. ಇದು ಕೂಡ ಡ್ಯುಯಲ್‌ ಸೆಲ್ಫಿ ಕ್ಯಾಮೆರಾಗಳನ್ನು ಪಡೆದಿದೆ. ಇದು 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 67W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್‌ ಐಸ್ ಬ್ಲೂ, ಪಿಂಕ್, ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.