Home Technology WhatsApp app : ವಾಟ್ಸಪ್ ಬಳಕೆದಾರರೇ ಹುಷಾರ್‌..! ನಿಮಗೂ ಸರ್ಕಾರದಿಂದ ಉಚಿತ 239 ರೂ. ಫೋನ್...

WhatsApp app : ವಾಟ್ಸಪ್ ಬಳಕೆದಾರರೇ ಹುಷಾರ್‌..! ನಿಮಗೂ ಸರ್ಕಾರದಿಂದ ಉಚಿತ 239 ರೂ. ಫೋನ್ ‍ಹಾಗೂ ರೀಚಾರ್ಜ್ʼ ಮೆಸೆಜ್‌ ಬಂದಿದ್ಯಾ? ಇದೊಂದು ಮಹಾ ವಂಚನೆ

Users of WhatsApp

Hindu neighbor gifts plot of land

Hindu neighbour gifts land to Muslim journalist

Users of WhatsApp : ಇತ್ತೀಚೆಗೆ ದಿನಗಳಲ್ಲಿ ಸ್ಮಾರ್ಟ್​ಫೋನ್ ಇಲ್ಲದ ಜನರೇ ಇಲ್ಲದಂತಾಗಿದೆ. ಅದೇ ರೀತಿ ಪ್ರತಿಯೊಬ್ಬರ ಸ್ಮಾರ್ಟ್​ಫೋನ್​ನಲ್ಲೂ ಒಂದು ಮೆಸೇಜಿಂಗ್ ಅಪ್ಲಿಕೇಶನ್ ಇದೆ ಎಂದು ಹೇಳಿದರೆ ಅದು ವಾಟ್ಸಪ್. ಹೌದು, ವಾಟ್ಸಪ್ ವಿಶ್ವದಲ್ಲಿ ಅತಿ ಹೆಚ್ಚು ಬಳಕೆಯಾಗುವ ವೇಗದ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ.

ಈ ಅಪ್ಲಿಕೇಶನ್ ಭಾರತದಲ್ಲಿಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಅತಿಯಾಗಿ (Users of WhatsApp) ಬಳಕೆದಾರರನ್ನು ಹೊಂದಿರುವ ವಾಟ್ಸಪ್‌ ಮೂಲಕ ಹೊಸ ವಂಚನೆ ಹಾದಿಯನ್ನು ಖದೀಮರು ಹೊಂದಿದ್ದಾರೆ. ಇದೀಗ ವಾಟ್ಸಪ್‌ನಲ್ಲಿ ಅದೇಷ್ಟೋ ಸಂದೇಶಗಳು ರವಾನೆ ಆಗುತ್ತಲೇ ಇರುತ್ತದೆ ನಿಮ್ಮ ಬ್ಯುಸಿ ಶೇಡ್ಯೂಲ್‌ನಲ್ಲಿ ಅಪ್ಪಿತಪ್ಪಿಯೂ ವಾಟ್ಸಪ್‌ ಗೆ ಬರುವ ಎಲ್ಲ ಸಂದೇಶಗಳಿಗೂ ಕ್ಲಿಕ್‌ ಮಾಡೋದು ಡೇಂಜರ್‌, ನಿಮ್ಮ ಖಾತೆಗೆ ಕಳ್ಳರು ಎಂಟ್ರಿ ಕೊಡಬಹುದು. ಹಾಗಾಗಿ ಇನ್ಮುಂದೆ ವಾಟ್ಸಪ್‌ ಬಳಕೆ ಮಾಡುವವರೇ ಎಚ್ಚರ ವಹಿಸಬೇಕಾಗಿದೆ.

ರಿಚಾರ್ಜ್‌ ಆಸೆಯ ನೆಪದಲ್ಲಿ ಖತರ್ನಾಕ್‌ ಕಳ್ಳರ ತೆಕ್ಕೆಗೆ ಬೀಳಬೇಡಿ. ಅರೇ ಯಾಕೆ ಹೇಳ್ತಿದ್ದಾರೆ ಅಂತಾ ಯೋಚನೆ ಮಾಡ್ತಿದ್ದೀರಾ? ನಿಜವಾಗಿಯೂ ವಂಚಕರ ಹಾವಳಿ ಹೆಚ್ಚಾಗಿದೆ ಅದರಲ್ಲೂ ಕಳ್ಳರು ವಂಚನೆಗಾಗಿ ವಾಟ್ಸಪ್‌ನ ಹೊಸ ದಾರಿಯನ್ನು ಹಿಡಿದ್ದಾರೆ. ನಿಮ್ಮ ಮೊಬೈಲ್‌ ಫೋನ್‌ಗೆ ಸರ್ಕಾರದ ಹೆಸರಲ್ಲಿ ಉಚಿತ ಫೋನ್ ‍& ರೀಚಾರ್ಜ್ ನೆಪದಲ್ಲಿ ಮೆಸೇಜ್‌ ಬರುವಂತೆ ಹೊಸ ವಂಚನೆ ಪ್ಲಾನ್‌ ಶುರು ಮಾಡಿಕೊಂಡಿದ್ದಾರೆ ಎಂದು ಬಹಿರಂಗವಾಗಿದೆ

ಅದರಲ್ಲೂ ಕ್ಷಣಾಮಾತ್ರದಲ್ಲಿ ಹಣ ವರ್ಗಾವಣೆ ಮಾಡಬಹುದಾಗ ಡಿಜಿಟಲ್ ಬ್ಯಾಂಕಿಂಗ್‌ ಹೆಚ್ಚಳವಾಗುತ್ತಿದ್ದಂತೆ ಒಂದಲ್ಲ ಒಂದು ರೀತಿಯಲ್ಲಿ ವಂಚಕರ ಸಂಖ್ಯೆ ಜಾಸ್ತಿಯಾಗುತ್ತಿದೆ . ದಿನದಿಂದ ದಿನಕ್ಕೆ ನಕಲಿ ವಾಟ್ಸಪ್‌ ಮೆಸೇಜ್‌ ಮಾಡುವ ಮೂಲಕ ಅಮಾಯಕರು ವಂಚನೆಗೆ ಒಳಗಾಗುತ್ತಿದ್ದಾರೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೊಸ ವಂಚನೆಯೊಂದು ಶುರುವಾಗಿದ್ದು, ಸರ್ಕಾರ ಭಾರತೀಯ ಬಳಕೆದಾರರಿಗೆ 239 ರೂ. ಮೌಲ್ಯದ ಉಚಿತ ಫೋನ್ ಹಾಗೂ ರೀಚಾರ್ಜ್ ಅನ್ನು ನೀಡುತ್ತಿದೆ ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ರೀಚಾರ್ಜ್ ಆಗಲಿದೆ ಎಂದು ಹೇಳುವ ಹೊಸ ಮೋಸದ ಸಂದೇಶಗಳನ್ನು ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ. ಹಾಗಾಗಿ ವಾಟ್ಸಪ್‌ ಬಳಕೆದಾರರು ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ. ಈ ಮಾಹಿತಿ ನಿಮಗೊಂದು ಕಿವಿ ಮಾತಾಗಿರುವುದಂತೂ ನಿಜ.