Home Technology ಯಾರಿಗೂ ತಿಳಿಯದಂತೆ ವಾಟ್ಸಪ್ ಗ್ರೂಪ್ ನಿಂದ ಹೊರ ಬರುವುದು ಹೇಗೆ !??

ಯಾರಿಗೂ ತಿಳಿಯದಂತೆ ವಾಟ್ಸಪ್ ಗ್ರೂಪ್ ನಿಂದ ಹೊರ ಬರುವುದು ಹೇಗೆ !??

Hindu neighbor gifts plot of land

Hindu neighbour gifts land to Muslim journalist

ಈಗಿನ ಕಾಲದಲ್ಲಿ ಜನಪ್ರಿಯ ಮೆಸೇಜಿಂಗ್ ಪ್ಲಾಟ್‍ಫಾರ್ಮ್ ವಾಟ್ಸಪ್ ಬಳಕೆ ಮಾಡದೆ ಇರುವವರು ಯಾರೂ ಇಲ್ಲ. ಅದಲ್ಲದೆ ಈ ಆ್ಯಪ್ ತಿಂಗಳಿಗೊಮ್ಮೆ ಅಪ್ಡೇಟ್ ಆಗುತ್ತಾ ಇರುತ್ತದೆ. ಅದೇ ರೀತಿ ಮತ್ತೆ ವಾಟ್ಸಾಪ್ ಅಪ್ಡೇಟ್ ಆಗಿದ್ದು, ಈ ಬಾರಿ ಹೊಸ ವೈಶಿಷ್ಟ್ಯದೊಂದಿಗೆ ಮೂಡಿಬಂದಿದೆ.

ಈ ಆ್ಯಪ್‍ನಲ್ಲಿ ಗ್ರೂಪ್ ಮಾಡುವುದರಿಂದ ಅದರಲ್ಲಿ ಬರುವ ಕೆಲವು ಸಂದೇಶಗಳು ಕಿರಿಕಿರಿ ಉಂಟು ಮಾಡುತ್ತಿರುತ್ತದೆ. ಆದರೆ ನಾವು ಅದರಿಂದ ನಿರ್ಗಮಿಸಲು ಆಗುತ್ತಿರುವುದಿಲ್ಲ. ಆದರೆ ಈಗ ವಾಟ್ಸಪ್ ಇದಕ್ಕೊಂದು ಸರಳ ಮಾರ್ಗ ಕೊಟ್ಟಿದೆ. ಒಂದು ವೇಳೆ ನಮಗೆ ಗ್ರೂಪ್‍ನಲ್ಲಿ ಇರಲು ಇಷ್ಟವಿಲ್ಲದೇ ಅಲ್ಲಿಂದ ನಿರ್ಗಮಿಸಿದರೆ ಗ್ರೂಪ್ ಆಡ್ಮಿನ್‍ಗೆ ಬಿಟ್ಟು ಬೇರೆ ಯಾರಿಗೂ ತಿಳಿಯದಂತೆ ಮಾಡಲಾಗುತ್ತದೆ.

WABetaInfo ಪ್ರಕಾರ, ಈ ಅಪ್ಲಿಕೇಶನ್ ಇನ್ನು ಸ್ವಲ್ಪದಿನಗಳಲ್ಲಿ ಅಪ್ಡೇಟ್ ಆಗುತ್ತೆ. ಇದರ ಹೊಸ ವೈಶಿಷ್ಟ್ಯವೆಂದರೆ, ವಾಟ್ಸಪ್ ಬಳಕೆದಾರರು ಗುಂಪನ್ನು ತೊರೆದಾಗ, ನಿರ್ಗಮನದ ಬಗ್ಗೆ ಗ್ರೂಪ್ ಆಡ್ಮಿನ್‍ಗೆ ಮಾತ್ರ ತಿಳಿಯುತ್ತದೆ. ಇತರ ಬಳಕೆದಾರರಿಗೆ ಯಾವುದೇ ರೀತಿಯಲ್ಲೂ ಗೊತ್ತಾಗುವುದಿಲ್ಲ ಎಂದು ಹೇಳಿದೆ.

ಪ್ರಸ್ತುತ, ಬಳಕೆದಾರರು ಗುಂಪಿನಿಂದ ನಿರ್ಗಮಿಸಿದಾಗ, ವಾಟ್ಸಪ್ ಗ್ರೂಪ್‍ನಲ್ಲಿರುವ ಎಲ್ಲ ಸದಸ್ಯರಿಗೂ ನೋಟಿಫಿಕೇಷನ್ ಹೋಗುತ್ತೆ. ಇದನ್ನು ಮೊದಲು ಬೀಟಾದಲ್ಲಿ ಪ್ರಯೋಗಿಸಿ ನಂತರ ವಾಟ್ಸಪ್‍ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿ ಉಲ್ಲೇಖಿಸಿದೆ. ಇತ್ತೀಚೆಗೆ, ಮೆಸೇಜಿಂಗ್ ಪ್ಲಾಟ್‍ಫಾರ್ಮ್ ಎಮೋಜಿ, ಫೈಲ್‍ಗಳು ಮತ್ತು ಗುಂಪುಗಳನ್ನು ಒಳಗೊಂಡಂತೆ ಹೊಸ ವೈಶಿಷ್ಟ್ಯಗಳನ್ನು ಹೊರತರಲಾಗುವುದು ಎಂದು ಹೇಳಿದೆ.