Home Technology ಅಬ್ಬಾ ಭರ್ಜರಿ ಇಳಿಕೆ ಕಂಡ ವಿವೋ ಸಂಸ್ಥೆಯ ಈ ಫೋನ್‌ | ಮಿಸ್‌ ಮಾಡಿದರೆ ಸಂಕಟ...

ಅಬ್ಬಾ ಭರ್ಜರಿ ಇಳಿಕೆ ಕಂಡ ವಿವೋ ಸಂಸ್ಥೆಯ ಈ ಫೋನ್‌ | ಮಿಸ್‌ ಮಾಡಿದರೆ ಸಂಕಟ ಪಡುತ್ತೀರಿ

Hindu neighbor gifts plot of land

Hindu neighbour gifts land to Muslim journalist

ವಿವೋ ಕಂಪೆನಿ ಮಾರುಕಟ್ಟೆಯಲ್ಲಿ ತನ್ನದೇ ಚಾಪು ಮೂಡಿಸಿದ್ದು ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ ಅದರಲ್ಲೂ ವಿವೋ Y01 ಸ್ಮಾರ್ಟ್‌ಫೋನ್‌ ಗಮನ ಸೆಳೆದಿತ್ತು . ಈ ಫೋನ್ ಇದೀಗ ಭರ್ಜರಿ ಬೆಲೆ ಇಳಿಕೆ ಪಡೆದಿದ್ದು, ಇದೀಗ ಗ್ರಾಹಕರು ಫೋನಿನತ್ತ ಮತ್ತೆ ತಿರುಗಿ ನೋಡುವಂತೆ ಆಗಿದೆ.

ಇದೀಗ ಜನಪ್ರಿಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಅಮೆಜಾನ್ ನಲ್ಲಿ ವಿವೋ ಕಂಪೆನಿಯ ವಿವೋ Y01 ಸ್ಮಾರ್ಟ್‌ಫೋನ್‌ 2 GB RAM + 32 GB ವೇರಿಯಂಟ್‌ ಬೆಲೆಯಲ್ಲಿ ಈಗ 38% ರಿಯಾಯಿತಿ ಪಡೆದಿದ್ದು, 7,999 ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಪೋನಿನ ದರವು 12,999 ರೂ. ಆಗಿತ್ತು. ಹಾಗೆಯೇ ಕೆಲವು ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಹಾಗೂ ಇಎಮ್‌ಐ ಸೌಲಭ್ಯದ ಆಯ್ಕೆಗಳು ಸಹ ಗ್ರಾಹಕರಿಗೆ ಲಭ್ಯವಾಗಲಿವೆ.

ವಿವೋ Y01 ಸ್ಮಾರ್ಟ್‌ಫೋನ್‌ 6.51 ಇಂಚಿನ HD + ಡಿಸ್‌ಪ್ಲೇ ಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಐ ಪ್ರೊಟೆಕ್ಷನ್ ಮೋಡ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಸ್ಕ್ರೀನ್‌ 8.28 ಮಿಮೀ ಥಿಕ್‌ನೆಸ್‌ ಹೊಂದಿರುವ ಪ್ಲಾಸ್ಟಿಕ್‌ನಿಂದ ಸುತ್ತುವರಿಯಲ್ಪಟ್ಟಿದೆ. ಜೊತೆಗೆ ಫೇಸ್ ವೇಕ್ ಅನ್ನು ಹೊಂದಿದೆ.

ಅದಲ್ಲದೆ ವಿವೋ Y01 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹಿಲಿಯೋ P35 ಪ್ರೊಸೆಸರ್ ಬಲವನ್ನು ಹೊಂದಿದ್ದು, ಮಲ್ಟಿ ಟರ್ಬೊ 3.0 ನಿಂದ ನಡೆಸಲಾಗುತ್ತಿದೆ. ಇದು ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 2 GB RAM ಮತ್ತು 32 GB ಇಂಟರ್‌ ಸ್ಟೋರೇಜ್‌ ಬಲವನ್ನು ಒಳಗೊಂಡಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಬೆಂಬಲದೊಂದಿಗೆ 1 TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ವಿವೋ Y01 ಸ್ಮಾರ್ಟ್‌ಫೋನ್‌ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಮುಖದ ಸೌಂದರ್ಯಕ್ಕೆ ಸಮಯ ನಷ್ಟದಂತಹ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಬೇಸಿಕ್ ಎಡಿಟಿಂಗ್ ಆಯ್ಕೆಗಳು ಸಹ ಇವೆ.

ವಿವೋ Y01 ಸ್ಮಾರ್ಟ್‌ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು ಇದಕ್ಕೆ ಪೂರಕವಾಗಿ ಉತ್ತಮ ಚಾರ್ಜಿಂಗ್ ಸೌಲಭ್ಯ ಸಹ ನೀಡಿದೆ. ಇದು ಯಾವುದೇ ಗ್ಲಿಚ್ ಇಲ್ಲದೆ ಗಂಟೆಗಳ ಬಳಕೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ ಅನ್ನು ಬೆಂಬಲಿಸಲಿದೆ.

ವಿವೋ Y01 ಸ್ಮಾರ್ಟ್‌ಫೋನ್‌ ಇದೀಗ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ನಿಮಗೆ ಎಲಿಗಂಟ್ ಬ್ಲ್ಯಾಕ್ ಮತ್ತು ಸಫೈರ್ ಬ್ಲೂ ಕಲರ್‌ ಆಯ್ಕೆಗಳಲ್ಲಿ ದೊರೆಯಲಿದೆ.