Home Technology Toyota Booking Stop : ಅರ್ಬನ್ ಕ್ರೂಸರ್ ಹೈರೈಡರ್, ಟೊಯೊಟಾ ಇನ್ನೋವಾ ಹೈಕ್ರಾಸ್ ರೂಪಾಂತರಗಳ ಬುಕ್ಕಿಂಗ್...

Toyota Booking Stop : ಅರ್ಬನ್ ಕ್ರೂಸರ್ ಹೈರೈಡರ್, ಟೊಯೊಟಾ ಇನ್ನೋವಾ ಹೈಕ್ರಾಸ್ ರೂಪಾಂತರಗಳ ಬುಕ್ಕಿಂಗ್ ಸ್ಥಗಿತ!! ಕಾರಣವೇನು?

Toyota Booking Stop

Hindu neighbor gifts plot of land

Hindu neighbour gifts land to Muslim journalist

Toyota Booking Stop : ದೇಶದಲ್ಲಿ ಟೊಯೊಟಾದ ಇನ್ನೋವಾ ಹೈಕ್ರಾಸ್ ಎಂಪಿವಿ (Toyota Innova hycross MPV) ಹಾಗೂ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿ (urban cruiser hyryder suv) ಸಾಕಷ್ಟು ಜನಪ್ರಿಯತೆ ಗಳಿಸಿದೆ. ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾದ ಇನ್ನೋವಾ ಹೈಕ್ರಾಸ್ ಎಂಪಿಎ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿಗಳ ಬೆಲೆ ಭಾರತದ ಮಾರುಕಟ್ಟೆಯಲ್ಲಿ ಜಾಸ್ತಿಯಿದ್ದು, ನಿರ್ವಹಣಾ ವೆಚ್ಚ ಮಾತ್ರ ತುಂಬಾ ಕಡಿಮೆ. ಆದರೂ ಬೇಡಿಕೆ ಹೆಚ್ಚೇ ಇದೆ. ಆದರೆ, ಇದೀಗ ಈ ರೂಪಾಂತರಗಳ ಬುಕ್ಕಿಂಗ್ ಸ್ಥಗಿತಗೊಳಿಸಲಾಗುತ್ತಿದೆ (Toyota Booking Stop).

ಸದ್ಯ ಭಾರೀ ಬೇಡಿಕೆ ಇರುವ ಟೊಯೊಟಾ ಇನ್ನೋವಾ ಹೈಕ್ರಾಸ್, ಅರ್ಬನ್ ಕ್ರೂಸರ್ ಹೈಬ್ರಿಡ್ ರೂಪಾಂತರಗಳ ಬುಕ್ಕಿಂಗ್ ಸ್ಥಗಿತಗೊಳಿಸಲಾಗುತ್ತಿದೆ. ಕಾರಣ, ಗ್ರಾಹಕರಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು ತಕ್ಷಣದಿಂದಲೇ ಜಾರಿಗೆ ಬರುವಂತೆ ಇನ್ನೋವಾ ಹೈಕ್ರಾಸ್ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ಹೈಬ್ರಿಡ್ ರೂಪಾಂತರಗಳ ಬುಕ್ಕಿಂಗ್ ಅನ್ನು ಟೊಯೊಟಾ ನಿಲ್ಲಿಸಿದೆ. ಆದರೆ, ಈ ಕುರಿತಂತೆ ಕಂಪನಿಯಿಂದ ಯಾವುದೇ ಅಧಿಕೃತ ಪತ್ರಿಕಾ ಪ್ರಕಟಣೆ ಬಂದಿಲ್ಲ. ಕೇವಲ ಡೀಲರ್‌ಗಳು ಮಾತ್ರ ಇದನ್ನು ಖಚಿತಪಡಿಸಿದ್ದಾರೆ.

ಟೊಯೊಟಾ ಕಂಪನಿ ಮಾರುತಿ ಸುಜುಕಿಯೊಂದಿಗೆ ಸಹಭಾಗಿತ್ವ ಹೊಂದಿದೆ. ಸದ್ಯ ಮಾರುತಿ ಸುಜುಕಿಯ ಗ್ಯಾಂಡ್ ವಿಟಾರಾ ಎಸ್‌ಯುಎ ತಯಾರಿಕೆಯಲ್ಲಿದೆ. ಹಾಗಾಗಿ ಇನ್ನೋವಾ ಹೈಕ್ರಾಸ್, ಅರ್ಬನ್ ಕ್ರೂಸರ್ ಹೈಲೈಡರ್ ಹೈಬ್ರಿಡ್ ರೂಪಾಂತರಗಳ ಉತ್ಪಾದನೆಯನ್ನು ನಿಧಾನಗೊಳಿಸಿದೆ. ಇದು ಕೂಡ ತಾತ್ಕಾಲಿಕ ಬುಕ್ಕಿಂಗ್ ಸ್ಥಗಿತಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

ಟೊಯೊಟಾದ ಅರ್ಬನ್ ಕ್ರೂಸರ್ ಹೈರೈಡರ್ ಎಸ್ ಯುವಿ ರೂ.10.48 ಲಕ್ಷದಿಂದ ರೂ.19.49 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. 1.5ಲೀಟರ್ ಮೈಲ್ಡ್ ಹೈಬ್ರಿಡ್, 1.5 ಲೀಟರ್ ಸ್ಟಾಂಗ್ ಹೈಬ್ರಿಡ್ ಎಂಬ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, 9 ಇಂಚಿನ ಟಚ್‌ಸ್ಟೀನ್‌ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅತ್ಯಾಧುನಿಕ ಸನ್ ರೂಫ್ ಪಡೆದಿದೆ. ಇನ್ನು ಸುರಕ್ಷತೆಯ ದೃಷ್ಟಿಯಿಂದ 6 ಏರ್ ಬಾಗ್ ಹೊಂದಿದೆ.

ಇನ್ನೋವಾ ಹೈಕ್ರಾಸ್ ರೂ.18.30 ಲಕ್ಷದಿಂದ ರೂ.28.97 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 174 PS ಪವರ್ ಹಾಗೂ 205 Nm ಪೀಕ್ ಟಾರ್ಕ್, 2.0 ಲೀಟರ್ ಸ್ಟ್ಯಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ 186 PS ಪವರ್, 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆಯಿದ್ದು, e CVT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಇನ್ನೋವಾ ಹೈಕ್ರಾಸ್ 21.1 kmpl ಮೈಲೇಜ್ ನೀಡುತ್ತದೆ.

ಇದನ್ನೂ ಓದಿ: Unsafe Cars in India : ಭಾರತದ ಸುರಕ್ಷಿತವಲ್ಲದ ಏಳು ಕಾರುಗಳ ಲಿಸ್ಟ್‌ ಇಲ್ಲಿದೆ!