Home Technology CNG Car : ವಾಹನ ಖರೀದಿದಾರರೇ, ಇತ್ತ ಗಮನಿಸಿ! CNG ಕಾರು ಖರೀದಿ ಮಾಡುತ್ತೀರಾ? ಇದು...

CNG Car : ವಾಹನ ಖರೀದಿದಾರರೇ, ಇತ್ತ ಗಮನಿಸಿ! CNG ಕಾರು ಖರೀದಿ ಮಾಡುತ್ತೀರಾ? ಇದು ಮುಖ್ಯವಾಗಿ ತಿಳಿದಿರಲಿ!

CNG Car

Hindu neighbor gifts plot of land

Hindu neighbour gifts land to Muslim journalist

CNG Car: ಕಾರು (car) ಖರೀದಿಸಬೇಕಾದರೆ ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿಸಬೇಕು. ನೋಡಲು ಚೆನ್ನಾಗಿದೆ ಒಳ್ಳೆ ಕಲರ್ ಇದೆ ಎಂದು ಖರೀದಿಸಿದರೆ ಕೊನೆಗೆ ತಲೆ ಮೇಲೆ ಕೈ ಹೊತ್ತು ಕೂರಬೇಕಾದಿತು. ಹೆಚ್ಚಾಗಿ, ಬಣ್ಣ (color), ಫೀಚರ್ (feature), ಕೆಲವೊಂದು ವೈಶಿಷ್ಟ್ಯತೆ ನೋಡಿ ಕಾರು ಖರೀದಿಸುತ್ತಾರೆ. ಆದರೆ, CNG car ಖರೀದಿಸುವಾಗ ಕೆಲವೊಂದು ವಿಚಾರ ತಿಳಿದಿರಲಿ. ಈ ಸಲಹೆ ಪಾಲಿಸಿ, ನಂತರ ಕಾರು ಖರೀದಿಸಿ.

ಸಿಎನ್‌ಜಿ ಕಾರನ್ನು ಖರೀದಿಸುವುದರಿಂದ ಪ್ರಯೋಜನಗಳಿದ್ದು, ಸದ್ಯ ಪೆಟ್ರೋಲ್‌ (petrol), ಡೀಸೆಲ್‌ ಬೆಲೆ ಏರಿಕೆಯಾಗಿದೆ. ಹಾಗಾಗಿ ವೆಚ್ಚ ಕಡಿತ ಮಾಡಬಹುದು. ಆದರೆ ಮಾರುಕಟ್ಟೆಯಿಂದ ಸೆಕೆಂಡ್ ಹ್ಯಾಂಡ್ ಸಿಎನ್‌ಜಿ ಕಾರು (second hand CNG car) ಕೊಂಡುಕೊಳ್ಳುವಾಗ ಹೆಚ್ಚು ಗಮನಹರಿಸಿ. ಹಳೆಯ ಸಿಎನ್‌ಜಿ ಕಾರು ಖರೀದಿಸುವಾಗ ಈ ವಿಚಾರ ನೆನಪಿರಲಿ.

CNG ಕಾರು ಖರೀದಿಸುವಾಗ ಗಮನದಲ್ಲಿರಬೇಕಾದ ಅಂಶಗಳು:

• ನೀವು ಬಳಸಿದ ಸಿಎನ್‌ಜಿ ಕಾರನ್ನು ಖರೀದಿಸುವಾಗ ಆ ಕಾರನ್ನು ಸಂಪೂರ್ಣವಾಗಿ ಪರಿಶೀಲಿಸಿ.
• ಅಲ್ಲದೆ, ಸಿಲಿಂಡರ್‌ನ ಗುಣಮಟ್ಟ ಹೇಗಿದೆ ಎಂಬುದನ್ನು ಪರಿಶೀಲಿಸಿ.
• ಕಾರಿನಲ್ಲಿ ಆಫ್ಟರ್ ಮಾರ್ಕೆಟ್ ಸಿಎನ್‌ಜಿ ಕಿಟ್ ಅಳವಡಿಸಿದ್ದರೆ, ಗ್ಯಾಸ್ ಸೋರಿಕೆಯನ್ನು ಪರಿಶೀಲಿಸುವುದು ಅಗತ್ಯವಾಗಿದೆ.
• ಸಿಎನ್‌ಜಿ ಕಾರಿಗೆ ಇಂಧನ ತುಂಬಿಸುವಾಗ ಜಾಗೃತವಹಿಸಿರಿ.
• ಆಫ್ಟರ್ ಮಾರ್ಕೆಟ್ ಸಿ ಎನ್ ಜಿ ಕಿಟ್ ಖರೀದಿಸುವ ಬದಲು, ಪ್ರತಿಷ್ಠಿತ ಕಂಪನಿಯಿಂದ ಫ್ಯಾಕ್ಟರಿ ಅಳವಡಿಸಿದ ಸಿ ಎನ್ ಜಿ ಕಿಟ್ ಇರುವ ಕಾರನ್ನು ಖರೀದಿಸಿರಿ. ಯಾಕಂದ್ರೆ, ಗ್ರಾಹಕರ ಸುರಕ್ಷತೆಗಾಗಿ ಜನಪ್ರಿಯ ಕಂಪನಿಗಳು ಎಂಜಿನ್ ಆರೋಗ್ಯ ಮತ್ತು ಮೈಲೇಜ್ ಬಗ್ಗೆ ವಿಶೇಷ ಕಾಳಜಿ ವಹಿಸುತ್ತವೆ.
• ಹಾಗೇ ಪರಿಣಿತರಿಂದ ಎಂಜಿನ್ ಟ್ಯೂನಿಂಗ್ ಮತ್ತು ಸಿಎನ್‌ಜಿ ಕಿಟ್ ಅನ್ನು ಪರಿಶೀಲಿಸುವುದು ಒಳ್ಳೆಯದು.