

TATA Stryder : ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಹವಾ ಹೆಚ್ಚಿದೆ. ಬೇಡಿಕೆ ಹೆಚ್ಚುತ್ತಿದ್ದಂತೆ ಕಂಪನಿಗಳು ಕೂಡ ನೂತನ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಹಾಗೆಯೇ ಜನಪ್ರಿಯ ಟಾಟಾ ಕಂಪನಿಯು ಸ್ಟ್ರೈಡರ್ ಜೀಟಾ (TATA Stryder) ಹೆಸರಿನ ಹೊಸ ಇ-ಬೈಕ್ ಅನ್ನು ಬಿಡುಗಡೆ ಮಾಡಿದೆ. ನಿಮ್ಮಲ್ಲಿ ಕೇವಲ 10ರೂ. ಇದ್ದರೆ ಸಾಕು ಇದರಲ್ಲಿ 100ಕಿ.ಮೀ. ಪ್ರಯಾಣ ಸುಖಕರವಾಗಿ ಮಾಡಬಹುದು. ಅಬ್ಬಾ!!!. ಹಾಗಿದ್ದರೆ ಇದರ ವಿನ್ಯಾಸ, ವೈಶಿಷ್ಟ್ಯತೆಯ ಬಗ್ಗೆ ತಿಳಿದುಕೊಳ್ಳಲೇಬೇಕು ಅಲ್ವಾ!!!.
ಸ್ಟ್ರೈಡರ್ ಜೀಟಾ ( stryder zeeta ) ಬೈಕ್ ನ ಬೆಲೆ ರೂ.31,999 ಆಗಿದ್ದು, ಇದರ ಮೇಲೆ 20 ರಷ್ಟು ರಿಯಾಯಿತಿ ಲಭ್ಯವಿದೆ. ಹಾಗಾಗಿ ಈ ಬೈಕ್ (bike) ಅನ್ನು ರೂ 25,599 ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ. ಸದ್ಯ ಈ ಸ್ಟ್ರೈಡರ್ ಝೀಟಾ ಇ-ಬೈಕ್ ಅನ್ನು ಆನ್‌ಲೈನ್ ಮೂಲಕ ಖರೀದಿಸಬಹುದಾಗಿದ್ದು, ಶಿಪ್ಪಿಂಗ್ ಉಚಿತವಾಗಿ ಇರಲಿದೆ. ಹಾಗೆಯೇ ಇದರ ಬ್ಯಾಟರಿ ಮತ್ತು ಮೋಟಾರ್ ಗೆ ಎರಡು ವರ್ಷಗಳ ವಾರಂಟಿ ಇರುತ್ತದೆ. ನೋ ಕಾಸ್ಟ್ ಇಎಂಐ ಆಫರ್ ಕೂಡ ಇದೆ.
ಸ್ಟ್ರೈಡರ್ ಹಸಿರು ( green) ಮತ್ತು ಬೂದು ಬಣ್ಣಗಳಲ್ಲಿ ಲಭ್ಯವಿದ್ದು, ಬೈಕ್ ಹಿಂಭಾಗದಲ್ಲಿ 36 V 250 W BLDC ಹಬ್ ಮೋಟಾರ್ ಅನ್ನು ಒಳಗೊಂಡಿದೆ. ಪೆಡಲ್ ಮತ್ತು ಎಲೆಕ್ಟ್ರಿಕ್ ಮೋಡ್‌ನೊಂದಿಗೆ 40 ಕಿಲೋಮೀಟರ್‌ಗಳ ವ್ಯಾಪ್ತಿಯು ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ, ಇದು 25 ಕಿಮೀ ವರೆಗೆ ಚಲಿಸಬಹುದು ಎನ್ನಲಾಗಿದೆ. ಪೆಡಲಿಂಗ್ ಇಲ್ಲದೆಯೇ ಗರಿಷ್ಠ 25 ಕಿ.ಮೀ ಚಲಿಸುತ್ತದೆ. ಪ್ರತಿ ಕಿಲೋಮೀಟರ್‌ಗೆ ಕೇವಲ 10 ಪೈಸೆ ವೆಚ್ಚವಾಗುತ್ತದೆ. ಅಂದರೆ 100 ಕಿಲೋಮೀಟರ್ ಪ್ರಯಾಣಕ್ಕೆ ಕೇವಲ ರೂ.10 ವೆಚ್ಚವಾಗುತ್ತದೆ ಎಂದು ಕಂಪನಿ ಹೇಳಿದೆ.
ಸ್ಟ್ರೈಡರ್ ಝೀಟಾ ಇ-ಬೈಕ್ ಡಿಸ್ಕ್ ಬ್ರೇಕ್, ಆಟೋ ಕಟ್ ಬ್ರೇಕ್ ಹೊಂದಿದ್ದು, 27.5 ಇಂಚಿನ TIG ವೆಲ್ಡೆಡ್ ಸ್ಟೀಲ್ ಫ್ರೇಮ್ ಹಾಗೂ ಇದು ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದೆ. ಇದು
ಸಂಪೂರ್ಣವಾಗಿ ಚಾರ್ಜ್ ಆಗಲು 3 ಗಂಟೆಗಳ ಸಮಯಾವಕಾಶ ತೆಗೆದುಕೊಳ್ಳುತ್ತದೆ. ಸದ್ಯ ಈ ಬೈಕ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸೋದು ಪಕ್ಕಾ!!. ಉಳಿದ ಬೈಕ್ ಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.













