Home Technology Solar Fan: ಈ ಬೇಸಿಗೆಗೆ ಬಂದಿದೆ ನೋಡಿ ಖುಷಿ ಕೊಡೋ ಸೋಲಾರ್‌ ಫ್ಯಾನ್‌! ಇದರ ವೈಶಿಷ್ಟ್ಯ...

Solar Fan: ಈ ಬೇಸಿಗೆಗೆ ಬಂದಿದೆ ನೋಡಿ ಖುಷಿ ಕೊಡೋ ಸೋಲಾರ್‌ ಫ್ಯಾನ್‌! ಇದರ ವೈಶಿಷ್ಟ್ಯ ಅನೇಕ!!!

Solar Fan
Image Source : Vyapar Talks.com

Hindu neighbor gifts plot of land

Hindu neighbour gifts land to Muslim journalist

Solar Fan : ಬಿಸಿ ಗಾಳಿಯನ್ನು ತಡೆಯಲಾಗದೆ ನಾವು ಫ್ಯಾನ್, ಎಸಿ ಯನ್ನು ಬಳಸುತ್ತೇವೆ. ಆದರೆ ಕರೆಂಟ್ ಇಲ್ಲ ಅಂದರೆ ಫ್ಯಾನ್ ಕೂಡ ತಿರುಗಲ್ಲ. ಹಾಗಾಗಿ ಸದಾ ನಿಮ್ಮನ್ನು ತಂಪಾಗಿರಿಸಲು ಬಂದಿದೆ ಸೋಲಾರ್ ಫ್ಯಾನ್. ಹೌದು, ಇನ್ನು ಮುಂದೆ ಕರೆಂಟ್ ಇಲ್ಲ ಅನ್ನೋ ಚಿಂತೆ ಬೇಡ. ಈ ಸೌರಶಕ್ತಿ ಚಾಲಿತ ಫ್ಯಾನ್ (Solar Fan) ಚಲಾಯಿಸಲು ವಿದ್ಯುತ್ ಶಕ್ತಿಯ ಅಗತ್ಯವೇ ಇಲ್ಲ.

ವಿಶೇಷವೆಂದರೆ ಅಗತ್ಯವಿದ್ದಾಗ ನೀವು ಸೋಲಾರ್ ಫ್ಯಾನ್‌ನ ಬ್ಯಾಟರಿಯನ್ನು ವಿದ್ಯುಚ್ಛಕ್ತಿಯನ್ನು ಬಳಸಿ ಚಾರ್ಜ್ ಮಾಡಬಹುದಾಗಿದ್ದು, ಇದು ಕೆಲವೇ ಗಂಟೆಗಳಲ್ಲಿ ಫುಲ್ ಚಾರ್ಜ್ ಆಗುತ್ತದೆ.

ನಿಮ್ಮ ಅನುಕೂಲಕ್ಕೆ ತಕ್ಕಂತೆ ಇದರ ವೇಗವನ್ನು ಹೊಂದಿಸಲು ಬಟನ್ ಸೌಲಭ್ಯವನ್ನೂ ಕೂಡ ಒದಗಿಸಲಾಗಿದೆ. ಒಟ್ಟಿನಲ್ಲಿ ಈ ಸೋಲಾರ್ ಫ್ಯಾನ್ ಅನ್ನು ನೀವು ಎಲ್ಲಿ ಬೇಕಾದರೂ ಬಹಳ ಸುಲಭವಾಗಿ ಅಳವಡಿಸಬಹುದಾಗಿದೆ.

ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್ 12 ವೋಲ್ಟ್ ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ನೇರವಾಗಿ ಸೌರ ಫಲಕಗಳಿಗೆ ಸಂಪರ್ಕಿಸಬಹುದಾಗಿದೆ.

ಈ ಫ್ಯಾನ್ ಅನ್ನು ನೀವು ಮನೆಯಲ್ಲಿ ಮಾತ್ರವಲ್ಲದೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾರು, ಬೈಕ್, ಜೆಸಿಬಿ, ಟ್ಯಾಕ್ಸಿ ಅಥವಾ ಇನ್ನಾವುದೇ ಸ್ಥಳದಲ್ಲಿ ಸೆಟ್ ಮಾಡಬಹುದಾಗಿದೆ. ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್‌ನಲ್ಲಿ ಮೂರು ರೆಕ್ಕೆ ಅಳವಡಿಸಲಾಗಿದೆ. ಈ ರೆಕ್ಕೆಗಳು 1400 ಆರ್‌ಪಿಎಂನಲ್ಲಿ ಸುತ್ತುತ್ತವೆ ಎನ್ನಲಾಗಿದೆ.

ಈ ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್ ಚಲಾಯಿಸಲು ವಿದ್ಯುತ್ ಅಗತ್ಯವಿರುವುದಿಲ್ಲ. ಇದು ವಿದ್ಯುತ್ ಇಲ್ಲದಿದ್ದಾಗಲೂ ಕೂಡ ತಂಪಾದ ಹವಾ ಒದಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್‌ನ ಬುಲೆಟ್ ಅನ್ನು ಅಲ್ಯೂಮಿನಿಯಂನಿಂದ ತಯಾರಿಸಲಾಗಿದ್ದು ಇದರಿಂದ ಫ್ಯಾನ್‌ನಲ್ಲಿ ಸುಮಾರು 4 ರಿಂದ 5 ಗಂಟೆಗಳ ಕಾಲ ಸುಲಭ ಬ್ಯಾಕಪ್ ಲಭ್ಯವಾಗಲಿದೆ.

ಈ ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್ ತುಂಬಾ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದ್ದು, ಇದರ ಬೆಲೆ ಕೇವಲ 294 ರೂಪಾಯಿಗಳು ಮಾತ್ರ. ಆದಕಾರಣ ಈ ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್ ಅನ್ನು ಪ್ರತಿಯೊಬ್ಬರೂ ಖರೀದಿಸಬಹುದಾಗಿದ್ದು, ಇದು ಎಲ್ಲರಿಗೂ ತುಂಬಾ ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಫ್ಯಾನ್ ಆಗಿದೆ.

ಇದನ್ನೂ ಓದಿ: Pocket Fan : ಕರೆಂಟ್ ಇಲ್ಲದಿದ್ದರೂ ತಂಪಾದ ಗಾಳಿ ನಿಮಗೆ ಸದಾ ಲಭ್ಯ! ಇಲ್ಲಿದೆ ಅಗ್ಗದ ಬೆಲೆಯ ಕೂಲ್ ಕೂಲ್ ಫ್ಯಾನ್!!!