Home Technology Bikes Sales: ಖುಷಿಯ ಸುದ್ದಿ, ಕೇವಲ 5 ಸಾವಿರಕ್ಕೆ ಬೈಕ್‌ ಮನೆಗೆ ತನ್ನಿ ಈ ಬೈಕ್‌...

Bikes Sales: ಖುಷಿಯ ಸುದ್ದಿ, ಕೇವಲ 5 ಸಾವಿರಕ್ಕೆ ಬೈಕ್‌ ಮನೆಗೆ ತನ್ನಿ ಈ ಬೈಕ್‌ !

Hindu neighbor gifts plot of land

Hindu neighbour gifts land to Muslim journalist

ಬೈಕ್ ಎಂದರೆ ಎಲ್ಲರಿಗೂ ಇಷ್ಟ. ಯುವಕರಿಗಂತೂ ಬೈಕ್ ಪಂಚ ಪ್ರಾಣ. ಬೈಕ್ ಒಂದು ಇದ್ದರೆ ಆರಾಮವಾಗಿ ಇಷ್ಟ ಬಂದ ಕಡೆ ಟ್ರಾವೆಲ್ ಮಾಡಬಹುದು ಎಂಬುದು ಜನರ ಅಭಿಪ್ರಾಯ. ಹೌದು ಈಗಾಗಲೇ 2022ರ ಡಿಸೆಂಬರ್‌ನಲ್ಲಿ 2,25,443 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಹೀರೋ ಸ್ಪ್ಲೆಂಡರ್ ಮತ್ತೊಮ್ಮೆ ದೇಶದಲ್ಲಿ ಅತಿಹೆಚ್ಚು ಮಾರಾಟವಾದ ಬೈಕ್ ಎಂಬ ಹಿರಿಮೆ ಹೊಂದಿದೆ. ಆದರೆ ಡಿಸೆಂಬರ್ 2021ರ ಮಾರಾಟಕ್ಕೆ ಹೋಲಿಸಿದರೆ ಸ್ಪ್ಲೆಂಡರ್ ಮಾರಾಟದಲ್ಲಿ ಶೇ.0.58ರಷ್ಟು ಕುಸಿತ ಕಂಡುಬಂದಿದೆ. ಅದೇ ರೀತಿ ಹೀರೋ ಮೋಟೋಕಾರ್ಪ್‌ನ ಮತ್ತೊಂದು ಬೈಕ್ ಅತಿಹೆಚ್ಚು ಮಾರಾಟದ ವಿಷಯದಲ್ಲಿ 2ನೇ ಸ್ಥಾನದಲ್ಲಿದೆ.

ಸದ್ಯ ಕಂಪನಿಯ ಹೀರೋ ಹೆಚ್‌ಎಫ್ ಡಿಲಕ್ಸ್ ಬೈಕ್ ಡಿಸೆಂಬರ್ 2022ರಲ್ಲಿ 1,07,755 ಯುನಿಟ್‌ಗಳನ್ನು ಮಾರಾಟ ಮಾಡಿದೆ. ವಿಶೇಷವೆಂದರೆ ಡಿಸೆಂಬರ್ 2021ಕ್ಕೆ ಹೋಲಿಸಿದರೆ ಈ ಬೈಕ್ ಸುಮಾರು ಶೇ.30ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಡಿಸೆಂಬರ್ 2021ರಲ್ಲಿ ಈ ಬೈಕಿನ ಕೇವಲ 24675 ಯುನಿಟ್‌ಗಳು ಮಾರಾಟವಾಗಿವೆ. ಹೀರೋ ಎಚ್‌ಎಫ್ ಡಿಲಕ್ಸ್ ಮಾರಾಟದಲ್ಲಿ ಹೋಂಡಾ ಆಕ್ಟಿವಾವನ್ನು ಹಿಂದಿಕ್ಕಿ ಈ ಬಾರಿ 3ನೇ ಸ್ಥಾನಕ್ಕೆ ತಲುಪಿದೆ.

ಹೀರೋ ಹೆಚ್‌ಎಫ್ ಡಿಲಕ್ಸ್ ಬೈಕ್‌ನ ವಿಶೇಷತೆ :

  • ಈ ಬೈಕ್ 97.2 ಸಿಸಿ 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ಕಿಕ್ ಸ್ಟಾರ್ಟ್ ಮತ್ತು ಸೆಲ್ಫ್ ಸ್ಟಾರ್ಟ್ ಆವೃತ್ತಿಗಳಲ್ಲಿ ಬರುತ್ತದೆ. ಇದಕ್ಕೆ i3S ತಂತ್ರಜ್ಞಾನವನ್ನು ನೀಡಲಾಗಿದೆ, ಇದು ಶೇ.9ರಷ್ಟು ಇಂಧನವನ್ನು ಉಳಿಸುತ್ತದೆ.

ಹೀರೋ ಹೆಚ್‌ಎಫ್ ಡಿಲಕ್ಸ್ ಬೈಕ್‌ನ ಮೂಲ ರೂಪಾಂತರದ ಬೆಲೆ ಸುಮಾರು 60 ಸಾವಿರ ರೂ.ಗಳು. ಈ ಬೆಲೆಯು ಕಿಕ್ ಸ್ಟಾರ್ಟ್ ಡ್ರಮ್ ಅಲಾಯ್ ವೀಲ್ ರೂಪಾಂತರವಾಗಿದೆ. ನೀವು ಈ ರೂಪಾಂತರವನ್ನು EMIನಲ್ಲಿ ಸಹ ಖರೀದಿಸಬಹುದು. ನೀವು ಅದನ್ನು 5000 ರೂ. ಡೌನ್ ಪೇಮೆಂಟ್‍ನಲ್ಲಿ ಖರೀದಿಸಬಹುದು. ಇದಕ್ಕೆ ಬ್ಯಾಂಕ್ ಬಡ್ಡಿ ದರವು ಶೇ.9:30ರಷ್ಟು ಮತ್ತು ಸಾಲದ ಅವಧಿಯು 3 ವರ್ಷ ಆಗಿರುತ್ತದೆ. ನೀವು ಪ್ರತಿ ತಿಂಗಳು ಕೇವಲ 2,120 ರೂ.ಗಳ EMI ಪಾವತಿಸಬೇಕಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.

ಬೈಕ್ ಖರೀದಿಸುವ ಯೋಚನೆ ಇದ್ದಲ್ಲಿ ನೀವು ಈ ಮೇಲಿನಂತೆ ಕಡಿಮೆ ಮೊತ್ತದಲ್ಲಿ ಹೀರೋ ಹೆಚ್‌ಎಫ್ ಡಿಲಕ್ಸ್ ಬೈಕನ್ನು ಖರೀದಿಸಬಹುದಾಗಿದೆ.