

MG Air EV: ಭಾರತದಲ್ಲಿ (India )ಅತ್ಯಂತ ಕೈಗೆಟುಕುವ ದರದಲ್ಲಿ ಕಂಪನಿ ಎಲೆಕ್ಟ್ರಿಕ್ ಕಾರನ್ನು(electric car)ಬಿಡುಗಡೆ ಮಾಡಲು ಯೋಚಿಸುತ್ತಿದೆ. ಯಾಕೆಂದರೆ ಭಾರತದಲ್ಲಿ ಇಂಧನ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಸರಕಾರ (Government )ಕೂಡ ಇಂಧನ ದರ ನಿಯಂತ್ರಣದ ಬಗ್ಗೆ ಮೌನ ತಾಳಿದೆ. ಆದ್ದರಿಂದ ಕಂಪನಿ ಇಂಧನ ಬೆಲೆಗಳನ್ನು ನಿಭಾಯಿಸಲು ಜನರ ಪರ್ಯಾಯ ಆಯ್ಕೆಗಳಾಗಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಗೊಳಿಸುತ್ತಿದೆ.
ಹೌದು ಇದೀಗ ಭಾರತದಲ್ಲಿ ಬಿಡುಗಡೆಯಾಗಲಿದೆ ಭಾರೀ ಕಡಿಮೆ ಬೆಲೆಯ MG ಎಲೆಕ್ಟ್ರಿಕ್ ಕಾರು. ಸದ್ಯ ಎಂಜಿ ಮೋಟಾರ್ಸ್, ಅತ್ಯಂತ ಕಡಿಮೆ ಬೆಲೆಯ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲೇ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಈ ಕಾರಿಗೆ ಎಂಜಿ ಏರ್ ಇವಿ (MG Air EV) ಎಂದು ಹೆಸರಿಡಲಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ವುಲಿಂಗ್ ಏರ್ ಇವಿ (Wulling Air EV)ಯನ್ನು ಹೋಲುತ್ತದೆ. ಈ ಹಿಂದೆ, ದೇಶೀಯ ಮಾರುಕಟ್ಟೆಯಲ್ಲಿ (Market )ಮಾರಾಟವಾಗುತ್ತಿದ್ದ ಪುಟ್ಟ ಕಾರು ರೇವಾದಂತೆ ಕಾಣಿಸುತ್ತದೆ.
ಹೌದು ಈಗಾಗಲೇ ಸೋರಿಕೆಯಾಗಿರುವ ಚಿತ್ರಗಳಲ್ಲಿ ಎಂಜಿ ಏರ್ ಇವಿಯ ಒಳಭಾಗವು ಉತ್ತಮ ನೋಟ ಒಳಗೊಂಡಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ವುಲಿಂಗ್ ಏರ್ ಇವಿಗೆ ಬಹುತೇಕ ಹೋಲಿಕೆಯಾಗುತ್ತದೆ ಎಂದು ಹೇಳಬಹುದು.
ವಿನ್ಯಾಸದ ದೃಷ್ಟಿಯಿಂದಲೂ ಏರ್ ಇವಿ ಆಕರ್ಷಕವಾಗಿದೆ. ಫ್ರಂಟ್ ಎಲ್‌ಇಡಿ ಲೈಟ್ ಬಾರ್, ಡುಯೆಲ್ ಬ್ಯಾರೆಲ್ ಹೆಡ್ ಲೈಟ್ ಹಾಗೂ ಚಾರ್ಜಿಂಗ್ ಪಾಯಿಂಟ್ ಅನ್ನು ಹೊಂದಿದ್ದು, ಹೊಸ ಖರೀದಿದಾರರನ್ನು ಆಕರ್ಷಿಸುವ ಎಲ್ಲಾ ಸಾಧ್ಯತೆಗಳು ಇವೆ. ಇದರ ಡ್ಯಾಶ್ ಬೋರ್ಡ್ ಮೇಲೆ ಟ್ವಿನ್-ಡಿಸ್ಪ್ಲೇ ಸೆಟಪ್ ಇದೆ. ಇನ್ಫೋಟೈನ್ಮೆಂಟ್ ಯುನಿಟ್ ಕೆಳಗೆ ಎಸಿ ವೆಂಟ್ ಗಳಿವೆ.
ಈ ಕಾರು ಅತಿ ಕಡಿಮೆ ಬೆಲೆಯಲ್ಲಿ ದೇಶೀಯ ಗ್ರಾಹಕರಿಗೆ ಖರೀದಿಗೆ ಸಿಗಬಹುದು. ಇಷ್ಟು ಕಡಿಮೆ ದರದಲ್ಲಿ ಯಾವ ಕಾರುಗಳು ಖರೀದಿಗೆ ದೊರೆಯುವುದಿಲ್ಲ. ಇದರ ಬೆಲೆ (price )ಎಕ್ಸ್ ಶೋರೂಂ ಪ್ರಕಾರ, ರೂ.8 ಲಕ್ಷ ಇರಬಹುದು ಅಂದಾಜಿಸಲಾಗಿದೆ. ಆದರೆ ಎಂಜಿ ಏರ್ ಇವಿ ಬಿಡುಗಡೆ ಆದ ಮೇಲೆಯೇ ಆ ವಿವರಗಳು (details)ತಿಳಿಯಲಿದೆ.
ಈ ಪುಟ್ಟ ಎಲೆಕ್ಟ್ರಿಕ್ ಕಾರು, ಗ್ರಾಹಕರಿಗೆ (customer)ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಅವುಗಳೆಂದರೆ, 17.3kWh ಹಾಗೂ 26.7kWh. ಚಿಕ್ಕ ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು 200 km ರೇಂಜ್ ನೀಡಿದರೆ, ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, 300 km ರೇಂಜ್ ನೀಡುವ ಸಾಮರ್ಥ್ಯ ಪಡೆದಿರಲಿದ್ದು, ಈ ಇವಿ ಸ್ಟ್ಯಾಂಡರ್ಡ್ ಮತ್ತು ಫಾಸ್ಟ್ ಚಾರ್ಜಿಂಗ್ ಆಯ್ಕೆಗಳನ್ನು ಒಳಗೊಂಡಿರಲಿದೆ.
ಆದರೆ ಈಗಾಗಲೇ ಬಿಡುಗಡೆಯಾಗಿರುವ ಟಾಟಾದ ಬಹುನೀರಿಕ್ಷಿತ ಟಿಯಾಗೊ ಇವಿ ಹಾಗೂ ಸಿಟ್ರಸ್ eC3 ಕಾರುಗಳ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಈ ಎಂಜಿ ಏರ್ ಇವಿ ಭಾರತದ ಮಾರುಕಟ್ಟೆಯಲ್ಲಿ ಯಾವಾಗ ಲಾಂಚ್ ಆಗಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ಈ ವರ್ಷದ ಕೊನೆಯೊಳಗೆ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಹೊಸ ಎಂಜಿ ಏರ್ ಇವಿ ಎಲೆಕ್ಟ್ರಿಕ್ ಕಾರು ಗಾತ್ರದಲ್ಲಿ ತುಂಬಾ ಚಿಕ್ಕದಾಗಿದ್ದು , ಇದು ಕೇವಲ ಎರಡು ಬಾಗಿಲುಗಳೊಂದಿಗೆ ಬರುವುದರ ಜೊತೆಗೆ 4 ಜನರಿಗೆ ಆಸನ ವ್ಯವಸ್ಥೆಯನ್ನು ಹೊಂದಿದೆ. ಆದರೆ, ಬೇರೆ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಬಿಡುಗಡೆ ಆಗುವವರೆಗೆ ಕಾತುರದಿಂದ ಕಾಯಬೇಕಿದೆ.













