Home News Maruti cars: ಮಾರುಕಟ್ಟೆಗೆ ಬರಲಿದೆ 40KM ವರೆಗೆ ಮೈಲೇಜ್ ನೀಡೋ ಸ್ಟ್ರಾಂಗ್ ಹೈಬ್ರಿಡ್ ಕಾರು ;...

Maruti cars: ಮಾರುಕಟ್ಟೆಗೆ ಬರಲಿದೆ 40KM ವರೆಗೆ ಮೈಲೇಜ್ ನೀಡೋ ಸ್ಟ್ರಾಂಗ್ ಹೈಬ್ರಿಡ್ ಕಾರು ; ಇದರ ವೈಶಿಷ್ಟ್ಯತೆಗೆ ನೀವು ಖಂಡಿತ ಮಾರುಹೋಗುತ್ತೀರಾ!!

Hindu neighbor gifts plot of land

Hindu neighbour gifts land to Muslim journalist

Maruti strong hybrid cars: ಮಾರುಕಟ್ಟೆಯಲ್ಲಿ ಕಾರುಗಳು ಭರ್ಜರಿ ಪೈಪೋಟಿ ನಡೆಸುತ್ತಿವೆ. ಕಂಪನಿಗಳು ನೂತನ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಕೆಲವು ದಿನಗಳ ಹಿಂದೆ ಟಾಟಾ(Tata) ಮುಂದಿನ 2 ವರ್ಷಗಳಲ್ಲಿ ಸುಮಾರು ಐದು ಕಾರು(car)ಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿತ್ತು. ಹಾಗೆಯೇ ಇದೀಗ ಜನಪ್ರಿಯ ಕಾರು(car) ತಯಾರಿಕಾ ಕಂಪನಿ ಮಾರುತಿ(maruti) ಅತ್ಯುತ್ತಮ ಮೈಲೇಜ್ ಜೊತೆಗೆ ಭಾರೀ ಅಗ್ಗದ ಬೆಲೆಗೆ ನಾಲ್ಕು ಹೊಸ ಕಾರುಗಳನ್ನು ಪರಿಚಯಿಸಲಿದೆ.

ಕಂಪನಿಯು ಹೆಚ್ಚು ಮೈಲೇಜ್ ನೀಡುವ ಸ್ಟ್ರಾಂಗ್ ಹೈಬ್ರಿಡ್ ಕಾರುಗಳನ್ನು (Maruti strong hybrid cars) ಪರಿಚಯಿಸಲು ಮುಂದಾಗಿದೆ. ಸದ್ಯ ಮಾರುತಿ ಬಿಡುಗಡೆ ಮಾಡಲಿರುವ ಆ ನಾಲ್ಕು ಕಾರುಗಳು ಯಾವುದು? ವೈಶಿಷ್ಟ್ಯತೆ ಹೇಗಿದೆ? ಇವೆಲ್ಲದರ ಮಾಹಿತಿ‌ ತಿಳಿಯೋಣ.

ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್(maruti Swift) ಮತ್ತು ಡಿಜೈರ್(maruti dizire): ಮಾರುತಿಯ ಈ ಎರಡು ಮಾದರಿಗಳು 1.2-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಸ್ವಿಫ್ಟ್ ಮತ್ತು ಡಿಜೈರ್ ಒಂದು ಲೀಟರ್ ಪೆಟ್ರೋಲ್ನಲ್ಲಿ 35 ರಿಂದ 40 ಕಿ.ಮೀ. ಮೈಲೇಜ್ ನೀಡಲಿದೆ. ಹಾಗೆಯೇ ಈ ಕಾರುಗಳು ಟೊಯೊಟಾ(Toyota)ದ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ಮಾರುತಿ 7-ಸೀಟರ್ ಎಸ್‌ಯುವಿ(maruti 7 seater suv) : ಮಾರುತಿ ಸುಜುಕಿ 2023ರ ಅಂತ್ಯದ ಸಮಯದಲ್ಲಿ ಗ್ರ್ಯಾಂಡ್ ವಿಟಾರಾ ಆಧಾರಿತ 7 ಆಸನಗಳ ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆ ಎನ್ನಲಾಗಿದೆ. ಹೊಸ ಮಾರುತಿ 7-ಸೀಟರ್ ಎಸ್‌ಯುವಿ 1.5L K15C ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಮತ್ತು 1.5L ಅಟ್ಕಿನ್ಸನ್ ಸೈಕಲ್ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ಗಳೊಂದಿಗೆ ಲಭ್ಯವಾಗಲಿದೆ. ಹಾಗೆಯೇ ಒಂದು ಲೀಟರ್ ಪೆಟ್ರೋಲ್(petrol) ನಲ್ಲಿ ಸುಮಾರು 27.97km ವರೆಗೆ ಮೈಲೇಜ್ ನೀಡಲಿದೆ ಎಂದು ಹೇಳಲಾಗಿದೆ.

ಮಾರುತಿಯ 7-ಸೀಟರ್ MPV(maruti 7 seater MPV) : ಇದು ಟೊಯೋಟಾ ಇನ್ನೋವಾ ಹೈಕ್ರಾಸ್(Toyota Innova hycross) ಅನ್ನು ಆಧರಿಸಿದೆ. ಪವರ್‌ಟ್ರೇನ್, ವೈಶಿಷ್ಟ್ಯಗಳು ಮತ್ತು ಪ್ಲಾಟ್‌ಫಾರ್ಮ್ ಎರಡರಲ್ಲೂ ಒಂದೇ ರೀತಿ ಇರಲಿದೆ. ಇದರ ಬೆಲೆ 20 ರಿಂದ 30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಕಾರು ವಿಭಿನ್ನ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎನ್ನಲಾಗಿದೆ. ಸದ್ಯ ಈ ಕಾರುಗಳು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ.ನ