Home Technology ಐದು ಕಾರು ಲಾಂಚ್ ಮಾಡಿದ ಮಾರುತಿ!

ಐದು ಕಾರು ಲಾಂಚ್ ಮಾಡಿದ ಮಾರುತಿ!

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿಗೆ ಕಾರು ಮಾರಾಟ ಕಂಪನಿಗಳಲ್ಲಿ ಸ್ಪರ್ಧೆ ಉಂಟಾಗಿದೆ. ತಾನು ಮೇಲು ತಾನು ಮೇಲೆಂದು ಕಂಪನಿಗಳು ಹೊಸತನಗಳೊಂದಿದೆ ಮಾರುಕಟ್ಟೆಗೆ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಒಂದೇ ಬಾರಿ ಮಾರುತಿ ತನ್ನ ಐದು ಹೊಸ ಕಾರು ಲಾಂಚ್ ಮಾಡಿದೆ.

ಹೌದು 40 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಮಾರುತಿ ತನ್ನ ಪ್ರೀಮಿಯಂ ರಿಟೇಲ್ ನೆಟ್‌ವರ್ಕ್ ನೆಕ್ಸಾ ಮೂಲಕ ಮಾರಾಟವಾಗುವ ಎಲ್ಲಾ ಐದು ಕಾರುಗಳ ಬ್ಲಾಕ್ ಎಡಿಶನ್ ಬಿಡುಗಡೆ ಮಾಡಿದೆ.

ಮಾರುತಿ ಸುಜುಕಿಯ 40 ನೇ ವಾರ್ಷಿಕೋತ್ಸವವನ್ನು ಆಚರಣೆ ಜೊತೆಗೆ ನೆಕ್ಸಾದ 7 ನೇ ವಾರ್ಷಿಕೋತ್ಸವವೂ ಹೌದು. ಈ ಸಂದರ್ಭದಲ್ಲಿ ನೆಕ್ಸಾದ ನೆಕ್ಸಾ ಬ್ಲ್ಯಾಕ್ ಎಡಿಷನ್ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.

ನೆಕ್ಸಾ ಬ್ಲಾಕ್ ಎಡಿಷನ್ ಕಾರುಗಳು ನೆಕ್ಸಾದ ಮೇಲೆ ಗ್ರಾಹಕರು ಇಟ್ಟಿರುವ ನಿರೀಕ್ಷೆಯ ಸಂಕೇತ ಎಂದು ಅವರು ಹೇಳಿದ್ದಾರೆ. ಗ್ರಾಹಕರು ಈ ವಾಹನಗಳಿಗೆ ಅಳವಡಿಸಲಾದ ಸೀಮಿತ ಆವೃತ್ತಿಯ ಬಿಡಿಭಾಗಗಳನ್ನು ಸಹ ಪಡೆಯಬಹುದು.

Nexa ಬ್ಲಾಕ್ ಆವೃತ್ತಿಯನ್ನು ಇಗ್ನಿಸ್‌ನ ಝೀಟಾ ಮತ್ತು ಆಲ್ಫಾ ರೂಪಾಂತರಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇದರ ಹೊರತಾಗಿ, ಸಿಯಾಜ್‌ನ ಎಲ್ಲಾ ರೂಪಾಂತರಗಳು XL6 ನ ಆಲ್ಫಾ ಮತ್ತು ಆಲ್ಫಾ + ರೂಪಾಂತರಗಳಲ್ಲಿ ಮತ್ತು ಗ್ರ್ಯಾಂಡ್ ವಿಟಾರಾದ ಝೀಟಾ, ಝೀಟಾ+, ಆಲ್ಫಾ, ಆಲ್ಫಾ+ ರೂಪಾಂತರಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ನೆಕ್ಸಾ ಬ್ಲ್ಯಾಕ್ ಎಡಿಷನ್ ಶ್ರೇಣಿಯ ಬೆಲೆಗಳು ನೆಕ್ಸಾ ಕಾರುಗಳ ಪ್ರಮಾಣಿತ ಶ್ರೇಣಿಗೆ ಅನುಗುಣವಾಗಿರುತ್ತವೆ. ಅಂದರೆ, ಸಾಮಾನ್ಯ ಮಾದರಿಯ ಬೆಲೆಗಳ ರೇಂಜ್ ನಲ್ಲಿಯೇ ಬ್ಲಾಕ್ ಎಡಿಶನ್ ಕೂಡಾ ಇರಲಿದೆ. ಈ ಪೈಕಿ ಇಗ್ನಿಸ್ ನೆಕ್ಸಾದ ಅಗ್ಗದ ಕಾರು ಆಗಿದೆ. ಇದರ ಬೆಲೆ ಕೇವಲ 5.35 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ ಎಂಬ ಮಾಹಿತಿ ಇದೆ.

ಸದ್ಯ Nexa ಹೊಸ ಬ್ಲಾಕ್ ಆವೃತ್ತಿಯು ಇಗ್ನಿಸ್, ಬಲೆನೊ, ಸಿಯಾಜ್, XL6 ಮತ್ತು ಗ್ರಾಂಡ್ ವಿಟಾರಾವನ್ನು ಒಳಗೊಂಡಿದೆ. ಈ ಎಲ್ಲಾ ಕಾರುಗಳು ಈಗ ಹೊಸ ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಶೇಡ್‌ನಲ್ಲಿ ಲಭ್ಯವಿರಲಿದೆ. ಪ್ರೀಮಿಯಂ ಮೆಟಾಲಿಕ್ ಬ್ಲ್ಯಾಕ್ ಕಲರ್ ಸ್ಕೀಮ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ ಎನ್ನಲಾಗಿದೆ. ಟಾಟಾ ಮೋಟಾರ್ಸ್ ಈಗಾಗಲೇ ತನ್ನ ಹಲವು ಮಾದರಿಗಳ ಡಾರ್ಕ್ ಆವೃತ್ತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆದರೆ, ಮಾರುತಿ ಇಲ್ಲಿಯವರೆಗೆ ವಿಶೇಷ ಡಾರ್ಕ್ ಆವೃತ್ತಿಯನ್ನು ಹೊಂದಿರಲಿಲ್ಲ ಎಂದು ಮಾಹಿತಿ ನೀಡಲಾಗಿದೆ.